ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೭೪ - ಯಲ್ಲಿ ಅಥವಾ ತೇವವಿರುವ ಸ್ಥಳದಲ್ಲಿಟ್ಟಿದ್ದರೆ ಜಂಗು ಅಥವಾ ತುಕ್ಕು ಇನ್ನೂ ತೀವ ವಾಗಿಯೂ ಹೆಚ್ಚಾಗಿಯ ಸೇರುತ್ತದೆ. ಇದೇ ರೀತಿಯಲ್ಲಿ ಬಂಡೆಗಳು ಗಾಳಿಗೂ ಗಾಳಿಯ ತೇವಿಗೂ ತಗಲುವದರಿಂದ ಅವುಗಳ ಮೇಲ್ಬಾಗದಲ್ಲಿ ಜಂಗು ಕೂಡು ತದೆ. ಬಂಡೆಗಳನ್ನು ಮುಚ್ಚಿಕೊಂಡಿರುವ ಹುಡಿಯು ಅದು ಉಂಟಾದ ಸ್ಥಳದ ಲ್ಲಿಯೇ ಇರದೆ ಗಾಳಿಯ ಮತ್ತು ನೀರಿನ ಚಲನೆಯ ದಸೆಯಿಂದ ಇದ್ದ ಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ವ್ಯಾಪಿಸುವದು, ಹೀಗೆ ಜಂಗಿನ ಒಂದು ತರವು ಹೋರ ಕೂಡಲೆ ಪುನಃ ಹೊಸ ತರವು ಸೇರುವದು. ಈ ಕಾರ್ಯವು ನಿರಂತರವಾಗಿ ಸಾಗು ತಿರುವದರಿಂದ ಎಂಥ ಬಿರುಸಾದ ಬಂಡೆಗಳಿದ್ದರೂ ಅವು ಕಾಲಕ್ರಮದಲ್ಲಿ ಸವೆದು ಪುಡಿಪುಡಿಯಾಗುತ್ತವೆ. ಹವೆಯಲ್ಲಿ ಅಂಗಾರಾಮೃ ವಾಯು (ಕಾರ್ಬಾನಿಕ ಆಸಿಡ ಗ್ಯಾಸ) ಎಂಬ ಭೂಭಾಗವನ್ನು ಸವಿಸುವ ಮತ್ತೊಂದು ಸಾಧನವಿರುತ್ತದೆ. ಈ ವಾಯು ಮಳೆ ಯನೀರಿನಲ್ಲಿ ಮಿಶ್ರವಾಗಿ ಕೆಲವು ಜಾತಿಗಳ ಬಂಡೆಗಳನ್ನು ಸವಿಸುತ್ತದೆ. ಗಾಳಿಯ ಚಲನೆಯಿಂದ ಸಹ ಬಂಡೆಗಳು ಸವೆಯುತ್ತವೆ. ಸಿಂಧಪಾಂತ ದಂಥ ಉಸುಬಿನ ಪ್ರದೇಶಗಳಲ್ಲಿ ಗಾಳಿಯಿಂದ ಹಾರಿಹೋಗುವ ಉಸುಬಿನ ಕಣ ಗಳು ಬಂಡೆಗಳನ್ನು ಉಜವದರಿಂದ ಬಂಡೆಗಳು ಸಾವಕಾಶವಾಗಿ ಸವೆಯು ಇವೆ. (೩) ಬಂಡೆಗಳು ನೀರಿನಿಂದ ಸವೆಯುವವು. ಬಂಡೆಗಳನ್ನು ಸವಿಸುವದರಲ್ಲಿ ಗಾಳಿಗಿಂತಲೂ ನೀರೇ ಬಹು ಪ್ರಮುಖವೆ: ಗಿರುತ್ತದೆ. ಪೃಥ್ವಿಯ ಮೇಲಿನ ಸಮುದ್ರ, ನದೀ, ತಟಾಕ ಮೊದಲಾದ ಜಲಸಾ ನಗಳಿಂದ ನೀರು ಉಗಿಯಾಗಿ ಹವೆಯಲ್ಲಿ ಸೇರುತ್ತಿರುತ್ತದಷ್ಟೇ. ಈ ನೀರಿನ ಒಂದ ಭಾಗವು ನೆಲದಮೇಲೆ ಮಳೆಯ ರೂಪದಿಂದ ಬೀಳುವದನ್ನು ನಾವು ನೋಡುತ್ತೇವೆ ನೆಲದ ಮೇಲೆ ಮಳೆ ಹೆಚ್ಚಾಗಿ ಸುರಿದಾಗ ನೀರಿನ ಕೂಡ ಮಣ್ಣು ಮತ ಸಣ್ಣ ಕಲ್ಲುಗಳು ಹರಿದು ಹೋಗುತ್ತವೆ. ಒಂದೊಂದು ಸಾರೆ ದೊಡ್ಡ ಕಲ್ಲುಗಳ ಸಹ ಹರಿದುಹೋಗುವದುಂಟು. ಈ ಕಲ್ಲುಗಳು ಒಂದನ್ನೊಂದು ಉಜ್ಜುವದರಿಂt ನುಣುಪಾದ ಗುಂಡುಗಳಾಗುತ್ತವೆ. ಮೃದುವಾದ ಕಲ್ಲುಗಳು ಉಸುಬಾಗತಕ್ಕವು ಮಳೆಯನೀರು ತಣಿದ ಉಗಿಯೇ ಆಗಿರುವದರಿಂದ ಅದು ಶುದ್ದವಾ ನೀರಾಗಿರಬೇಕು. ಆದರೆ ಈ ನೀರು ಹವೆಯಿಂದ ಕೆಳಗೆ ಬೀಳುವಾಗ ಹವೆಂಬ