ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೮೨ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು
ಅವೇ ಉದ್ದವಾಗಿ ವಿಸ್ತರಿಸುತ್ತವಲ್ಲದೆ ಆಳವಾದ ಸೀಳುಗಳಾಗಿಯೂ ಪರಿವರ್ತನೆಗೊಳ್ಳುತ್ತವೆ. ಚರ್ಮದ ಮೇಲ್ಮೆಯಲ್ಲಿ ಮೊದಲು ಕಾಣಿಸಿಕೊಂಡ ಸೀಳುಗಳು ಗುದನಾಳದೊಳಗೆ ಒಂದೂವರೆ ಎರಡು ಅಂಗುಲಗಳವರೆಗೂ ವ್ಯಾಪಿಸಬಹುದು. ಹಾಗೇ ಆಳವಾಗಿ ಕೊರೆಯುತ್ತಾ ಬಿಗಿಸುತ್ತುಗಳಿಗೂ ವ್ಯಾಪಿಸುತ್ತವೆ. ಗುದದ್ವಾರದ ಸೀಳುಗಳು (Fissure-In-Ano) ಪುರುಷರಲ್ಲಿ ಸಾಮಾನ್ಯವಾಗಿ ದ್ವಾರದ ಹಿಂದುಗಡೆಯ ಕೇಂದ್ರ ಬಿಂದು-ಗಡಿಯಾರದ ೬ ಗಂಟೆಯ ಸ್ಥಾನದಲ್ಲಿ ಹೆಚ್ಚಾಗಿ ಉದ್ಬವಿಸುತ್ತವೆ ; ಮಹಿಳೆಯರಲ್ಲಿ ಅವು ಮುಂದುಗಡೆಯ ಗಡಿಯಾರದ ೧೨ ಗಂಟೆಯ ಸ್ಥಾನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗುದದ್ವಾರದ ಪಾರ್ಶ್ವಗಳಲ್ಲಿ ಅವು ಕಾಣಿಸುವುದು ಅಪರೂಪ. ಹಾಗೆ ಪಾರ್ಶ್ವದಲ್ಲಿ ಕಾಣಿಸಿದ ಸೀಳುಗಳಲ್ಲಿ ಮಿಕ್ಕವುಗಳಿಗಿಂತ ಕ್ಯಾನ್ಸರ್ ಪರಿವರ್ತನೆಯ ಸಂಭವ ಹೆಚ್ಚು ಎನ್ನಲಾಗಿದೆ. ಕೆಲಸಾರಿ ಗುದ್ದದ್ವಾರದ ಸುತ್ತಲೂ ಹಲವಾರು ಸೀಳುಗಳಾಗಿರುವುದು ಉಂಟು. ಅವು ಪದೇ ಪದೇ ಭೇದಿಯಾಗುವವರು, ಕರುಳಿನ ಕೆಲವು ವಿಶಿಷ್ಟ ರೋಗಗಳಿರುವವರು ಮತ್ತು ಕೆಲವು ತರಹೆಯ ಗುಹ್ಯ ರೋಗಗಳಿರುವವರಲ್ಲೂ ಈ ತರಹೆಯ ಸೀಳುಗಳು ಸಾಮಾನ್ಯವಾಗಿರುತ್ತವೆ.
ಚಿತ್ರ ೨೭ ಗುದದ್ವಾರದ ಸೀಳು ಮತ್ತು ದ್ವಾರಪಾಲಕ ಮೊಳ
ಮಲವಿಸರ್ಜನೆಯ ಸಮಯದಲ್ಲಿ ಮಾತ್ರ ನೋವು ಪ್ರಕಟವಾಗುವುದು