ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರುಳು - ತಡೆ ೧೪೧

ತೆರೆಯುವಷ್ಟರಲ್ಲೇ ಕರುಳು - ತಡೆಯ ಲಕ್ಷಣಗಳು ಪ್ರಕಟವಾಗುವುದು ಅಪರೂಪವೇನಲ್ಲ. ಭ್ರೂಣದ ಅಂಗಾಂಗಳು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸ್ಥಗಿತವಾಗುವುದು ಒಂದು ಕಾರಣವಾಗಬಹುದು.ಕರುಳಿನ ಬೆಳವಣಿಗೆಯ ಕೆಲವು ಹಂತಗಳಲ್ಲಿ ಸಹಜವಾಗಿ ಜರುಗಬೇಕಾದ "ತಿರುವು" ಆಗದಿರುವುದರಿಂಲೂ ಅದೇ ಪರಿಣಾಮಗಳಾಗಬಹುದು. ಬೆಳವಣಿಗೆಯ ಮೂಲ ಹಂತದಲ್ಲಿ ಇರುತ್ತಿದ್ದ ಕೆಲವು ಪಟ್ಟಿಗಳು (ಬ್ಯಾಂಡ್ಸ್) ಮುಂದಿನ ಹಂತಗಳಲ್ಲಿ ಮಾಯವಾಗುವದರಿಂದಲೂ ಕರುಳು ತಡೆಯ ಲಕ್ಷಣಗಳು ಪ್ರಕಟವಾಗಬಹುದು.

       ಕರುಳಿನ ಭಿತ್ತಿಯ ಬೆಳವಣಿಗೆ ಯಾವುದೇ ಕಾರಣದಿಂದ ಕುಂಠಿತವಾದರೆ, ಅದರ ಒಳಾವರಣ ಕಿರಿದಾಗುತ್ತಿದೆ, ಇಲ್ಲವೆ ಒಳಾವರಣ ತೆರೆದುಕೊಳ್ಳುತ್ತದೆ ಮುಚ್ಚಿ ಹೋಗಿರುತ್ತದೆ(Atresia). ಜನಿಸಿದ ನಂತರ ಶಿಶು ಸೇವಿಸುವ ಹಾಲು ಮುಂದೆ _ ಮುಂದೆ ಸಾಗದೆ ಕೆಲವೇ ಗಂಟೆಗಳಲ್ಲಿ ಹೊಟ್ಟೆ ಉಬ್ಬರಿಸಿಕೊಳುತ್ತದೆ; ವಾಂತಿಯಾಗಲಾರಂಭಿಸುತ್ತದೆ. ಜಠರ ಮತ್ತು ಮುಂಗುರುಳು ಸಂಧಿಸುವ ಜಾಗದಲ್ಲಿ ಉದ್ಭವಿಸುವ ಸಂಜಾತ ಕುಗ್ಗುವಿಕೆ - ಪೈಲೋರಿಕಸ್ಟಿ ನೋಸಿಸ್ - ಇದಕ್ಕೊಂದು ಉತ್ತಮ ನಿದರ್ಶನ ಈ ಪ್ರದೇಶದ ಭಿತ್ತಿಯಲ್ಲಿ ನರಜಾಲ ಸರಿಯಾಗಿ ಬೆಳವಣಿಗೆಯಾಗುವುದಿಲ್ಲವಾದ್ದರಿಂದ ಹೀಗಾಗುತ್ತದೆ. ಹುಟ್ಟಿದ ಕೆಲವೇ ಗಂಟೆಗಳಿಂದ ಹಿಡಿದು ಮುಂದಿನ ಒಂದೆರಡು ವಾರಗಳೊಳಗೆ ಶಿಶು ಕುಡಿದ್ದೆಲ್ಲವನ್ನೂ ತಕ್ಷಣ ವಾಂತಿ ಮಾಡುತ್ತದೆ. ಪರಿಸ್ಥಿತಿಯನ್ನು ಗುರುತಿಸಿ ಶಸ್ತ್ರ ಚಿಕಿತ್ಸೆ ಜರುಗಿಸಿದರೆ ಮಗು ಯಥಾಸ್ಥಿತಿಗೆ ಬರುತ್ತದೆ.
     ಸಣ್ಣ ಕರುಳಿನ ಕೆಲವು ಭಾಗಗಳಲ್ಲಿ ಕರುಳಿನ ಒಳಾವರಣ ಸಂಪೂರ್ಣವಾಗಿ ತೆರೆದುಕೊಂಡಿರದ, ಇಲ್ಲವೆ ಅರ್ಧಂಬರ್ಧ ಮುಚ್ಚಿಕೊಂಡಿರುವ ಪರಿಸ್ಥಿತಿಗಳು ನವಜಾತ ಶಿಶುಗಳಲ್ಲಿ ಕಂಡು ಬರುತ್ತವೆ. ಸಣ್ಣ ಕರುಳು ಮತ್ತು ಅದರ  ಕರುಳ್ನಡು ಪರೆ ಸೂಕ್ತ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ಸಹಜವಾಗಿ ತಿರುವಿಕೊಳ್ಳದಿದ್ದರೆ (ಮಾಲ್  ರೋಟೋಶನ್) ಕರುಳಿನ ಕೆಲವು ಭಾಗಗಳು ಅವು ಅಂತಿಮವಾಗಿ ನೆಲೆಯೂರಬೇಕಾದ ಜಾಗವನ್ನು ತಲುಪುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕರುಳು ತಡೆಯ ಲಕ್ಷಣಗಳು ಜನಿಸಿದ ಹಲವು ಗಂಟೆಗಳಿಂದ ಒಂದೆರಡು ದಿನಗಳಲ್ಲೇ ಪ್ರಕಟವಾಗುತ್ತವೆ. ಸೂಕ್ತ ಶಾಸ್ತ್ರ ಚಿಕಿತ್ಸೆಗಳಿಂದ ಈ ವ್ಯಾತಾಸಗಳನು ಸರಿಪಡಿಸಬಹುದು. ಆದರೆ ಪೈಲೋರಿಕ್ ಸ್ಟಿನೋಸಿಸ್ ಗೆ ಜರುಗಿಸಿದಾಗ ದೊರೆಯುವಷ್ಟು ಆಶಾದಾಯಕ ಫಲಿತಾಂಶಗಳು ದೊರೆಯಲಾರವು.
        ಗುದ-ನಾಳ ಮತ್ತು ದ್ವಾರಗಳು ಜನಿಸುವ ಸಮಯದಲ್ಲಿ ತೆರೆದುಕೊಳ್ಳದಿರುವ