ಪುಟ:ಸತ್ಯವತೀ ಚರಿತ್ರೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

a, ana, 4ಧyyyyyw wwwreywwy ಇn la-Hydu, ky ನ ಎರಡನೆಯ ಪ್ರಕರಣ ಸತ್ಯವತಿ-ಅತ್ತೆಮ್ಮನವರು ಬಾಗಿಲಹತ್ತಿರ ಇದ್ದರೆ ನಾನು ಹೇಗೆ ಬರಲಿ ? ನಾರಾ-ಬಂದರೇನು ! ಆಕೆ ನಿನ್ನನ್ನು ಅಗಿದು ನುಂಗುವಳೋ ? ಸತ್ಯವತಿ-ನೀವು ಬಲುಬಡವಾಗಿರುವಿರಿ, ಈ ಹೊತ್ತು ದಾರಿಯಲ್ಲಿ ಆಯಾ ಸಪಟ್ಟಿರಬಹುದು. - ನಾರಾಯಣಮೂರ್ತಿ-ರಾತ್ರಿಕಾಲಗಳಲ್ಲಿ ಬಲುಹೊತ್ತು ಓದುವುದರಿಂದ ಸ್ವಲ್ಪ ಬಡವಾಗಿದ್ದೇನೆ ಅಲ್ಲದೆ ಭೋಜನಶಾಲೆಗಳಲ್ಲಿ ನನಗೆ ಸರಿಯಾಗಿ ಊಟವಾ ಗುವುದಿಲ್ಲ, ನೀನೂ ಒಡವಾಗಿದ್ದೀಯೇಕೆ ? ಸತ್ಯವತಿ-ನಾನು ಮೊದಲು ಮಾತ್ರ ದಪ್ಪನಾಗಿದ್ದನೇ ? ಯಾವಾಗಲೂ ಒಂದೇ ವಿಧವಾಗಿಯೇ ಇದ್ದೇನೆ. ನಾನು ದೊಡ್ಡವಳಾಗಿ ಒಕ್ಕಲುತನಮಾಡುವುದಕ್ಕೆ ಬಂದಮೇಲೂ ನೀವು ಪರದೇಶದಲ್ಲಿ ಕಷ್ಟ ಪಡುತ್ತಿದ್ದರೆ ಯಾವ ಕೆಲಸಕ್ಕೂ ಬಾರದೆ, ನಾನು ಇದ್ದರೂ ಇಲ್ಲದವಳೇ ಆಗಿದ್ದೇನೆ. ನಾರಾಯಣಮೂರ್ತಿ-ಇದೋ ಇಲ್ಲಿಗೆ ಬಂದಿರುವೆನಲ್ಲ ? ಈಗ ನೀನು ನನಗೆ ಎಷ್ಟು ಮೈ ಬರುವಹಾಗೆ ಮಾಡುತ್ತೀಯೋ ನೋಡೋಣ! - ಸತ್ಯವತಿ-ನೀವು ಬರುವಾಗ ನಮ್ಮ ಅಣ್ಣಯ್ಯನನ್ನು ನೋಡಿದ್ದೀರಾ ? ಮನೆಯಲ್ಲಿ ನಮ್ಮವರೆಲ್ಲರೂ ಕ್ಷೇಮವಾಗಿರುವರೇ ? ನಾರಾ--ನಾನು ಈ ಊರಿಗೆ ಪ್ರಯಾಣ ಮಾಡುವುದಕ್ಕೆ ಮೊದಲನೆಯ ದಿನ ನಿಮ್ಮಣ್ಣನನ್ನು ಕಂಡಿದ್ದೆ, ಅವನು ಓದುವುದನ್ನು ಬಿಟ್ಟು ಕೆಲಸಕ್ಕೆ ಸೇರಿಕೊಂಡನು. ನಿಮ್ಮವರೆಲ್ಲರೂ ಚೆನ್ನಾಗಿರುವರೆಂದು ಮೊನ್ನೆ ಕಾಗದ ಬಂತಂತೆ. ಸತ್ಯವತಿ-ನಮ್ಮ ತಂದೆಯವರು ಹದಿನೇಳು ದಿನಗಳ ಕೆಳಗೆ ನನಗೆ ಹತ್ತು ರೂಪಾಯಿಗಳನ್ನು ಕಳುಹಿಸಿದರು. ಅಂದಿನಿಂದ ಅವರ ವೃತ್ತಾಂತವೇ ತಿಳಿಯದು. ನಾರಾ--ನಮ್ಮತ್ತಿಗೆಯೆಲ್ಲಿ ? ನೋಡಲೇ ಇಲ್ಲ, ನಾನು ಬಂದರೆ ಕಾಣಿ ಸಿಕೊಳ್ಳದೆ ಇರತಕ್ಕವಳಲ್ಲ, ಆಬೀದಿಗೆ ತವರುಮನೆಗೆ ಹೋಗಿದ್ದಾಳೋ ? ಸತ್ಯ - ಇಲ್ಲ, ಮನೆಯಲ್ಲೇ ಇದ್ದಾಳೆ. ಬೆಳಗ್ಗೆ ಅತ್ತೆಯವರು ಏನೋ ಕೊಡೀಪ ಮಾಡಿ, ಸ್ವಲ್ಪ ಬೈದರು, ಅದರಿಂದ ಕೋಪ ಬಂದು, ಹೊತ್ತಾರೆಯಿಂದ ಅನ್ನ ತಿನ್ನದೆ, ಚಿಕ್ಕ ಮನೆಯಲ್ಲಿ ಮುಸುಕಿಟ್ಟು ನೆಲದ ಮೇಲೆ ಮಲಗಿದ್ದಾಳೆ, ನಾನೆಷ್ಟು ಬಗೆಯಾಗಿ ಬೇಡಿಕೊಂಡರೂ ಊಟಕ್ಕೇಳಲಿಲ್ಲ. ಇದುವರೆಗೆ ಆಚಿಕ್ಕ ಮನೆಯಲ್ಲಿಯೇ ಇದ್ದೆನು, ನೀವು ಬಂದು ಕರೆದರೆ ಬರುವಳೋ ಎನೋ ; ಎದ್ದು ಬನ್ನಿ.