ಪುಟ:ಸ್ವಾಮಿ ಅಪರಂಪಾರ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೧೭೯ ಗಳ ಝಣತ್ಕಾರದ ಹಿನ್ನೆಲೆಯಲ್ಲಿ ಆತ ಮತ್ತೊಮ್ಮೆ ಮದಗಜವಾಗಿ, ಸಿಪಾಯರ ನಡುವೆ ನಡೆದ.

                        ೬೩
 ಮುಂಜಾನೆಯಿಂದಲೇ ಮೋಡ ಕವಿದಿತ್ತು. ಸೂರ್ಯ ಉದಯಿಸಿದ್ದ. ಮೂರು ನಾಲ್ಕು ಘಳಿಗೆಗಳ ಕಾಲ ಅವನ ಮಾರ್ಗಕ್ರಮಣವೂ ನಡೆದಿತ್ತು.ಆದರೆ ಆತನ ಮುಖ ಕಂಡವರಿಲ್ಲ.
 ಬೆಳಿಗ್ಗೆ ಒಂಭತ್ತು ಘಂಟೆಯ ವೇಳೆಗೆ ವಿಚಾರಣೆ ಮುಗಿಯಿತು. ಸತ್ತ ಸಿಪಾಯಿ 'ಮಹಾದೇವ' ಎಂದು ಹೆಸರನ್ನು ಕೊಟ್ಟಿದ್ದ. ಇತ್ತೀಚೆಗೆ ದಂಡಿಗೆ ಭರ್ತಿಯಾದವನು. ಶಂಭು ಎಂಬವನು ಅವನ ಸಂಗಡಿಗ. ಈ ನಡುವೆ ಇಬ್ಬರ ವರ್ತನೆಯೂ ಸಂಶಯಾಸ್ಪದವಾಗಿ ಕಂಡಿತ್ತು. ಇವರಿಬ್ಬರೂ ಪಿತೂರಿಗಾರರೆಂಬುದು ಸ್ಪಷ್ಟವಾಗಿತ್ತು.
 'ಮಲ್ಲಪ್ಪ –'ಮಲ್ಲಪ್ಪ' ಎಂದು ಗುಂಡು ತಗಲಿ ಉರುಳಿದ ಸಿಪಾಯಿಯನ್ನು ಅಪರಂಪಾರ ಕರೆದುದನ್ನು ಕಾವಲುಗಾರ ಕೇಳಿದ್ದ.
 ಅಪರಂಪಾರನನ್ನು ಪ್ರಶ್ನಿಸಲಾಯಿತು:
"ಅವನ ನಿಜವಾದ ಹೆಸರೇನು?”
 ಉತ್ತರ ಬರಲಿಲ್ಲ.
 ಈ ಹಂಚಿಕೆಯಲ್ಲಿ ಬೇರೆ ಯಾರು ಯಾರು ಸೇರಿಕೊಂಡಿದಾರೆ?"
 ಮೌನ.
“ಮೂಕನಾದೆಯಾ ನೀನು? ತಾಳು, ನಿನ್ನ ಕುರುಡ ಮಾಡ್ತೇವೆ!"
 ಕೊಡಲಾದ ತೀರ್ಪು :
 "ಅಪರಂಪಾರನ ಎರಡೂ ಕಣ್ಣುಗಳನ್ನು ಕೀಳಬೇಕು!"
 ಆಜ್ಞೆ ಕೇಳಿ, ಬಿಳಿಯ ಸಿಪಾಯರ ಕಣ್ಣುಗಳು ಮಿನುಗಿದುವು. ಕರಿಯ ಸಿಪಾಯರಲ್ಲಿ ಕೆಲವರ ಮುಖಗಳು ಮತ್ತಷ್ಟು ಕಪ್ಪಿಟ್ಟುವು.
ತೀರ್ಪನ್ನು ಕೃತಿಗಿಳಿಸಲು ನಿಯೋಜಿತರಾದವರು ಇಬ್ಬರು ಆಂಗ್ಲ ಸಿಪಾಯರು :   ಅಪರಂಪಾರನನ್ನು ಸೆರೆಮನೆಯ ಕಛೇರಿಯ ಮುಂದಿನ ಅಂಗಳಕ್ಕೆ ನಡೆಸಿ ತಂದರು.    ಅಪರಂಪಾರ ಕ್ಷಮೆಯಾಚಿಸಲಿ-ಎಂದು, ಬೆದರಿಸುವುದಕ್ಕೋಸ್ಕರ ಆ ತೀರ್ಪು ಕೊಟ್ಟರೆ? 

ಆಂಗ್ಲರ ವಿಚಾರಣೆ ತೀರ್ಮಾನಗಳ ವೈಖರಿಯನ್ನು ಬಲ್ಲ ಯಾರಿಗೂ ಅಂತಹ ಭ್ರಮೆ ಇರುವುದು ಸಾಧ್ಯವಿರಲಿಲ್ಲ.

  ಒಬ್ಬನಿಗೆ ಮಾತ್ರ ಅಂತಹ ಭ್ರಮೆ ಇತ್ತು. ಆತ ಡಾಕ್ಟರ್ ಕ್ಯಾಂಪ್ಬೆಲ್. ಸ್ವಲ್ಪ ಸಮಯದ ಹಿಂದೆಯಷ್ಟೇ ಆ ತರುಣ ವಿಲಾಯತಿಯಿಂದ ಹಿಂದೂಸ್ಥಾನಕ್ಕೆ ಬಂದಿದ್ದ. 'ದರಬಾರಿನ ವೈದ್ಯ' ಎಂದು ಬೆಂಗಳೂರು ಠಾಣ್ಯಕ್ಕೆ ಆತ ಕಳುಹಲ್ಪಟ್ಟಿದ್ದ. ಗುಂಡು ತಗಲಿದ ಸಿಪಾಯಿಯ ಶವ ಪರೀಕ್ಷೆಗೆಂದು ಈಗ ಅವನನ್ನು ಕರೆಸಲಾಗಿತ್ತು. ವಿಚಾರಣೆ ಮುಗಿಯುವವರೆಗೂ ಸೆರೆಮನೆಯ ಆವರಣದಲ್ಲಿರಬೇಕೆಂದು ಅವನು ಆಜ್ಞಪ್ತನಾಗಿದ್ದ.
 ಒಂದು ಬಂಡಾಯದ ನಾಯಕನೆಂದು ಹೇಳಲಾದ ಅಪರಂಪಾರನನ್ನು–ಒಬ್ಬ ವಿರಕ್ತ