ಈ ಪುಟವನ್ನು ಪ್ರಕಟಿಸಲಾಗಿದೆ
- ೬೬ -
ಬಿರುಗಾಳಿ ಬೀಸುವದೆಂದು ಹೇಳಬಹುದು, ಬೀಸುವ ಹವೆಯಲ್ಲಿ ನೀರಿನ ಉಗಿಯು ಬಹಳ ಹೆಚ್ಚಾದರೆ ಮಳೆಯು ಬರುವದಷ್ಟೇ. ಇಂಥ ಸಮಯದಲ್ಲಿ ಭಾರಮಾಪಕ ಯಂತ್ರದ ಪಾರಜವು ಕೆಳಗೆ ಇಳಿಯುತ್ತದೆ. ಈ ಯಂತ್ರದ ಸಹಾಯದಿಂದ ಬಿರುಗಾಳಿಯು ಯಾವಾಗ ಬೀಸುತ್ತದೆ, ಮಳೆಯು ಯಾವಾಗ ಆಗುತ್ತದೆ ಎಂಬ ಸಂಗತಿಗಳನ್ನು ನಾವು ತಿಳಿಯಬಹುದು.
ಶಾಲೆಯಲ್ಲಿ ಹುಡುಗರು ಇದರ ನಿರೀಕ್ಷಣೆಯನ್ನು ಕ್ರಮವಾಗಿ ನಡಿಸುತ್ತಾ ಆಯಾ ದಿನಗಳ ಪಾರಜದ ಎತ್ತರಕ್ಕೂ ಹವಾಮಾನಕ್ಕೂ ಇರುವ ಸಂಬಂಧವನ್ನು ಗೊತ್ತು ಮಾಡಬೇಕು.
ಇಲ್ಲಿಯವರೆಗೆ ಹುಡುಗರ ನಿರೀಕ್ಷಣೆಗೊಳಗಾಗಿರುವ ಎಲ್ಲಾ ಸಂಗತಿಗಳನ್ನು ಸೇರಿಸಿ ಕೆಳಗೆ ಸೂಚಿಸಿದಂತೆ ಪಟ್ಟಿಯನ್ನು ಮಾಡಿ ಹುಡುಗರು ಅದನ್ನು ಸರಿಯಾಗಿ ತುಂಬುತ್ತಬರಬೇಕು.
............ . ಊರಿನ ಹವಾಮಾನದ ನಿರೀಕ್ಷಣೆ
ಊರಿನ ಅಕ್ಷಾಂಶ...............ಎತ್ತರ.......
..............ವರ್ಷದ....ಉಷ್ಣ ವಾಹಕ ಯ೦ತ್ರ.
ತಾರೀಖು | ಉಷ್ಣಮಾಪಕ ಯಂತ್ರ ಪರಮಾವಧಿ | ಉಷ್ಣಮಾಪಕ ಯಂತ್ರ ಕನಿಷ್ಠಾವಧಿ | ಉಷ್ಣಮಾಪಕ ಯಂತ್ರ ರುಕ್ಷಗೋಲ | ಉಷ್ಣಮಾಪಕ ಯಂತ್ರ ಆರ್ದ್ರಗೋಲ | ಭಾರಮಾಪಕ ಯಂತ್ರ | ಮಳೆ | ಮೇಘ | ಗಾಳಿ | ಶರಾ |
---|---|---|---|---|---|---|---|---|---|
೧ | |||||||||
೨ | |||||||||
೩ |