ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಸ್ಟುಲಾ ೧೮೭

ಕುರುವಿನಂತೆ ಊದಿಕೊಂಡು ಒಡೆದು ಕೀವು ಸುರಿಸಲಾರಂಭಿಸುತ್ತದೆ.ಇಂತಹ ಪ್ರಕರಣಗಳು ಆಗಾಗ್ಗೆ ಜರುಗುತ್ತಿದ್ದು ಗುದ ಮುಂದಾಣದ ಜಾಘಾಡಾಲ್ಲಿನ ಗಾಯ ವಾಸಿಯಾಗುವುದೇ ಇಲ್ಲ.ರೋಗಿಯ ಒಳೌದುಪಿನಲ್ಲೂ ಆಗಾಗ್ಗೆ ರಕ್ತ-ಕೀವು ಅಂಟುತ್ತಿದ್ದು ಅವನಲ್ಲಿ ಅಸಹ್ಯಕರ ಭಾವನೆಯುಂಟು ಮಾಡುತ್ತದೆ.

      ಗುದ ಮುಂದಾಣವನ್ನು ವೀಕ್ಷಿಸುವುದರಿಂದಲೇ ಪಿಸ್ತುಲಾಗಳನ್ನು ಗುರುತಿಸಬಹುದು.ಗುದನಾಳದೊಳಗೆ ಬೆರಳು ತೂರಿಸಿ ಪಿಸ್ಟುಲಾದ ಒಳದ್ವಾರವನ್ನು ಸ್ಪರ್ಷಿಸಲು ಸಾಧ್ಯ.ಒಳಗಿನ ಮತ್ತು ಹೊರಗಿನ ಬೆರಳುಗಳ ನಡುವೆ ಇರುವ ಅಂತರನ್ನು ಒತ್ತಿ ನೋಡುವುದರಿಂದ ಪಿಸ್ಟುಲಾದ ಗಾತ್ರ ಉದ್ದ ಮತ್ತು ದಿಕ್ಕನ್ನು ಅಂದಾಜು ಮಾಡಬಹುದು.ಹೊರಗಿನ ಬಾಯಿಯಿಂದ ಲೋಹದ ತಂತಿಯೊಂದನ್ನು ಜಾಗರೂಕತೆಯಿಂದ ತೂರಿಸುವುದರಿಂದಲೂ ಅದರ ಉದ್ದ ಮತ್ತು ಪ್ರವಹಿಸುತ್ತಿರುವ ದಿಕ್ಕನ್ನು ಅಂದಾಜು ಮಾಡಲು ಸಾಧ್ಯ.
      
ಚಿಕಿತ್ಸೆ
     ಬೇರೂರಿದ ಪಿಸ್ಟೂಲಾಗಳನ್ನು ಶಸ್ತ್ರಚಿಕಿತ್ಸೆಯಿಂದಲೇ ತೆಗೆಯಬೇಕಾಗುತ್ತದೆ.ತೀವ್ರಗತಿಯ ರೋಗಾಣು ಸೋಂಕಿನ ಚಿಹ್ನೆಗಳಿದ್ದರೆ ಜೇವರೋಧಕ ಮದ್ದುಗಳನ್ನು ಸಾಕಷ್ಟು ಕಾಲ ನೀಡಿ ಅದನ್ನು ಯಥಾ ಸ್ಥಿತಿಗೆ ತರಲಾಗುವುದು.ರೋಗಿಯನ್ನು ಅರಿವಳಿಕೆಗೊಳಗಾಗಿಸುವುದು ಅನಿವಾರ್ಯ.ಮೊದಲು ಪಿಸ್ಟುಲಾದೊಳಗೆ ಲೋಹದ ತಂತಿಯನ್ನು ತೂರಿಸಿ ಅದರ ಮಾರ್ಗ ಮತ್ತು ದಿಕ್ಕನ್ನು ಮತ್ತೆ ಖಚಿತ ಪಡಿಸಿಕೊಳ್ಳಲಾಗುವುದು.ಮಿಥಿಲಿನ್ ಬ್ಲೂ ಎಂಬ ಬಣ್ಣವನ್ನು ಪಿಸ್ಟೂಲಾದ ಕವಲುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.ದಿಂಡುಗಟ್ಟಿದ ಪಿಸ್ಟುಲಾದ ಮಾರ್ಗವನ್ನು ,ಚರ್ಮದ ತುದಿಯಿಂದ ಕತ್ತರಿಸುತ್ತಾ ಬಿಡಿಸಿಕೊಂಡು ಕೊನೆಯವರೆಕಗೂ ಇಡಿಯಾಗಿ ಬೇರ್ಪಡಿಸಿ ತೆಗೆಯಲಾಗುತ್ತದೆ.ದ್ವಾರದ ಅತಿ ಸಣ್ಣ ತುಣುಕು ಕಣ್ಣು ತಪ್ಪಿ ಉಳಿದುಕೊಂಡರೂ,ಕೆಲ ಕಾಲಾಂತರ ಪಿಸ್ಟುಲಾ ಮತ್ತೆ ಮರುಕಳಿಸುವ ಸಾಧ್ಯತೆಗಳಿರುತ್ತವೆ.ಹೀಗೆ ಕತ್ತರಿಸಿದ ಜಾಗದಲ್ಲಿ ರಕ್ತಸ್ರಾವವನ್ನು ನಿಲ್ಲಿಸಿ ಅದರ ದ್ವಾರವನ್ನು ಅಗಲವಾಗಿ ತೆರದಿಡಲಾಗುತ್ತದೆ.ಗಾಯದ ತಳಕ್ಕೆ ಶುಚಿಯಾದ ಬಟ್ಟೆಯನ್ನು ತುರುಕಿಡುತ್ತಾ ಅದು ನಿಧಾನವಾಗಿ ತಳದಿಂದ ಮುಚ್ಚಿ ಬೆಳೆಯುವಂತೆ ಮಾಡಲಾಗುತ್ತದೆ.