ಸೃಷ್ಠಿವ್ಯಾಪಾರಗಳ ನಿರೀಕ್ಷಣೆ.
ಮೊದಲನೇ ಅಧ್ಯಾಯ.
ಮುಗಿಲಲ್ಲಿ ಕಾಣುವ ವಸ್ತುಗಳು.
[ಸೂಚನೆ-ಸೂರ್ಯ, ಚಂದ್ರ ನಕ್ಷತ್ರಗಳು ಇವುಗಳ ನಿರೀಕ್ಷಣೆಗೆ ಮುಗಿ ಲಲ್ಲಿ ಮೋಡಗಳು ಹೆಚ್ಚಾಗಿಲ್ಲದ ದಿನಗಳು ಯೋಗ್ಯವಾದವು. ಆದ್ದರಿಂದ ಈ ಅಧ್ಯಾಯದ ವಿಷಯವನ್ನು ಮಳೆಗಾಲವನ್ನು ಬಿಟ್ಟು ಉಳಿದ ಯಾವ ಋತುವಿನ ಬ್ಲಾದರೂ ಸಾಗಿಸಬಹುದು.]
ಬೇಸಿಗೆ ಕಾಲದ ಒಂದು ದಿನ ಹಗಲಲ್ಲಿ ಶಾಲೆಯ ಹೊರಗೆ ಬಂದು ಬೈಲಿ ನಲ್ಲಿ ಸೇರಿ ನಮ್ಮ ತಲೆಯ ಮೇಲಿರುವ ಮುಗಿಲನ್ನ ಲಕ್ಷವಿಟ್ಟು ನೋಡೋಣ.
ಅದು ಸ್ವಚ್ಛವಾದ ನೀಲವರ್ಣದಿಂದ ಬಹಳ ಅಂದವಾಗಿಯೂ ಪ್ರಕಾಶವು ಇದ್ದಾಗಿಯೂ ಕಾಣುವದು. ಈ ಮುಗಿಲು ನಮ್ಮ ತಲೆಯ ಮೇಲೆ ಎತ್ತರವಾ ಗಿದ್ದು ಎಲ್ಲಾ ದಿಕ್ಕುಗಳಲ್ಲಿ ನೆಲವನ್ನು ಮುಟ್ಟುವಂತೆ ಕಾಣುತ್ತಾ ಸೃಥ್ವಿಯ ಮೇಲೆ ಒಂದು ಕೊಪ್ಪರಿಗೆಯ ಹಾಗೆ ಇರುತ್ತದೆ.
(೧) ಮೋಡಗಳು.
ಮುಗಿಲಿನ ಬಣ್ಣವು ನೀಲವೆಂದು ಹೇಳಿದೆವಷ್ಟೇ. ಆದರೆ ಅದರ ಎಲ್ಲಾ ಕಡೆಗಳಲ್ಲಿ ನೀಲಿಬಣ್ಣ ವೊಂದೇ ಇರುವದೇನು ? ಅಲ್ಲಲ್ಲಿ ಹತ್ತಿಯ ರಾಶಿಯಂತೆ ಆಥವಾ ಹೊಗೆಯಂತಿರುವ ವಸ್ತುಗಳು ತೇಲಾಡುತ್ತಿರುತ್ತವೆ. ಇವೇ ಮೋಡಗಳು, ಇವು ಮುಗಿಲಲ್ಲಿ ಹೆಚ್ಚಿದಂತೆ ಮುಗಿಲಿನ ನೀಲಬಣ್ಣವು ಕಡಿಮೆಯಾಗುವದು. ಮುಗಿಲಲ್ಲಿ ಮೋಡಗಳು ಬಹಳ ದಟ್ಟವಾದರೆ ಮಳೆಯು ಸುರಿಯುತ್ತದೆ.
(೨) ಸೂರ್ಯ.
(೧) ಹಗಲು ಮುಗಿಲಲ್ಲಿ ಕಾಣುವ ಎಲ್ಲಾ ವಸ್ತುಗಳಲ್ಲಿ ಸೂರ್ಯನು ಬಹಳ ಹೆಚ್ಚಿನ ಪ್ರಕಾಶವುಳ್ಳವನೆಂದು ಹೇಳಬೇಕಾದುದಿಲ್ಲ. ನಾವು ಹೊರಗೆ ಬಂದು ತಲೆಯ ಮೇಲಿರುವ ಸೂರ್ಯನನ್ನು ನೋಡಬೇಕೆಂದು ತಲೆಯನ್ನೆತ್ತಿದ ಕೂಡಲೆ ಅವನ ಕಿರಣಗಳು ನಮ್ಮ ಕಣ್ಣುಗಳನ್ನು ಕುಕ್ಕಿಸುವವು.ಈ ಕಿರಣಗಳನ್ನು