ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರುಳು - ತಡೆ ೧೪೩

ಮೂಲಕ ಸಾಗುವ ರಕ್ತನಾಳಗಳ ಕತ್ತು ಹಿಚುಕಿದಂತಾಗುತ್ತದೆ. ಆ ಭಾಗದ ಕರುಳಿನ ಸುರುಳಿಗೆ ರಕ್ತದ ಸರಬರಾಜು ನಿಂತು ಹೋಗುತ್ತದೆ. ಕರುಳಿನ ಸುರುಳಿ ಒಂದೆರಡು ಸಾರಿ ತಿರವಿಕೊಂಡಿರುವುದರಿಂದ ಅದರ ಒಳಾವಾರಣವೂ ಮುಚ್ಚಿ ಹೋಗಿ ಆಹಾರದ ಚಲನೆಗೆ ಅಡ್ಡಿಯಾಗುತ್ತದೆ.ಭೀಕರ ಸ್ವರೂಪದ ನೋವಿನಿಂದ ರೋಗಿ , ಬಿದ್ದು ಬಿದ್ದು ಒದ್ದಾಡುವಂತಾಗುತ್ತದೆ. ಪದೇ ಪದೇ ವಾಂತಿಯಾಗುತ್ತದೆ.ಕೆಲವರು ತೀವ್ರ ತಲ್ಲಣಕ್ಕೊಳಕಾಗುತ್ತಾರೆ.ಉದರ ಕೋಶದಲ್ಲಿ ಸ್ವಾಭಾವಿಕವಾಗಿ ಇಲ್ಲವೆ ಅಕಸ್ಮಾತ್ತಾಗಿ ಆಗಿದ್ದ ಛಿದ್ರಗಳಲ್ಲಿ ಕರುಳಿನ ಸುರುಳಿ ಸಿಕ್ಕಿ ಹಾಕಿಕೊಂಡಾಗಲೂ ಇದೇ ಪರಿಣಾಮವಗಬಹುದು.ನಭಿ ಮತ್ತು ಗೆಜ್ಜೆಯ ಅಂಡವಾಯುಗಳ(ಇಂಗ್ವಯನಲ್ ಹರ್ನಿಯ) ಚೀಲದಲ್ಲಿ ಕರುಳಿನ ಸುರುಳಿಗಳು ಹೀಗೆ ನುಸುಳಿಕೊಂಡಾಗಲೂ ಇಂತಹದೇ ಪರಿಣಾಮಗಳಾಗುತ್ತವೆ.ಉದರ ಕೋಶದಲ್ಲಿರಬಹುದಾದ ಸಂಜಾತ ಅಥವಾ ನಂತರ ಉದ್ಬವಿಸಿದ ಪಟ್ಟಿಗಳಲ್ಲಿ ಕರುಳಿನ ಸುರುಳ ಸಿಕ್ಕಿ ಹಾಕಿಕೊಂಡು ನೇತಾಡುವಂತಾದಾಗಲೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಹೊಟ್ಟೆಯಾ ಇನ್ನಾವುದೋ ವ್ಯಾಧಿಗೆ ಒಂದು ಸಾರಿ ಶಸ್ತ್ರಚಿಕಿತ್ಸೆ ಜರುಗಿದವರಲ್ಲಿ ಹೊಟ್ಟೆಯ ಅಥವಾ ಕರುಳಿನ ಒಂದು ಭಾಗ ಇನೊಂದು ಭಾಗಕ್ಕೆ ಅಂಟಿಕೊಳ್ಳುವ ಸಾಧ್ಯಾತೆ ಇರುತ್ತದೆ. ಅವುಗಳ ನಡುವೆಯೂ ಅಂತಹದೇ ಪರಿಣಾಮ ಉಂಟಾಗಬಹುದು.ಇತ್ತಿಚಿನ ವರ್ಷಗಳಲ್ಲಿ ಹೆಚ್ಚಾಗಿ ಜರುಗುತ್ತಿರುವ ಅಪೆಂಡಿಸೆಕ್ಟೆಮಿ,ಟ್ಯೂಬೆಕ್ಟಮಿಗಳಂತ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ಈ ರಿತಿಯಲ್ಲಿ ಕರುಳು - ತಡೆಗಳು ಪ್ರಕರಣಗಳೂ ಹೆಚ್ಚಾಗುತ್ತಿವೆ.

            ಅಕಸ್ಮಾತ್ತಾಗಿ ನಿಂಗಿದ ಹಿರಿಯ ಗಾತ್ರದ ಗೋಲಿ, ನಾಣ್ಯಗಳಂತಹ

ಹೊರಗಿನ ವಸ್ತುಗಳು ಕರುಳಿನ ಒಳಾವರಣದಲ್ಲಿ ಸಿಕ್ಕಿಹಾಕಿಕೊಡು ಕರುಳು- ತಡೆ ಉಂಟು ಮಾಡುವುದುಂಟು.ಪಿತ್ತಕೋಶದ ಕಲ್ಲುಗಳೂ ಸಹಾ ಆಕಸ್ಮಾತ್ತಾಗಿ ಸಣ್ಣಕರುಳಿನ ಒಳಾವರಣದಲ್ಲಿ ಸಿಕ್ಕಿ ಹಾಕಿಕೊಳ್ಳಬಹುದೆಂಬುದನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಕರುಳಿನ ಒಳಾವರಣದಲ್ಲಿ ಉದ್ಬವಿಸುವ ಗೆಡ್ಡೆಗಳು ಹಿರಿದಾಗಿ ಬೆಳೆದು ಕರುಳು ತಡೆಯನ್ನುಂಟು ಮಾಡುವುದ ತೀರಾ ಸಾಮಾನ್ಯ ಸಂಗತಿ. ಸಣ್ಣ ಕರುಳಿನಲ್ಲಿ ಸರಳ ರೀತಿಯ(Benign)ಗೆಡ್ಡೆಗಳು, ಈ ರೀತಿಯ ಆಡಚಣೆಗಳಿಗೆ ಕಾರಣವಾದರೆ, ದೊಡ್ಡ ಕರುಳಿನಲ್ಲಿ ವಿಷಮರೀತಿಯ(Malignant)ಗೆಡ್ಡೆಗಳು ಕಾರಣವಾಗುತ್ತದೆ. ಷರಟಿನ ಕೈ ತೋಳನ್ನು ಅದರ ಹೊರ ಮೈ ಮೇಲೆ ಹೀಂದೆ ಮಡಿಸಿಕೊಳ್ಳುವ