ಪುಟ:ಸ್ವಾಮಿ ಅಪರಂಪಾರ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಅಪರ೦ಪಾರ - ○95C) "ಮುಟ್ಟದಿರಿ, ಮುಟ್ಟದಿರಿ! ಹೊಲಸು ಕೈಗಳಿಂದ ನನ್ನ ಮಲಿನ ಮಾಡದಿರಿ!" ಅವನು ಪ್ರತಿಭಟಿಸುತ್ತಿದ್ದಂತೆಯೇ ಕಣ್ಣುಗಳಿಗೆ ಔಷಧಿ ಲೇಪಿಸಿ ಪಟ್ಟಿ ಕಟ್ಟಲಾಯಿತು. ಕಾಂಪ್ಬೆಲ್ ಅಂದ: "ಗುಣವಾಗುವವರೆಗೂ ಕೈಗಳ ಬೇಡಿ ಹಾಗೆಯೇ ಇರಲಿ, ಗಾಯವನ್ನು ತುರಿಸಿದ ನೆಂದರೆ ಮೈಗೆ ನಂಜೇರೀತು." - ಸೆರೆಮನೆಯ ಆವರಣದಲ್ಲಿ ಒಂಟಿಯಾಗಿ ಪ್ರತ್ಯೇಕವಾಗಿದ್ದ ಕೊಠಡಿಯೊಂದಿತು, ಅಲ್ಲಿಗೆ ಅಪರಂಪಾರನನ್ನು ಕರೆದೊಯ್ಯಬೇಕೆಂದು ಸೆರೆಮನೆಯ ಅಧಿಕಾರಿ ಆಜ್ಞಾಪಿಸಿದ. ಕಾಲುಗಳ ಸಂಕೋಲೆಯನ್ನು ಬಿಚ್ಚಿ ಕೈದಿಗೆ ಸಿಪಾಯರೆಂದರು: “ನಡೆ !” ಅಪರಂಪಾರ ತಲೆ ಎತ್ತಿ ಎದು ನಿಂತ. ಅವನ ಮೈಯೆಲ್ಲ ಕಂಪಿಸುತ್ತಿತು, ಆತನೇ ಗೆದ್ದವನು, ಉಳಿದವರು ಕೈದಿಗಳು–ಎನ್ನುವಂತಿತು ಅವನ ರೀವಿ. ಕಣ್ಣು ಕಾಣಿಸದಿದ್ದರೂ ಧೀರನಡಿಗೆಯ ಹೆಜ್ಜೆಗಳನ್ನಿಡುತ್ತ ಸಿಪಾಯರ ಜತೆ ಆತ ನಡೆದ. .ಸೂರ್ಯನೀಗ ಮುಖ ತೋರಿಸಿ ಉದಾರವಾಗಿ ಬೆಳಕು ಚೆಲ್ಲಿದ. ಆದರೆ ಅಪರಂಪಾರನ ಪಾಲಿಗೆ ಹಗಲೇನು ? ಇರುಳೇನು ? ಅವನ ಮು೦ದಿತು ಏಕಪ್ರಕಾರವಾದ ಅನಂತ ಕಾಲ. ಕೊಠಡಿಯಲ್ಲಿ ಒಬ್ಬನೇ ಉಳಿದಾಗ ಆತನೆಂದ: - "ಹಿಡಿವ ಕೈಯ ಮೇಲೆ ಕತ್ತಲೆಯಯಾ! ನೋಡುವ ಕಂಗಳ ಮೇಲೆ ಕತ್ತಲೆಯಯಾ! ಗುಹೇಶ್ವರನೆಂಬುದು ಅತ್ತಲೆಯಯಾ!" ኢዌ ದಿನಗಳು ಕಳೆದುವು. ಅಪರಂಪಾರನ ಗಾಯ ಮಾಸಿತು. ಮೈಗಾದ ಗಾಯ.. ಮನಸ್ಸಿ ನದು ಮಾತ್ರ ತೀವ್ರ ನೋವಿನ ನಿತ್ಯ ಕಾಹಿಲೆಯಾಯಿತು. ಅಪರಂಪಾರನಿಗೆ ಆಶ್ಚರ್ಯ ಉಂಟುಮಾಡಿದ ಒಂದು ಸಂಗತಿಯೆಂದರೆ, ಆಂಗ್ಲರ ವಿಷಯದಲ್ಲಿ ಅವನ ಹೃದಯ ಕಲಾಗಿದ್ದರೂ ಔಷಧೋಪಚಾರ ನೀಡಲೆಂದು ಡಾಕ್ಟರ್ ಕಾಂಪ್ಬೆಲ್ ಬಂದಾಗ, ಒಳಗಿನಿಂದ ಮಾರ್ದವತೆಯ ಸೆಲೆಗಳು ತುಸು ಒಸರುತ್ತಿದುವು. ಒಮ್ಮೆ ಆತ ಕೇಳಿದ: "ನಿಜವಾಗಿಯJಾ ವಿಲಾಯತಿಯವರಾ ನೀವು ?" “ಹೌದು, ಸ್ವಾಮಿಾಜಿ, ಯಾಕೆ ಕೇಳಿದಿರಿ?" "ಸುಮ್ಮನೆ. ನಂಬಿಕೆ ಹುಟ್ಟತಾ ಇಲ್ಲ." "ಸುಳ್ಳಲ್ಲ, ಸ್ವಾಮಿಾಜಿ, ನಾನು ಇಂಗ್ಲಿಷರವನೇ." ಭಾರತೀಯರು ಅನಾಗರಿಕರು, ಅವರನ್ನು ಸುಶಿಕ್ಷಿತರನಾಗಿ ಮಾಡುವುದು ಕ್ರಿಸ್ತ ಮತೀಯರ–ಅದರಲ್ಲಾ ಆಂಗ್ಲರ–ಪವಿತ್ರ ಕರ್ತವ್ಯ, ಎಂಬುದನ್ನು ಕಾಂಪ್ಬೆಲ್ ದೃಢವಾಗಿ ನಂಬಿದವನು. ಆದರೂ, ಅಪರಂಪಾರನನ್ನು ಕುರುಡನನಾಗಿ ಮಾಡಿದ ದೃಶ್ಯ ಅವನ ಕಣ್ಣಿಗೆ ಕಟ್ಟಿದಾಗಲೆಲ್ಲ, ಕ್ರಿಸ್ತನ ನೆನಪಾಗುತ್ತಿತು, ಶಿಲುಬೆಯ ಮೇಲೆ ಏಸು.. ಅಂಗೈ

  • تيكن "هج