ಪುಟ:ಸ್ವಾಮಿ ಅಪರಂಪಾರ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ "ಬೇಕಾದವರ ಮನೆಗೇ ಬಂದಿದೇವೆ. ಅನ್ನಿ!" ಎಂದ ಸಿದ್ಧಲಿಂಗ.

ಎಂಟು ಹತ್ತು ವರ್ಷಗಳ ಅಂತರದ ಬಳಿಕ ಕಂಡ ಶರಣನ ಗುರುತು ಹಿಡಿಯಲು ಗುರು ಮೂರ್ತಪ್ಪನಿಗೆ ಒಂದೆರಡು ನಿಮಿಷಗಳು ಬೇಕಾದುವು. ಇವನು ಅಪರಂಪಾರ ಎಂಬುದನ್ನು ಅರಿತಾಗ ಆತ ಹಿಗ್ಗಿದ.
 ತನ್ನ ಪಾದಗಳನ್ನು ಗುರುಮೂರ್ತಪ್ಪ ತೊಳೆಯುತ್ತಿರಲು ಅಪರಂಪಾರ ಕೇಳಿದ:
 "ಸೂರಪ್ಪನಾಯಕರನ್ನು ಭೇಟಿಯಾಗಬೇಕಲ್ಲ. ಅವರು ಎಲ್ಲಿ ಸಿಗಬಹುದು. ಗುರು

ಮೂರ್ತಿಪ್ಪ?"

 ಉದಕ ಮುಗಿದಿದ್ದ ತಂಬಿಗೆ ಗುರುಮೂರ್ತಪ್ಪನ ಕೈಯಿಂದ ತುಸು ಜಾರಿ ನೆಲಮುಟ್ಟಿತು. 

ಅವನೆಂದ :

 ಸ್ವಾಮಿಯವರಿಗೆ ಗೊತ್ತಿಲ್ಲಾಂತ ಕಾಣತದೆ. ನಾಯಕರೀಗ ಅಡವಿ ಸೇರಿದಾರೆ. ಇಂಗ್ರೇಜಿಯವರಿರುವ ಕಡೆ ಕಾಣಿಸಿಕೊಳ್ಳೋದಿಲ್ಲ. 
 "ಸ್ವಲ್ಪ ಸ್ವಲ್ಪ ಕೇಳಿ ಬಲ್ಲೆವು. ಬಿಳಿಯರ ಅಸ್ತಿತ್ವಕ್ಕೇ ನಾಯಕರು ಕಂಟಕಪ್ರಾಯರಾಗಿ ದಾರಂತೆ.' 
 "ಅದು ನಿಜ" ಎಂದು ನುಡಿದು ಗುರುಮೂರ್ತಪ್ಪ ಪೂಜಾಪರಿಕರಗಳನ್ನು ತರಲು ಎದ್ದು ಒಳಹೋದ. 

....ದಾಸೋಹ ಸ್ವೀಕರಿಸುತ್ತಿದ್ದ ಅಪರಂಪಾರ, ಮನೆತುಂಬ ಜನರಿದ್ದುದನ್ನು ಗಮನಿಸಿದ.

"ಬೀಗರೊ ನೆಂಟರೊ ಬಂದ ಹಾಗಿದೆ" ಎಂದ
 ಗುರುಮೂರ್ತಪ್ಪ ಏನನ್ನೂ ಹೇಳದೆ ನರೊಸುನಕ್ಕ.
ಪವಡಿಸಿ ದಣಿವಾರಿಸಿಕೊಳ್ಳಲು ಸಿದ್ದಲಿಂಗ ಅಣಿಮಾಡುತ್ತಲಿದ್ದಂತೆ, ಅವರಿದ್ದ ಕೊಠಡಿ ಯೊಳಕ್ಕೆ ಯಾರೋ ಕಾಲಿಟ್ಟರು.

"ಶರಣು, ಸ್ವಾಮಿಗಳೆ, ನಾನು ಸೂರಪ್ಪ."

ಧ್ವನಿಯಲ್ಲಿ ಒಲವು ತುಂಬಿ ಅಪರಂಪಾರನೆಂದ:
"ಚೆನ್ನಾಯಿತು! ಭಾಗೀರಥಿ ಇಷ್ಟೊಂದು ಸುಲಭಪ್ರಪ್ತಳು ಅಂತ ನಾವು ತಿಳಿದಿರ ಲಿಲ್ಲ. ಪ್ರಾಯಶಃ ದೇವಗಂಗೆಯ ಸಮಿಾಪದಲ್ಲೇ ನಾವಿರೋದರಿಂದ ಹೀಗಾಗಿದೆಯೋ ಕಾಣೆ! ಬನ್ನಿ, ಕುಳಿತುಕೊಳ್ಳಿ."
  ಮಾಟವಾದ ನಿಲುವು. ಕುಡಿಗಳನ್ನು ಹುರಿಗೊಳಿಸಿದ ಕಿರುಮಿಾಸೆ ಮುಖವನ್ನು ಆಕರ್ಷ ಣೀಯವಾಗಿ ಮಾಡಿತ್ತು. ಹೊದೆದುಕೊಂಡಿದ್ದ ಉತ್ತರೀಯ. ಹರವಾದ ಎದೆ ಭುಜಗಳನ್ನೂ ಬಲಿಷ್ಟ ತೋಳುಗಳನ್ನೂ ಮರೆಮಾಡಲು ಶಕ್ತವಾಗಿರಲಿಲ್ಲ.

ಸೂರಪ್ಪನೆಂದ:

"ತಮ್ಮ ವಿಷಯ ನಾನು ಬಲ್ಲೆ ಎಂದರೆ ಸ್ವಾಮಿಗಳಿಗೆ ಆಶ್ಚರ್ಯವಾಗಬಹುದು."
"ಗುರುಮೂರ್ತಪ್ಪ ಹೇಳಿದ್ದಾನು."
"ಅಲ್ಲ. ವರ್ಷಗಳಿಗೆ ಹಿಂದೆ ಬಿರುಗಾಳಿಯ ಹಾಗೆ ತಾವು ಊರೂರು ಸುತ್ತುತ್ತಿದ್ದಾಗಲೇ ನನ್ನ ಗೂಢಚಾರರಿಂದ ತಿಳಿದೆ. ಆವರ್ತಿಗೊಮ್ಮೆ ಬರಬೇಕೆಂತಲೂ ಇತ್ತು. ಆಗಲಿಲ್ಲ. ತಮ್ಮನ್ನು ಕಾಣಬೇಕೆಂಬ ಆಸೆ ಅನಿರೀಕ್ಷಿತವಾಗಿ ಈಗ ಫಲಿಸಿದೆ.”

ನಾವೂ ನಿಮ್ಮನ್ನು ನೋಡಬೇಕೆಂತಲೇ ಈ ಕಡೆಗೆ ಬಂದೆವು. ಇಕ್ಕೇರಿಗೂ ಮಡಕೇರಿಗೂ