ಪುಟ:ಸ್ವಾಮಿ ಅಪರಂಪಾರ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೮ ಸ್ವಾಮಿ ಅಪರಂಪಾರೆ

ಇರುವ ಸಂಬಂಧ ನಿಮಗೆ ತಿಳಿಯದ್ದಲ್ಲ. ಸೋಮಶೇಖರ ನಾಯಕರೂ ದೊಡ್ಡವೀರ ರಾಜೇಂದ್ರ ಒಡೆಯರೂ ಪರಮಾಪ್ತರಾಗಿದ್ದರು.'

 "ನಾನು ಆರಿಯೆನೆ?"
 "ಆದರೆ ಈಗ___"

...ಸೂರಪ್ಪ ಕುಶಾಗ್ರಮತಿಯಾಗಿದ್ದ, ಯಾವುದನ್ನೂ ಬಿಡಿಸಿ ಹೇಳಬೇಕಾದ ಅಗತ್ಯ ವಿರಲಿಲ್ಲ.

 ತಾನು ಬಂದ ಉದ್ದೇಶವನ್ನು ಅಪರಂಪಾರ ಪ್ರಸ್ತಾಪಿಸಿದೊಡನೆಯೇ ಸೂರಪ್ಪನ ಕಣ್ಣುಗಳು ಮಿಂಚಿದುವು.
     ಘಟ್ಟದ ಕೆಳಗೆ ಕನ್ನಡ ಜಿಲ್ಲೆಗೆ ಹೋಗುವ ಇರಸಾಲು-ಟಪಾಲುಗಳನ್ನು ತಡೆದು ವಶಪಡಿಸಿಕೊಳ್ಳೋದು. ಅಡವಿದಾರಿಯಲ್ಲಿ ಸಣ್ಣ ಸಣ್ಣ ಇಂಗ್ರೇಜಿ ತುಕ್ಕಡಿಗಳ ಮೇಲೆ ಹಲ್ಲೆ ಮಾಡೋದ್ದು—ಇದೀಗ ಈಗಿನ ನನ್ನ ಕಾರ್ಯಕ್ರಮ, ಮೈಸೂರಿನ ಅರಸ ಮೆತ್ತಗಿನ ಮನುಷ್ಯ. ಆತ ಹೋರಾಡುತಾನೆ ಅನ್ನೋ ನಂಬಿಕೆ ನನಗಿಲ್ಲ. ಬಸಪ್ಪಾಜಿಯವರ ಮಾತು ಬೇರೆ ಅನ್ನಿ. ಆಗಲಿ, ನೋಡೋಣ. ಇಲ್ಲಿಗೆ ಬರುತ್ತ ಬೆಟ್ಟದ ಸಾಲುಗಳು ಚಕ್ರಾಕಾರದಲ್ಲಿ ಇರುವುದನ್ನು ಕಂಡಿರಲ್ಲ? ಬಿದನೂರು ಸ್ವತಂತ್ರ ರಾಜ್ಯವಾಗಿರಬೇಕು ಅಂತ ನಿಸರ್ಗದ ನೇಮವಿತ್ತು. ಆ ಸ್ವಾತಂತ್ರ್ಯವನ್ನು ನಮ್ಮವರು ಉಳಿಸಿಕೊಳ್ಳಲಿಲ್ಲ. ಈಗ ಪುನಃ ಅದನ್ನು ಗಳಿಸತೇವಾ? ಚಿಕವೀರರಾಜರೂ ನನ್ನ ಸ್ನೇಹ ಬಯಸಿದ್ದರು. ಜತೆಯಾಗಿ ಹೋರಾಡುವ ವಿಷಯ ಬಸವಯ್ಯನ ಮೂಲಕ ಆಡಿದ್ದರು. ಆದರೂ ಗ್ರಹಗಳು ಮುನಿದು ಕೊಡಗು ಪರಾಧೀನವಾಯಿತು..." ಎಂದು, ತನ್ನ ವಿಚಾರಗಳನ್ನು ಸೂರಪ್ಪ ಅಪರಂಪಾರನ ಮುಂದಿರಿಸಿದ.
  "ಅದೆಲ್ಲ ನಿಜ, ನಾಯಕರೆ. ಇಂಗ್ರೇಜಿಯವರನ್ನು ಹೊಡೆದೋಡಿಸುವ ಕೆಲಸ ನಾಳೆಯಲ್ಲ ಇವತ್ತೇ ಆಗಲಿ, ಇವತ್ತಲ್ಲ ಈಗಲೇ ಆಗಲಿ-ಅಂತ ನಾವು ಹೇಳುತ್ತಿಲ್ಲ. ಸಿದ್ಧತೆಗೆ ಸಮಯ ಬೇಕು. ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ? ಜೊಳ್ಳು ತೂರಿದಲ್ಲಿ ಬತ್ತವುಂಟೆ? ಎಳ್ಳನ್ನೂ ಒಳ್ಳೆಯ ಬತ್ತವನ್ನೂ ನಾವು ಮೊದಲು ಸಂಗ್ರಹಿಸಬೇಕು. ನೆಲನ ಶೋಧಿಸಿ ನೆಲೆಯನರಿ ಯದೆ ಕೆರೆಯ ಕಟ್ಟಿಸುತಾರಾ ? ಪಾತಾಳದಗ್ಗವಣಿಯ ನೇಣಿಲ್ಲದೆ, ಸೋಪಾನದ ಬಲದಿಂದ ಲ್ಲದೆ, ತೆಗೆಯಬಹುದೆ?"
 ಅಪರಂಪಾರನ ಮಾತುಗಳನ್ನು ಏಕಾಗ್ರಚಿತ್ತದಿಂದ ಸೂರಪ್ಪ ಆಲಿಸಿದ.
 ನಿಟ್ಟುಸಿರುಗರೆದು ಆತನೆಂದ: 
 "ನಾವು ಧರ್ಮ ಮರೆತು ಕೆಟ್ಟೆವು. ಗುರುಮನೆಯವರಾದ ತಾವು ರಾಜಕಾರ್ಯದ ಹಿತೋಪ ದೇಶ ಮಾಡುವಾಗ, ಹೆಚ್ಚ ಹೆಚ್ಚಾಗಿ ನನಗೆ ಅದು ಮನವರಿಕೆಯಾಗತದೆ, ಅಹಂಕಾರದಿಂದ ಮೆರೆದು ಪಾಪಿಗಳಾದೆವು. ನಮ್ಮೊಳಗಿನ ಅನೈಕ್ಕವೇ ನಮಗೆ ಮುಳಿವಾಯಿತು...ಆಗಲಿ, ಸ್ವಾಮಿಯೋರೆ.ನನ್ನ ಕರ್ತವ್ಯ ನಾನು ಪಾಲಿಸತೇನೆ." 
 "ಜನ ಕಣ್ಣೋಳಗೆ ಕಣ್ಣಿರ್ದು ಕಾಣಲರಿಯರಯ್ಯ! ಕಿವಿಯೊಳಗೆ ಕಿವಿಯಿರ್ದು ಕೇಳಲರಿ ಯರಯ್ಯ! ಅವರನ್ನು ನಾವು ಎಚ್ಚರಿಸಬೇಕು."

"ತಮ್ಮ ವಾಣಿಗೆ ಪ್ರಜೆಗಳು ಕಿವಿಗೊಡುತಾರೆ, ಸಂಶಯವಿಲ್ಲ."

"ನಾವು ನಿಮ್ಮ ಕೂಡೆ ಸಂಬಂಧವಿಟ್ಟಿರತೇವೆ."