ಪುಟ:ಸ್ವಾಮಿ ಅಪರಂಪಾರ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಮಿ ಅಪರಂಪಾರ ಕಸಿದುಕೊಂಡಿದ್ದರೂ ಅರಮನೆಯಿಂದ ಹೊರಹಾಕಿರಲಿಲ್ಲ, ಹೊಸದಾಗಿ ಕಟ್ಟಿಸಿದ ರಾಜ ಗೃಹ, ಅದರೊಳಗೇ ಕೃಷ್ಣರಾಜ ವಾಸವಾಗಿದ್ದ. ಚಾಮುಂಡಿಬೆಟ್ಟದ ತಪ್ಪಲಲ್ಲಿ ಮೈಸೂರಿನ ಬೆಳವಣಿಗೆ ಕುಂಟುತ್ತ ಸಾಗಿತು, ಶ್ರೀರಂಗ ಪಟ್ಟಣ-ಮೈಸೂರುಗಳ ಅಂತರ ಒಂದು ಕೂಗಳತೆಯ ದೂರ ಎನ್ನುವಂತೆ, ಬಿಳಿಯ ಆಡಳಿತಾಧಿಕಾರಿಗಳ ಹಾಗೂ ಸೈನ್ಯಧಿಕಾರಿಗಳ ತಂಡಗಳೂ ಪರಿವಾರಗಳೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದುವು. ಆಂಗ್ಲರಿಗೆ ಅಧೀನನಾಗಿದ್ದು ದಿವಾನ ವೆಂಕಟರಮಣಯ್ಯ ಆಡಳಿತ ನಡೆಸುತ್ತಿದ್ದ. ಅರಮನೆಯ ತುಸು ದೂರದಲ್ಲಿ ಗರಡಿಮನೆ, ಇನ್ನೊಂದೆಡೆ ಅಗ್ರಹಾರ ಕೋಟೆಯ. ಆವರಣದೊಳಗೂ ಹೊರಗೂ ಅಲ್ಲಿ ಇಲ್ಲಿ ರಾಜಸಂಬಂಧಿಗಳ ನಿವಾಸಗಳು. ಮುಮ್ಮಡಿ ಕೃಷ್ಣರಾಜ ಒಡೆಯನ ಸಮೀಪದ ಸಂಬಂಧಿಗಳಲ್ಲೊಬ್ಬ, ಮಧ್ಯವಯಸ್ಕ ನಾದ ಅರಪುರದ ಬಸಪ್ಪಜಅರಸು. ಸ್ವಭಿಮಾನಿ. ಮೈಸೂರಿಗೊದಗಿದ ದುರ್ದೆಶೆಯಿಂದ. ವ್ಯಥಿತನಾಗಿ, ಏನನ್ನೂ ತಾವು ಮಾಡಲಾರೆವೆ ?–ಎಂದು ಪರಿತಪಿಸುತ್ತಿದ್ದ ವ್ಯಕ್ತಿ. ಅರಮನೆಗೆ ನಿಷ್ಟರಾಗಿದ್ದ ಕೆಲವರೊಡನೆ ಮಾತನಾಡಿ ಇಷ್ಟನ್ನು ತಿಳಿದುಕೊಂಡ ಅಪರಂಪಾರ, ಬಸಪ್ಪಜಿ ಅರಸನ ನಿವಾಸದೆದುರು ಪ್ರತ್ಯಕ್ಷನಾದ. ಆಳುಗಳು ಭಿಕ್ಷೆ ನೀಡಲು ಬಂದರು. ಜಂಗಮರಿಬ್ಬರು ಕದಲಲಿಲ್ಲ, ಅರಸನ ಮಕ್ಕಳು ಬಂದು ಕೇಳಿದರು : "ಇನ್ನೇನು ಬೇಕು, ಸ್ವಾಮಿಗೋಳೆ?”

"ನಿಮ್ಮ ಅಪ್ಪಾಜಿಯವರನ್ನು ಕಾಣಬೇಕು."
ಬಸಪ್ಪಜಿ ಅರಸು ಜಂಗಮರನ್ನು ಬರಮಾಡಿಕೊಂಡ. 

ರಾಜಕಾರಣವನ್ನು ಪ್ರಸ್ತಪಿಸಿದ ಕಾವಿಧಾರಿಗಳ ವಿಷಯದಲ್ಲಿ ಅವನಿಗೆ ಯಾಕೋ ಅವಿಶ್ವಾಸ. ಇವರು ಆಂಗ್ಲರ ಗೂಢಚಾರರಿರಬಹುದೆ? ತನಗೆ ಆಗದವರು ಯಾರಾದರೂ ಒಳಸಂಚು ಹೂಡಿ ಇವರನ್ನು ಕಳುಹಿರಬಹುದೆ?

 ಆದರೂ, ಎಚ್ಚರ ವಹಿಸಿ ಮಾತನಾಡಿದಷ್ಟೂ, ಮನಸ್ಸೆನ್ನುತಿತ್ತು :
“ಈ ಅಪರಂಪಾರನಂತೂ ಬರಿ ಜೋಳಿಗೆಯವನಂತಿಲ್ಲ. ಇವನು ಅಸಾಧಾರಣ ವ್ಯಕ್ತಿ ವಂಚಕರು ಹೀಗಿರುತಾರಾ?"

ಕೊಡಗಿನ ದುರವಸ್ಥೆ ಹಾಗೂ ಆಂಗ್ಲರ ಧೂರ್ತತನಗಳನ್ನು ಕುರಿತು ಅಪರಂಪಾರ ಆಡುತ್ತಿದ್ದ ಮಾತುಗಳನ್ನು ಕೇಳುತ್ತ, ಥಟ್ಟನೆ ಬಸಪ್ಪಾಜಿ ಅರಸನೆಂದ : "ಪೂರ್ವಾಶ್ರಮದಲ್ಲಿ ತಾವು ಹಾಲೇರಿ ವಂಶಸ್ಥರೊ?" ಮಂದಸ್ಮಿತವಾಗಿ ಅಪರಂಪಾರನೆಂದ:

“ಅಪನಂಬಿಕೆಯ ಗುಡ್ಡದಿಂದ ಬಯಲಿನ ವಿಸ್ತಾರಕೆ ಬಂದಿರಾ ? ಒಳ್ಳೆದು.. ನಿಮ್ಮ ಪ್ರಶ್ನೆಗೆ ಉತ್ತರ ಕೊಡುತೇವೆ. ಹಾಲೇರಿ ವಂಶಕ್ಕೂ ನಮಗೂ ಪೂರ್ವಜನ್ಮದಲ್ಲಿ ಸಂಬಂಧ ವಿದ್ದದ್ದು ನಿಜ. ಆದರೆ ಅದು ಮುಖ್ಯವಲ್ಲ." -
“ಕೊಡಗಿನ ಸಿಂಹಾಸನಕ್ಕೆ ಯಾರು ಹಕ್ಕುದಾರರು ಅನ್ನುತೀರಿ?"
“ಮೈಸೂರಿಗೆ ಯಾರು? ಮುಮ್ಮಡಿ ಕೃಷ್ಣರಾಜರಲ್ಲವೆ? ಹಾಗೆಯೇ ಕೊಡಗಿಗೆ ಚಿಕವೀರರಾಜರು. ಇಂಗ್ರೇಜಿಯವರಿಗೆ ಬೇಡವಾದ ಮಾತ್ರಕ್ಕೆ ಪ್ರಜೆಗಳಿಗೆ ಬೇಡವಾಗತಾ