ಪುಟ:ಸುಶೀಲೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯ ಮುದ್ರಣದ ಪೀಠಿಕೆ. ರದಯ ವಾಚಕರೇ ! ಸತೀಹಿತೈಷಿಣೀ ಗ್ರಂಥಮಾಲೆಯ ಪ್ರಥಮ ಪುಸ್ತಕವಾದಿ ಈ ಸುಶೀಲೆಯ ಪ್ರಥಮ ಮುದ್ರಣದ ಒಂದು ಸಾವಿರ ಪ್ರತಿಗಳು ಒಂದು ವರ್ಷದೊಳಗಾಗಿ ಮುಗಿದು ಹೋದುವು. , ದೇಶಭಾಷಾವಕ್ಸಲರಾದ ಗ್ರಾಹಕರ ಉದಾರಾಶ್ರಯದಿಂದೆಯ ಶೋದ್ದಾರಕಗ, ಗುಣೈಕಗಳೂ ಆದ ಮೈಸೂರು, ಮರ ರಾಸು ಮತ್ತು ಬೊಂಬಾಯಿ ವಿದ್ಯಾ೦ಗದವರ ಬಲವತ್ಸಹಾಯ ಸಂಪ ತಿಯಿಂದೆಯೂ ಈ ಗ್ರಂಥವು ಈಗಳೀಗಳೇ ಪುನರ್ಮುದ್ರಣವಾ ಗುವಂತಾಯ್ತಂದು ಹೇಳಲು ಸಂತೋಷವಾಗುವುದು. ಅಲ್ಲದೆ ಉದಾತ್ತರಾದ ಬೊಂಬಾಯಿ ಮತ್ತು ಮದರಾಸು ವಿದ್ಯಾಭ್ಯಾಸದ ಸಂಘದವರು, ಅತ್ತಲಿನ ಬಾಲಿಕಾಜನೋಪಯೋಗ ಕಾಗಿ ಅದನ್ನು ವಿನಿಯೋಗಿಸಬಹುದೆಂದು ನಿಯಮಿಸಿರುವುದರಿಂದ, ಮತ್ತಷ್ಟು ಹೆಚ್ಚಾಗಿ ಆತುರವಾಗಿಯ ಮುದ್ರಣಕಾರನು ನಡೆದಿರುವುದು. - ನಮ್ಮ ಸುಹೃದ್ವರ್ಗದವರು ಪ್ರಥಮ ಮುದ್ರಣದಲ್ಲಿ ತೆಗೆದು ತೋರಿಸಿದ ರೋಷಭಾಗಗಳನ್ನು ತಕ್ಕ ಮಟ್ಟಿಗೆ ಕ್ರಮಪಡಿಸಿ ಸಾಧ್ಯ ವಾಚಷ ಸುಧಾರಿಸಿಯೇ ಮುದ್ರಿಸಿರುವುದು, ಈಗಳೂ ಅಲ್ಲಲ್ಲಿ ಅಜ್ಞಾತವಾಗಿದ್ದು ತೋರುವದೋಷಗಳಾವುವೆಂಬುದನ್ನು ಸೂಚಿಸಿ ದವರಿಗೆ ಕೃತಜ್ಞತೆಯಿಂದ ವಂದನೆಯನ್ನು ಸಮರ್ಪಿಸುವುದು ನಮ್ಮ ಕರ್ತವ್ಯವಾಗಿರುವುದು, 4-4-1519 .೨ಂಜನಗೂಡು, ಹಿತೈಷಿಣಿ,