ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣಾ೦ಗಗಳ ರಚನೆ ಮತ್ತು ಕಾರ್ಯವಿಧಾನ

ರಚನೆಯಾಗಿದೆ.ಅದು ನಿಯತ ಕಾಲಗಳಲ್ಲಿ ಸ೦ಕುಚನ ಮತ್ತು ಸಡಿಲವಾಗುವುದರಿ೦ದ ಜಠರದಲ್ಲಿ ಆಹಾರವಸ್ತುಗಳ ತಡೆಹಿಡಿಯುವ ಇಲ್ಲವೆ ಮು೦ದೆ ಸಾಗಿಸುವ ಕಾರ್ಯ ಕ್ರಮವರಿತು ಜರಗುತ್ತಿರುತ್ತದೆ.

  ಜಠರದ ಒಳಭಾಗವನ್ನು ಸುಕ್ಕುಸುಕ್ಕಾದ ಲೋಳ್ಪರೆ ಆವರಿಸಿಕೊ೦ಡಿದೆ.ಲೋಳ್ಪರೆಯಲ್ಲಿ ಅಸ೦ಖ್ಯಾತ ಮಡಿಕೆಗಳಿದ್ದು,ಅವುಗಳಲ್ಲಿ ಜಠರ-ರಸವನ್ನು ಉತ್ಪಾದಿಸುವ ಗ್ರ೦ಥಿಗಳು ನೆಲೆಗೊ೦ಡಿವೆ.ಪ್ರನಾಳಾಕಾರದ ಈ ಗ್ರ೦ಥಿಗಳೂ,ಲೋಳ್ಪರೆಯ ಒ೦ದು ಸೆ೦ಟಿ ಮೀಟರ್ ಉದ್ದದಲ್ಲಿ ಹತ್ತು ಸಾವಿರದಷ್ಟು ಇರುತ್ತವೆ೦ಬ ಅ೦ದಾಜಿದೆ.ಜಠರದಲ್ಲಿ ವಿವಿಧ ತೆರೆನ ರಸಗಳನ್ನು ಸ್ರವಿಸುವ ಜೇವಕೋಶಗಳಿರುತ್ತದೆ.(ಚಿತ್ರ ೧೫)
  ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಜೀರ್ಣಕರಸ(ಪೆಪ್ಸಿನ್)ಗಳನ್ನು ಸ್ರವಿಸುವ ಪ್ರಧಾನ ಜೀವಕೋಶಗಳು ಗ್ರ೦ಥಿಗಳ ತಳಭಾಗದಲ್ಲಿದ್ದರೆ,ಲೋಳೆಯನ್ನು ಸ್ರವಿಸುವ ಜೀವಕೋಶಗಳು ಗ್ರ೦ಥಿಗಳ ದ್ವಾರದ ಭಾಗದಲ್ಲಿರುತ್ತವೆ.
  ಸ್ವಾಯತ್ತ ನರಜಾಲದ (ಆಟೋನೋಮಸ್) ಎರಡೂ ವಿಧದ ನರಗಳ ಮೂಲಕ ಜಠರಕ್ಕೆ ಮಿದುಳಿನ ಸ೦ಪರ್ಕವಿದೆ.ಹೊಟ್ಟೆಯೊಳಗಡೆ ಬೆನ್ನುಲುಬಿಗೆ ಹೊ೦ದಿಕೊ೦ಡ೦ತಿರುವ "ಒಳಾ೦ಗಿಕ ಹೆಣೆಗೆ"(ಸ್ಲ್ಪಾ೦ಕ್ ನಿಕ್ ಪ್ಲೆಕ್ಸಸ್) ಮೂಲಕ ಜಠರಕ್ಕೆ ಅನುವೇದಕ (ಸಿ೦ಪಥಟಿಕ್) ನರಪ್ರಚೋದನೆ ಉ೦ಟಾಗುತ್ತದೆ.ಮಿದುಳಿನಿ೦ದ,ಹೊರಬ೦ದು ಅನ್ನನಾಳದ ಜೊತೆಗೆ ಕೆಳಗಿಳಿದು ಬರುವ ವೇಗಸ್