ಪುಟ:ಸ್ವಾಮಿ ಅಪರಂಪಾರ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ

೧೬೧

ಶಂಕರಪ್ಪನನ್ನು ಸುತ್ತುವರಿದರು. ಮೂವರು ಅಪರಂಪಾರನನ್ನು ಹಿಡಿದರು. ಸ್ವಾಮಿ
ಎತ್ತಿದ ಕೈಬಂದೂಕನ್ನು ಒಬ್ಬ ಕಸಿದುಕೊಂಡ.
ಶಂಕರಪ್ಪ ಪ್ರತಿಭಟಿಸಿದ: ಅಪರಂಪಾರ ತೋಳು ಬೀಸಿದ.
ಆ ಜನರ ಮುಖಂಡನಂತೆ ಕಂಡವನೊಬ್ಬ ಗದರಿ ನುಡಿದ:
"ತೆಪ್ಪಗಿರಿ! ಗದ್ದಲ ಮಾಡಿದರೆ ಇಲ್ಲೇ ಸುಟ್ಟುಹಾಕತೇವೆ."
"ಮೂರ್ಖ! ಸುಡುವವನು ಹರನೊಬ್ಬನೇ!"
–ಎಂದು ಗರ್ಜಿಸಿದ,ಅಪರಂಪಾರಸ್ವಾಮಿ.
ಯಾರೋ ಅವನ ಮುಖಕ್ಕೆ ಗುದ್ದಿದರು.
ಆ ಜನ ಸನ್ನದ್ಧರಾಗಿ ಬಂದಿದ್ದರು. ಅವರಲ್ಲಿ ಹುರಿಮಾಡಿದ ಹಗ್ಗಗಳಿದ್ದುವು.
ಕಬ್ಬಿಣದ ಸಂಕೋಲೆಯಿತ್ತು.
ಶಂಕರಪ್ಪನನ್ನೂ ಅಪರಂಪಾರನನ್ನೂ ಅವರು ನೆಲಕ್ಕೆ ಕೆಡವಿದರು. ಬಾಯಿಗಳಿಗೆ
ಬಟ್ಟೆ ತುರುಕಿದರು.
ಶಂಕರಪ್ಪನನ್ನು ಒಂದು ಮರಕ್ಕೆ ಬಿಗಿದು ಬಲವಾಗಿ ಕಟ್ಟಿದರು. ಅಪರಂಪಾರನ ಕೈ
ಗಳಿಗೂ ಕಾಲುಗಳಿಗನೂ ಸಂಕೋಲೆ ತೊಡಿಸಿದರು.
ಕುದುರೆಗಳು ಅಸಹಾಯವಾಗಿ ಕೆನೆದಾಡಿದುವು. ಹಗ್ಗಹರಿಯಲೆತ್ನಿಸಿದುವು.
ಮಂಜಣ್ಣ ಅವುಗಳನ್ನು ಸಂತೈಸಿದ.
ಆ ಜನರು ಅಪರಂಪಾರನ ಬಳಿಗೆ ಕುದುರೆಗಳನ್ನು ಎಳೆದು ತಂದರು.
"ಈ ಕುದುರೆ" ಎಂದ ಮಂಜಣ್ಣ, ಅಪರಂಪಾರ ಕುಳಿತು ಬಂದಿದ್ದರ ಕಡೆಗೆ ಬೊಟ್ಟು
ಮಾಡಿ.
ಆ ಜನರ ನಾಯಕ ಅದನ್ನೇರಿದ. ಅವನ ಬೆನ್ನಬಳಿ ಬೋರಲಾಗಿ ಅಪರಂಪಾರನನ್ನು
ಕೆಡವಿದರು. ಹಗ್ಗಗಳಿಂದ ಬಿಗಿದು ಜೀನಿಗೆ ಕಟ್ಟಿದರು. ಮಂಜಣ್ಣ ತನ್ನ ಕುದುರೆಯನ್ನು
ಹತ್ತಿದ.
"ನ್ಯಾಮಣ್ಣ, ನೀನು ಬಂದ್ದಿಡು. ಉಳಿದೋರೆಲ್ಲ ಹಿಂದಿನಿಂದ ಬನ್ನಿ, ಎಂದ ಮುಖ್ಯಸ್ಥ.
ಆತ ಹೆಸರು ಹಿಡಿದು ಕರೆದ ಮನುಷ್ಯ, ಶಂಕರಪ್ಪನ ಕುದುರೆಯನ್ನೇರಿದ.
ತಾನು ಕೂಗಿ ಕರೆಯಬೇಕು, 'ಸ್ವಾಮಿಯೋರೆ-ಸ್ವಾಮಿಯೋರೆ' ಎನ್ನಬೇಕು -
ಎಂದು ಶಂಕರಪ್ಪ ಚಡಪಡಿಸಿದ. ಆದರೆ ಧ್ವನಿ ಹೊರಬೀಳಲಿಲ್ಲ.
ಕುದುರೆಗಳು ವೇಗವಾಗಿ ಹೊರಟು ಕಣ್ಮರೆಯಾದುದನ್ನೂ ತಂಡದ ಉಳಿದ ನಾಲ್ವರು
ಅವುಗಳನ್ನು ಹಿಂಬಾಲಿಸಿ ನಡೆದುಹೋದುದನ್ನೂ ಶಂಕರಪ್ಪ ಅಸಹಾಯನಾಗಿ ಪಿಳಿಪಿಳಿ
ಕಣ್ಣು ಬಿಡುತ್ತ ನೋಡಿದ.

೫೮

ಕೈದಿಯನ್ನು ಕಂಡ ಲೀಹಾರ್ಡಿ ತನಗಾದ ಆನಂದವನ್ನು ಬಚ್ಚಿಡಲು ಶಕ್ತನಾಗಲಿಲ್ಲ.
ಅವನು ಉದ್ಗರಿಸಿದ:
“ಹುರ್ರಾ !”
ದೂತರ ಮುಖ್ಯಸ್ಧ ಆರಿಕೆಮಾಡಿದ :
1 l