ಪುಟ:ಸ್ವಾಮಿ ಅಪರಂಪಾರ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೮ ಸ್ವಾಮಿ ಅಪರಂಪಾರ ಕಾವಲುಗಾರನೆಂದ :

 "ಇವನು ಕೊಡಗಿನ ಜಂಗಮ ! ಹಿಡಿದು ಕಟ್ಟಿ! ಸಂಕೋಲೆ ತನ್ನಿ ! ಕಾಲಿಗೆ-ಕ್ಕೆಗೆ!” 
 "ದೀಪ ಈ ಕಡೆ ಹಾಯಿಸು. ನೋಡಿದಿರಾ ? ಹಗ್ಗ !” 
 "ಯಾರಾದರೂ ಹೊರಬದಿಗೆ ಓಡಿ, ಅಲ್ಲಿ ಇವನ ಕಡೆಯವರು ಕಾದಿರತಾರೆ." 
ಅಪರಂಪಾರನ ಮೆದುಳಲ್ಲಿ ಮಿಂಚಿತು. ಇವರು ಆ ಕಡೆಗೆ ಹೋದರೆಂದರೆ ಶಂಕರಪ್ಪ ಸಿಕ್ಕಿಬೀಳುವ.

ಅವನೆ೦ದ :

 "ನಾ ಒಬ್ಬನೇ ಕಾಣಿರೋ! ನನ್ನ ಹಿಡಿಯಿರಿ!"
 “ನಿನ್ನನ್ನೂ ಹಿಡೀತೀವಿ. ನಿನ್ನಪ್ಪನ್ನೂ ಹಿಡೀತೀವಿ, ಬೋ-ಮಗನೆ"
ಅಪರಂಪಾರ ಅಂದುಕೊಂಡ:
 "ಇಲ್ಲ, ಶಂಕರಪ್ಪ ಸಿಕ್ಕಿಬೀಳಲಾರ. ಗುಂಡಿನ ಸಪ್ಪಳ, ಈ ಗದ್ದಲ, ಕೇಳಿ ಅವನು ತಪ್ಪಿಸಿಕೊಂಡಿರುತಾನೆ."
ಕಾವಲುಗಾರನೆ೦ದ :
 "ಅಲ್ಲ-ಸಿಪಾಯಿ ದಿರಸು ಹಾಕ್ಕೊಂಡಿರೋ ಇವನು ಯಾರು? ನಮ್ಮವರನ್ನೇ ನಾ ಕೊಂದನಾ?" 
 ಗುಂಡು ತಗಲಿ ಸತ್ತವನ ರುಂಡವನ್ನು ಕಂದೀಲುಗಳ ಪ್ರಭೆ ಆವರಿಸಿತು.
ಅದೇ ಕಾವಲುಗಾರ ಉದ್ಗರಿಸಿದ: 
 "ಇವನೇ ಕಣಪೋ ನನಗೆ ಸುವಾಸನೆ ತಂಬಾಕ ತಿನಿಸಿದವನು ! ನಮ್ಮ ಸಿಪಾಯಿಾನೇ ಅಂತಿದ್ದೆ, ಬೀಗದ ಕೈಗೊಂಚಲು ಎಲ್ಲಿ ಕಳೆಯಿತೋ ಅಂತ ದಿಗಿಲಾಗಿತ್ತು. ತೂಕಡಿಸಿ ಬಿದ್ದವನಿಗೆ ಎಚ್ಚರವಾದಾಗ ಅದಿರಲಿಲ್ಲ! ಇವನು ಕದ್ದು ಇಲ್ಲಿ ಎಲ್ಲೋ ಎಸೆದಿರಬೇಕು."         "ಸಂಕೋಲೆಗಳು ಬಂದುವು. ಹಿಡಿದು ನಿಲ್ಲಿಸಿದ್ದ ಅಪರಂಪಾರನ ಕೈಕಾಲುಗಳಿಗೆ
 ಅವುಗಳನ್ನು ತೊಡಿಸಿದರು.
 ಸೆರೆಮನೆಯ ಅಧಿಕಾರಿ ಇಬ್ಬರು ಆಂಗ್ಲ ಸಿಪಾಯರ ಜತೆ ಓಡಿಬಂದ.
 "ಎಲಾ ಫಕೀರ!" ಎಂದ ಆತ, ಅಪರಂಪಾರನನ್ನು ನೋಡಿ.
 ಸತ್ತವನನ್ನೂ ಅವನು ದಿಟ್ಟಿಸಿದ.
 ಸಿಪಾಯಿಗಳ ಕಡೆ ತಿರುಗಿ ಅವನೆಂದ :
 "ಇದು ರಾಜಕೀಯ ಪ್ರಕರಣ. ಚೀಫ್ ಕಮಿಾಶನರಿಗೆ ವರದಿ ಮಾಡ್ಬೇಕು. ಈ ಸತ್ತ     ಸಿಪಾಯಿಯ ಬಗ್ಗೆ ವಿಚಾರಿಸಬೇಕು. ಇದರ ಹಿಂದೆ ದೊಡ್ಡ ಒಳಸಂಚಿದ್ದೀತು. ಆ ಫಕೀರ 

ನನ್ನು ಕಛೇರಿಯ ಪಕ್ಕದ ಕೊಠಡಿಯಲ್ಲಿ ಬಂಧನದಲ್ಲಿಡಿ. ನಾನು ಚೀಫ್ ಕಮಿಾಶನರನ್ನು ಎಬ್ಬಿಸಿ ಕರೆತರತೇನೆ."

 ಹೆಬ್ಬಾಗಿಲಿನಿಂದ ಹೊರಹೋಗಿ ಗೋಡೆಯನ್ನು ಬಳಸಿ ಬಂದವರು, ಯಾರನ್ನೂ ಕಾಣಲಿಲ್ಲ. ಪ್ರಾಕಾರದಿಂದ ಇಳಿಸಿ ಮರದ ಕಾಂಡಕ್ಕೆ ಬಿಗಿದಿದ್ದ ಹಗ್ಗದ ಹೊರತಾಗಿ ಬೇರೇನೂ ಅಲ್ಲಿರಲಿಲ್ಲ.
 ಮಲ್ಲಪ್ಪ ಮಡಿದ ಘಳಿಗೆಯಲ್ಲಿ ಅಪರಂಪಾರನ ಕಣ್ಣುಗಳಿಂದ ಸುರಿದ ಕಂಬನಿ ಎಂದೋ ಆರಿಹೋಗಿತ್ತು. ಆ ಕಣ್ಣುಗಳೀಗ ಎರಡು ಕೆಂಡಗಳಂತೆ ಪ್ರಜ್ವಲಿಸುತ್ತಿದ್ದುವು. ಸಂಕೋಲೆ