ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವುಗಳನ್ನು ಸೇವಿಸದಂತೆ ಎಚ್ಚರವಹಿಸುವುದು ಒಳ್ಳೆಯದು .

            ಎಡಬಿಡದೆ ಮಲಬದ್ಧತೆಯ ಚಿಕಿತ್ಸೆಗೆ ವಿರೇಚಕ ಮದ್ದುಗಳನ್ನು ಕೆಲಸಾರಿ

ಬಳಸಬೇಕಾಗಬಹುದು. ಆದರೆ ಅವುಗಳ ಬಳಕೆಯ ಅಭ್ಯಾಸ ಮುಂದುವರಿಯದಂತೆ ಎಚ್ಚರ ವಹಿಸಬೇಕು .ಮಲದಲ್ಲಿ ಹೆಚ್ಚಿನ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುವ ತೇವನಿಕ(hydrophilic)ವಿರೇಚಕ ಮದ್ದುಗಳ-ಅಗರ್ ,ಇಸ್ಫಾಗುಲ್ -ಅಂಶಗಳಿರುವವು ಈ ದಿಸೆಯಲ್ಲಿ ಹೆಚ್ಚು ಉಪಯುಕ್ತವಾದವು .

     ಉದರ ಬೀನೆ ,ಕರುಳು ಸೆಡೆತದ ಬಾಧೆಗಳ ನಿವಾರಣೆಗೆ ಕೋಲಿನ್ ಧಮನಿಕಾ ಗುಣಗಳಿರುವ -ಅಟ್ರೋಫಿನ್ ,ಹಾಯೋಸಿನ್ ನಂತಹ ಮದ್ದುಗಳು  ಪ್ರಯೋಜನಕಾರಿಯಾಗಬಲ್ಲವು .ಮಾನಸಿಕ ವ್ಯತ್ಯಾಸ ಮೇಲುಗೈಯಾಗಿರುವ ರೋಗಿಗಳಿಗೆ ಮನೋಸ್ವಾಸ್ಥಕಾರಿ ಮದ್ದುಗಳ ಬಳಕೆಯನ್ನು ಜೊತೆ ಜೊತೆಗೆ ಮಾಡಬೇಕಾಗುತದೆ .
     ಒಟ್ಟಿನಲ್ಲಿ ಕರುಳು ಕೆರಳಿಕೆಯ ಲಕ್ಷಣವಿರುವವರು ಮನಸ್ಸಿನ ತಾರಾತುರಿಯನ್ನು ಹಿಡಿತದಲ್ಲಿಟ್ಟುಕೊಂಡು ,ಮನಃಕ್ಲೇಷಗಳನ್ನು ಹೋಗಲಾಡಿಸಿಕೊಂಡು ಖಾರ ,ಮಸಾಲೆ ಸಾಂಬಾರ ಯುಕ್ತ ಆಹಾರಗಳನ್ನು ತ್ಯಜಿಸಲು ಪಡಬೇಕು .ಸಂಕ್ಷಿಪ್ತವಾಗಿ ಹೇಳುವುದಾದರೆ ."Avoid Hurry,Worry and Curry!"