ಪುಟ:ಸತ್ಯವತೀ ಚರಿತ್ರೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪ್ರಕರಣ ೩೫

  • * Y & L # ,
  • * * * * * * * * * * * * * * */*/ YY \

ವನ್ನು ಮಾಡಬೇಕು, ನೀವು ಸುಮ್ಮನೆ ಕಾಲಹರಣ ಮಾಡಬೇಡಿ. ಇನ್ನು ನನ್ನ ಮಾತಿಗೆ ಬದಲು ಹೇಳದೆ ಬೇಗ ತೆಗೆದು ಕೊಂಡು ಹೊರಡಿ. ಎಂದು ಬಲಾತ್ಕಾರಪಡಿಸಲು ನಾರಾಯಣಮೂರ್ತಿ ತನಗೆ ಬೇರೆ ಯಾವ ಮಾರ್ಗವೂ ಕಾಣದುದರಿಂದ ವಿಧಿಯಿಲ್ಲದೆ ವ್ಯಸನಪಟ್ಟು ಆ ನಾಲ್ಕು ಕಾಸುಗ ಇನ್ನೂ ತೆಗೆದುಕೊಂಡು ಹೋಗಿ ಮಾರಿ ಹತ್ತು ರೂಪಾಯಿಗಳನ್ನು ಆ ವೈದ್ಯನಿಗೆ ತಂದುಕೊಟ್ಟನು. ಸತ್ಯವತಿ ಅತ್ತೆಗೆ ರೋಗ ಬಂದ ದಿನದಿಂದ ರಾತ್ರಿ ಹಗಲೂ ಮಂಚ ವನ್ನು ಬಿಡದೆ ಸೀನೀರು ಕೊಡುತ್ತಾ ಕೈ ಕಾಲೊತ್ತುತ್ತಾ ತಾಪ ಶಾಂತಿಯಾಗುವಂತೆ ಬೀಸುತ್ತಾ ವೈದ್ಯ ಹೇಳಿದ ಹಾಗೆ ಹೊಟ್ಟೆ ಮುಂತಾದುದನ್ನು ನೋಡುತ್ತಾ ಇದ್ದು ಬೇಕಾದ ಪಟ್ಟುಗಳನ್ನು ಹಾಕುತ್ತಾ ಔಷಧಗಳನ್ನು ಅರೆಯುತ್ತಾ ಮಲಮೂತ್ರಗಳು ಮಂಚದಮೇಲೆಯೇ ಆದರೂ ಅಸಹ್ಯ ಪಡದೆ ಸಿಡುಗುಟ್ಟಿದೆ ಆ ಬಟ್ಟೆ ತೆಗೆದು ಬೇರೆ ಬಟ್ಟೆ ಹಾಕುತ್ತಾ ಬೇಕಾದಾಗ ಹಿಡಿದು ಕುಳ್ಳಿರಿಸಿ ಮಲಗಿ ಸುತ್ತಾ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಿಂತ ಅತಿಶಯವಾಗಿ ನೋಡಿಕೊಳ್ಳು ತಿದ್ದಳು. ಸಾವಿತ್ರಿಯು ಪಥ್ಯ ಮಾನಗಳನ್ನು ನೋಡಿಕೊಳ್ಳುತ್ತಾ ಮನೆಯವರಿ ಗೆಲ್ಲಾ ಊಟವಾದಮೇಲೆ ಸ್ವಲ್ಪ ಹೊತ್ತು ತಾಯಿಯ ಹತ್ತಿರ ಕುಳಿತು ಕೊಂಡು ವ್ಯಸನಪಡುತ್ತಿದ್ದಳು. ಸೀತೆಗೆ ಸತ್ಯವತಿಯಲ್ಲಿ ಬಹಳ ಪ್ರೀತಿಯಿದ್ದಿತು, ಆದರೆ ಅವಳಿಗೆ ಬಾಲ್ಯ, ತಾಯಿಯ ದೇಹಸ್ಥಿತಿ ಅವಳಿಗೆ ಚೆನ್ನಾಗಿ ತಿಳಿಯುತ್ತಿರಲಿಲ್ಲ. ಆದರೂ ಔಷಧ ಅರೆಯುವುದೇ ಮುಂತಾದ ಕೆಲಸಗಳಲ್ಲಿ ಅವಳು ಅತ್ತಿಗೆಗೆ. ಸಹಾಯ ಮಾಡುತ್ತಿದ್ದಳು, ಸುಂದರಮ್ಮ ನು--ಯರಾದರೂ ಬಂದರೆ ಗೆಳೋ ಎಂದು ಅಳುತ್ತಾ ಬರುತ್ತಿದ್ದಳೇ ಹೊರತು ಅತ್ತೆಗೆ ಸ್ವಲ್ಪವಾದರೂ ಉಪಚರಿಸುತ್ತಿ ತಿರಲಿಲ್ಲ, ಯಶೋದಮ್ಮನಿಗೆ ಅಂತ್ಯ ಕಾಲ ಸಮೀಪಿಸುತ್ತಿದ್ದಿತು. ಆಕೆ ಬದು ಕುವಳೆಂಬ ಆಸೆಯನ್ನು ಎಲ್ಲರೂ ಬಿಟ್ಟುಬಿಟ್ಟರು. ಎಲ್ಲರೂ ಗಾಬರಿಯಾಗಿ ವೈದ್ಯನನ್ನು ಕರೆತರಬೇಕೆಂದು ಓಡಿಹೋದರು. ಆಗ ಶರಭಯ್ಯನು ಮುಖವನ್ನು ಜೋಲು ಹಾಕಿದನು ಆಗ ಒಬ್ಬ ವೈದ್ಯನು ಬಂದು ನನಗೆ ಎರಡು ರೂಪಾಯಿ ಕೊಟ್ಟರೆ ಎರಡು ಗಳಿಗೆಯೊಳಗಾಗಿ ವಾಸಿಮಾಡುತ್ತೇನೆಂದು ಹೇಳಿದನು. ಕಣ್ಣು ಗಳಲ್ಲಿ ನೀರು ಸುರಿಸುತ್ತಾ ಬೀಸಣಿಗೆಯನ್ನು ಕೈಯಲ್ಲಿ ಹಿಡಿದುಕೊಂಡು `ಬೀಸು ತಿದ್ದ ಸತ್ಯವತಿ ತನ್ನ ಸೆರಗಿನಲ್ಲಿದ್ದ ರೂಪಾಯಿಗಳನ್ನು ಬಿಚ್ಚಿ ಕೈಯಲ್ಲಿಟ್ಟು ಔಷಧ ಹಾಕಿಸಿದಳು. ಆಮೇಲೆ ಅವರು ಯಾವ ಔಷಧದಿಂದಾದರೂ ವಾಸಿ ಯಾದೀತೋ ಎನೋ ಎಂಬ ಚಾಪಲ್ಯದಿಂದ ಔಷಧ ಕೊಡುವವರು ವೈದ್ಯ