ಪುಟ:ಸ್ವಾಮಿ ಅಪರಂಪಾರ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಮಿ ಅಪರಂಪಾರೆ ರೆಯೆ? ಪ್ರಾಕು ಮೈಸೂರನ್ನು ಯದುವಂಶದ ಅರಸರು ಆಳುತಾ ಇದ್ದಾಗ ಬಿದನೂರು ಸ್ವತಂತ್ರ ರಾಜ್ಯವಾಗಿತು. ಆ ಸ್ಥಿತಿ ಮತ್ತೆ ಬರಬೇಕಾದ್ದು ಸಾಜ ತಾನೆ?"

 ಬಸಪ್ಪಾಜಿ ತಲೆಯಾಡಿಸಿದನೇ ಹೊರತು, ಪ್ರತುತ್ತರ ನೀಡಲಿಲ್ಲ. ಅವನು ಯೋಚನೆಗೀಡಾದ.
 ಅಪರಂಪಾರನ ಗುರಿ ನಿರೂಪಣೆ ಆಕರ್ಷಕವಾಗಿತ್ತು.
 "ಕೊಡಗರು, ಗೌಡರು, ಶಿವಾಚಾರದವರು ಎಲ್ಲ ಸೇರಿ ಅರ್ಧ ಲಕ್ಷ ಜನರ ದಂಡು ಸಿದ್ಧಮಾಡತೇವೆ. ಮೈಸೂರಲ್ಲೂ ಇಕ್ಕೇರಿಯಲ್ಲೂ ಇನ್ನರ್ಧ ಲಕ್ಷ ಆಗ್ತದೆ! ಮರಮರ ಮಥನಿಸಿ ಕಿಚ್ಚು ಹುಟ್ಟಿ ಕಾಳ್ಗಿಚ್ಚಾಗುದೆ. ಪರಕೀಯರು ಉರಿದು ಹೊಗತಾರೆ."
"ಇಕ್ಕೇರಿಯವರು ಒಪ್ಪಿದ್ದಾರೇನು?"
"ಅಲ್ಲಿಗೆ ಇನ್ನು ಹೋಗತೇವೆ, ವೇಲೂರಿಗೂ ಹೋಗಿಬರತೇವೆ.ಎಲ್ಲಕ್ಕೂ ಮೊದಲು ನಿಮ್ಮ ಕೂಡೆ ಮಾತಾಡಬೇಕು, ಅನಿಸಿತು. ಬಂದೆವು."
"ನನ್ನಲ್ಲಿರಿಸಿದ ವಿಶ್ವಾಸಕ್ಕಾಗಿ ಧನ್ಯ. ಈ ಮಾತು ಹೊರಹೋಗೋದಿಲ್ಲ. ಕುದುರೆ ಹತ್ತೋಕೆ ಬಾರದೆ. ಕೋವಿ ಎತ್ತೋಕೆ ಆಗದೆ, ನಮ್ಮ ಜನ ನಿರ್ವೀರ್ಯರಾಗತಾ ಇದಾರೆ. ಮೊದಲು ಅವರಲ್ಲಿ ಜೀವ ತುಂಬಬೇಕು. ಆಗಲಿ : ಬಹಳ ಎಚ್ಚರದಿಂದ ನಾವು ಮು೦ದು ವರಿಯಬೇಕು..."
   ಸಂದೇಹದ ಮಂಪರು ಹರಿದು ಬಸಪ್ಪಾಜಿಯ ಮನಸ್ಸು ಜಾಗೃತವಾಗಿ, ತಾನು ಹಿಡಿಯ ಬೇಕಾದ ದಾರಿ ಇಂಥದೇ ಎಂಬುದನ್ನು ನಿಚ್ಚಳವಾಗಿ ಕಂಡಿತ್ತು.
  ಆಪರಂಪಾರನೆಂದ : 

"ಇವತ್ತು ರಾತ್ರೆ ಚಾಮುಂಡೇಶ್ವರಿಯ ಸನ್ನಿಧಿಗೆ ಹೋಗೋಣ. ಅಲ್ಲಿ ವಿಶ್ವಾಸದ ಆಣೆ ಆಗಲಿ." ಬಸಪ್ಪಾಜಿ ಅರಸನೆಂದ:

"ಒಪ್ಪಿಗೆ."


ಅರಸಾಳು, ಆನಂದಪುರ, ಕಪಾಲಿದುರ್ಗ-ಒಂದೊಂದು ಸ್ಥಳವೂ ಹೆಸರೂ ರೋಮಾಂಚನ ಉಂಟುಮಾಡುತ್ತಿದ್ದುವು.

 "ಇದು ಮಾಯಾಲೋಕ, ಸ್ವಾಮಿಯವರೆ" ಎಂದ ಸಿದ್ಧಲಿಂಗ.

ಅಪರಂಪಾರನಿಗೆ ಅದು ಪರಿಚಿತ ಸ್ಥಳ. ದೇಶಪರ್ಯಟನ ಮಾಡುತ್ತ ಹಿಂದೊಮ್ಮೆ ಬಂದಿದ್ದಾಗ ದೇವಗಂಗೆಯ ಬಳಿಯ ಹಳ್ಳಿಯಲ್ಲಿ. ರೈತನೊಬ್ಬನ ಮನೆಯಲ್ಲಿ, ದಾಸೋಹ ಕ್ಕಾಗಿ ಆತ ನಿಂತಿದ್ದ. ಅಪರಂಪಾರ ಒಂದು ಮನೆಯ ಮುಂದೆ ನಿ೦ತಾಗ, "ಶಿವ, ಶಂಭೋ, ಶಂಕರ" ಎಂದು ಸಿದ್ಧಲಿಂಗ ಹರನಾಮೋಚ್ಚಾರ ಮಾಡಿದ. ಸಂಗಡಿಗನತ್ತ ಮುಗುಳುನಗೆ ಬೀರಿ ಅಪರಂಪಾರ ಬಾಗಿಲು ತಟ್ಟಿ, "ಗುರುಮೂರ್ತಪ್ಪ, ಗುರುಮೂರ್ತಪ್ಪ" ಎಂದು ಕರೆದ.