ಪುಟ:ಸ್ವಾಮಿ ಅಪರಂಪಾರ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೪ ಸ್ವಾಮಿ ಅಪರಂಪಾರ

  ಕೊಡಗು, ಬಿದನೂರು. ಈ ಮೂರು ರಾಜ್ಯಗಳ ಜನ ಒಗ್ಗಟ್ಟಾದರೆ ಈ ಭಾಗದಲ್ಲಿ ಯಶಸ್ವಿಯಾಗಿ ಇಂಗ್ರೇಜಿಯವರನ್ನು ಇದಿರಿಸಬಹುದು. ಆಗ ಹಿಂದೂಸ್ಥಾನದ ಬೇರೆ ಕಡೆಗಳಲ್ಲೂ ಜನ ಏಳುತಾರೆ."
  "ಇದಕ್ಕೆಲ್ಲ ಭಾರೀ ಪ್ರಮಾಣದ ಪೂರ್ವಸಿದ್ಧತೆ ಬೇಕು, ಅಲ್ಲ?”
  "ಹ್ಞ. ಅದಾಗುವವರೆಗೆ ಸಂಧಾನದ ನಟನೆ ಮಾಡಬೇಕು."
  ಶಿವಾಚಾರ್ಯ ಸ್ವಾಮಿಗಳ ಮುಖಮುದ್ರೆ ಪ್ರಸನ್ನವಾಯಿತು. ಅವರು ಎವೆಗಳನ್ನು ಮುಚ್ಚಿ ಕೆಲ ನಿಮಿಷಗಳನ್ನು ಮಾತಿಲ್ಲದೆ ಕಳೆದರು.
  ಮೆಲ್ಲನೆ ಎವೆ ತೆರೆದು, ಅಪರಂಪಾರನನ್ನೇ ದಿಟ್ಟಿಸಿ,ಅವರೆಂದರು:
  "ಕಷ್ಟದ ದಾರಿ; ನಡೆಯದೆ ಅನ್ಯ ಗತಿಯಿಲ್ಲ."
  "ಅಳುಕುವುದಿಲ್ಲ, ಗುರುಗಳೇ."
  "ನನ್ನದೊಂದು ಹಂಬಲ! ಕೊಡಗು ಸ್ವತಂತ್ರ ರಾಜ್ಯವಾಗಿ ಮೆರೆಯಬೇಕುಅನ್ನೋದು.ಅದು ಈಡೇರತದೆ ಅಂತ ನಂಬಿದೇನೆ."
  "ತಾವು ಚಿಂತಿಸಬಾರದು."
  "ರಾಜಕುಮಾರನೊಬ್ಬ ಜಂಗಮನಾಗಿ ಈ ದೇಶಕ್ಕೆ ಬಂದು ರಾಜ್ಯ ಕಟ್ಟಿದ. ಈಗ ಜಂಗಮನಾಗಿ ಆ ರಾಜ್ಯವನ್ನು ನೀನು ಪುನಃ ಗಳಿಸತೀಯಾ?" 
  "ಅದಕೆ ಈ ಮನವರ್ಪಣ,ತನುವರ್ಪಣ."
  ಮತ್ತೊಮ್ಮೆ ಕೆಲ ಕ್ಷಣ ಮೌನವಾಗಿದ್ದು,ಸಿದ್ದಲಿಂಗನತ್ತ ಸ್ವಾಮಿಗಳು ದೃಷ್ಟಿ ಹೊರಳಿಸಿದರು:
  "ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ಬಲ್ಲೆವು, ಸಿದ್ಧಲಿಂಗು.ಗುರುಗಳಿಗೆ ಅಸ್ವಾಸ್ಥ್ಯಾ,ಅವರ

ಸನ್ನಿಧಿಯಲ್ಲೇ ಇದು ಸೇವೆ ಮಾಡಬೇಕು-ಅಲ್ಲವೇನಪ್ಪ?"

  "ಹೌದು. ತಂದೆ" ಎಂದ ಸಿದ್ಧಲಿಂಗ.
  "ಆದರೆ ನಮ್ಮ ಸೇವೆಗಿಂತ ರಾಷ್ಟ್ರದ ಸೇವೆ ದೊಡ್ಡದಪ್ಪ. ನೀನು ಅಪರಂಪಾರನ ಜತೆಗೇ ಇದ್ದರೆ ನಮಗೆ ಸಂತೋಷ."
  "ಎರಡಾಡಲಾರೆ, ಗುರುವೆ."
  "ಒಳ್ಳೇದು. ಹೋಗಿ, ಮಕ್ಕಳೆ.ಮಹಾದೇವ ಅನುಗ್ರಹಿಸುತಾನೆ. ಪಂಚಾಕ್ಷರಿ ಪ್ರಸಾದ ಕೊಡತಾನೆ. ದೇಶ ಸ್ವತಂತ್ರವಾದ ದಿನ ಇಲ್ಲಿಗೆ ಬಂದು ನಮಗೆ ಸುದ್ದಿ ಮುಟ್ಟಿಸಿ..."
  ...ಮೈಸೂರಿಗೆ ಅಭಿಮುಖವಾಗಿ ಅಪರಂಪಾರ ಸಿದ್ದಲಿಂಗನೊಡಗೂಡಿ ಪಯಣ ಬೆಳೆಸಿದ.
  ಅಪರಂಪಾರನೆಂದುಕೊಂಡ:
  "ಅಂತರಂಗದ ಅರಿವು ಬಹಿರಂಗದ ಕ್ರಿಯೆ ಈ ಉಭಯ ಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿ೦ಗಿತ್ತು ಮನಸೂತಕ..."
                             ೪೨
  ಕೈ ಹಿಡಿದು ಪಟ್ಟವನ್ನೇರಲು ನೆರವಾದವರೇ ರಟ್ಟೆ ಹಿಡಿದು ಪಟ್ಟದಿಂದ ಕೆಳಕ್ಕಿಳಿಸಿದ್ದರು ಕೃಷ್ಣರಾಜ ಭೂಪನನ್ನು. ಅದು ನದೆದು ಮೂರು ಸಂವತ್ಸರಗಲು ದಾಟಿದ್ದುವು. ಅಧಿಕಾರ