ಪುಟ:ಸುವರ್ಣಸುಂದರಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಇರುವುದೊ, ಹಾಗೆಯೇ ವಿಶೇಷ ಸುಖವಿರುವ ಕಡೆಗಳಲ್ಲಿ ಸ್ವಲ್ಪ ಕಷ್ಟವಿದ್ದೇ ಇರುತ್ತದೆ ಇಷ್ಟು ಸ್ವಲ್ಪಕ್ಕೆ ಬೇಜಾರು ಪಟ್ಟು ಕೊಂಡರೆ ಹೇಗೆ ? ಸುವರ್ಣಸ್ಪರ್ಶವೇ ಪ್ರಾಪ್ತವಾಗಿರುವಾಗ ಗಾಜಿನ ಕನ್ನ ಡಕ ಒಂದು ಹೋದರೇನು ? ಕಣ್ಣುಗಳೇ ಹೋದಹಾಗಾಯಿತೇ? ನನ್ನ ಕಣ್ಣು ಗಳೇ ಸಾಕು ಕಾಣುವಷ್ಟು ನೋಡುತ್ತೇನೆ ಏನಾ ದರೂ ಓದಬೇಕಾದರೆ ನನ್ನ ಮುದ್ದು ಗುವರಿ ನನಗೆ ಸಹಾಯ ಮಾಡುವಳು, ಎಂದು ಪುನಃ ತಾನೇ ಸಮಾಧಾನ ತಂದು ಕೊಂಡನು, } ಸುವರ್ಣಶೇಖರನ ಸಂಭ್ರಮವು ಆತನನ್ನು ಎಲ್ಲಿಯೂ ಇರ ಗೊಡಿಸದು ಅರಮನೆಯ ಉಪ್ಪರಿಗೆಯನ್ನು ಬಿಟ್ಟು ಕೆಳಕ್ಕೆ ಇಳಿದುಬಂದನು ಹೀಗೆ ಬರುವಾಗ್ಗೆ ಮಹಡಿಯ ಮೆಟ್ಟಿಲು ಗಳೂ, ಕಟಕಟೆಯೂ ಆತನ ಕೈಸೋಕಿದ ಕೂಡಲೆ ಸುವರ್ಣ ಮಯವಾದವೂ ಇದನ್ನು ನೋಡಿ ಸುವರ್ಣಶೇಖರನು ಹಿಗ್ಗಿ. ದನು, ಅಲ್ಲಿಂದ ಹಿತ್ತಲ ಬಾಗಿಲಿನ ಅಗುಳಿಯನ್ನು ತೆಗೆದು ತೋಟದೊಳಕ್ಕೆ ಹೋದನು ಒಂದು ನಿಮಿಷದ ಹಿಂದೆ ಹಿತ್ತಾಳೆ ಯದಾಗಿದ್ದ ಅಗುಳಿಯು ಸುವರ್ಣ ಶೇಖರನ ಕೃಸೋಕತ್ತಲೆ ಚಿನ್ನದ ಅಗುಳಿಯಾಯಿತು ತೋಟದಲ್ಲಿ ಎಲ್ಲೆಲ್ಲಿ ನೋಡಿದರೂ ಅರಳಿದ ಗುಲಾಬಿ ಹೂಗಳು ಸಾವಿರಾರು ತುಂಬಿದವು ಮೊಗ್ಗು ಗಳಂತೂ ಲೆಕ್ಕವೇ ಇಲ್ಲ ಪುಷ್ಪಗಳ ವಾಸನೆ ಎಲ್ಲೆ ಲ್ಲಿಯೂ ತುಂಬಿಹೋಗಿದೆ (c ಇಂತಹ ಪರಿಮಳಯುಕ್ತವಾದ ಮಂದಮಾರುತವೂ, ಕಣ್ಣಿಗೆ ಆನಂದವನ್ನೀಯುವ ಪುಷ್ಪಗಳ ಸಮೂಹವೂ ಇರುವ ತೋಟದಲ್ಲಿ ಕೆಲವು ಕಾಲವಿದ್ದು ಅನುಭವಿ ಸುವ ಸೌಖ್ಯಕ್ಕಿಂತಲೂ ಮಾರಿದ ಸೌಖ್ಯವುಂಟೇ ! ಈ ಪುಷ್ಪ ಗಳು ಈಗಲೇ ಇಷ್ಟು ಅಂದವಾಗಿರುವಾಗ ಇವುಗಳ ಸೊಬಗನ್ನು ಹತ್ತರಷ್ಟು ಹೆಚ್ಚಿಸುವ ಶಕ್ತಿಯು ನನ್ನಲ್ಲಿದೆಯಲ್ಲವೆ!” ಎಂದು