ಪುಟ:ಸ್ವಾಮಿ ಅಪರಂಪಾರ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ ಥೇಮ್ಸ್ ನದೀ ಮುಖವನ್ನು ಹೊಕ್ಕಿತು. ಆ ಹಡಗಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳಿದ್ದರು: ಆಂಗ್ಲ ಸೈನ್ಯದ ಸಣ್ಣ ದೊಡ್ಡ ಉದ್ಯೋಗಿಗಳಿದ್ದರು. ಅವರೆಲ್ಲ ನಿವೃತ್ತಿ ಹೊಂದಿಯೋ ರಜೆ ಪಡೆದೋ ಸಂಸಾರ ಸಮೇತರಾಗಿ ಹುಟ್ಟೂರಿಗೆ ಮರಳುತ್ತಿದ್ದ ಜನ. ಅಲ್ಲದೆ ಹಿಂದೂಸಾನದ ಹಾಗೂ ಪೂರ್ವ ಏಷ್ಯದ ಅಮೂಲ್ಯ ಸರಕುಗಳು ಹಡಗಿನಲ್ಲಿದ್ದುవే. ಕಡಮೆ ಬೆಲೆಗೆ ಕೊಂಡಂಥವು: ಕೊಳ್ಳೆ ಹೊಡೆದು ತಂದಂಥವು. ಪೂರ್ವ ದಿಕ್ಕಿನ ರಾಷ್ಟ್ರ ಗಳಿಂದ ದೋಚಿ ತಂದಿದ್ದ ನಿಧಿ ನಿಕ್ಷೇಪಗಳಿದ್ದುವು. ಆ ಹಡಗಿನಲ್ಲಿ ಇಬ್ಬರು ಭಾರತೀಯರೂ ಇದ್ದರು: ಕೊಡಗಿನ ಪದಚುತ ದೊರೆ ಚಿಕವೀರರಾಜ ಹಾಗೂ ಆತನ ಯುವತಿ ಮಗಳು ಕಿರಿಯ ಗೌರಮ್ಮ. ಅವರ ಮೇಲ್ವಿಚಾರಣೆಗೆಂದು ಕಂಪೆನಿಯ ಅಧಿಕಾರಿಯೊಬ್ಬನಿದ್ದ.

ಅಮೂಲ್ಯ ಉಡುಗೆ ತೊಡುಗೆಗಳ ರತ್ನಖಚಿತ ಆಭರಣಗಳ ಆ ಸುಂದರಿಯನ್ನೂ ಸದಾ ಗಂಭೀರವಾಗಿರುತ್ತಿದ್ದ ಎತ್ತರದ ನಿಲುವಿನ ಸ್ಥೂಲಕಾಯನಾದ ಆಕೆಯ ತಂದೆಯನ್ನೂ ಸಹ ಪ್ರವಾಸಿಗಳು ಮೊದಮೊದಲು ಕುತೂಹಲದಿಂದ ಕಂಡರು.ಅವರ ಸಿರಿವಂತಿಕೆಗಾಗಿ ಅಸೂಯೆ ಪಟ್ಟವರು ಕೆಲವರು. ಸ್ನೇಹ ಸಂಪಾದಿಸಲು ಯತ್ನಿಸಿದವರು ಕೆಲವರು. ವರ್ಣಿಯರು ಎಂಬ ಹಿರಿತನದ ಭಾವನೆಯಿಂದ ಅವರನ್ನು ಸ್ವಲ್ಪ ಕಾಲ ದೂರವಿಟ್ಟವರು ಬೇರೆ ಕೆಲವರು.

ಯುವತಿಗೆ ಇಂಗ್ಲಿಷ್ ಬರುತ್ತಿತು, ಆಕೆಯ ತಂದೆ ಅಲ್ಪ ಸ್ವಲ್ಪ ಆ ಭಾಷೆಯನ್ನು ತಿಳಿದುಕೊಳ್ಳಬಲ್ಲನಾದರೂ ಹಿಂದೂಸ್ಥಾನಿಯಲ್ಲೇ ಮಾತನಾಡುತ್ತಿದ್ದ, ಅಲ್ಲಿದ್ದ ಇಂಗ್ಲಿಷರಿ ಗಂತೂ ಹಿಂದೂಸ್ಥಾನಿಯ ಸಾಮಾನ್ಯ ಜ್ಞಾನವಿದ್ದೇ ಇತ್ತು. 

ದಿನ ಕಳೆದಂತೆ, ಸಸಾಹಾರಿಗಳಾದ ತಂದೆ ಮಗಳು ಹಡಗಿನಲ್ಲಿ ಜನಪ್ರಿಯರಾದರು. ಚಿಕವೀರರಾಜ ತನ್ನ ಗಾಂಭೀರವನ್ನುಳಿಸಿಕೊಂಡೇ ಅವರೊಡನೆ ಬೆರೆತ.

ಕೆಲವರು ತಮ್ಮತಮ್ಮೊಳಗೆ ನಗೆಯಾಡಿದರು:
"ಮುದುಕ ಅಳಿಯನ ಶೋಧಗೆ ಹೊರಟದಾನೆ!" 

"ರಾಜ್ಯ ಕಳಕೊಂಡರೂ ಧಿಮಾಕು ಬಿಟ್ಟಿಲ್ಲ."

"ಬಡಪಾಯಿ."
ಸೂರ್ಯ ನಕ್ಕು, ಹಿಮ ಕರಗಿ, ಗಿಡಮರಗಳು ಚಿಗುರಿ ಹೂಬಿಟ್ಟ ಲಂಡನ್ ನಗರ ಹಡಗಿನಿಂದ ಬಂದಿಳಿದವರನ್ನು ಸ್ವಾಗತಿಸಿತು.
ವೃದ್ಧ ಮೇಗ್ಲಿಂಗ್ ಅಲ್ಲಿದ್ದ.
ಚಿಕವೀರರಾಜನನ್ನೂ ರಾಜಕುಮಾರಿಯನ್ನೂ ಸ್ವಾಗತಿಸುತ್ತ ಅವನೆಂದ:
"ನನಗೆ ತು೦ಬಾ ಸಂತೋಷವಾಗಿದೆ ; ನನಗೆ ತುಂಬಾ ಸಂತೋಷವಾಗಿದೆ."
ಮಹಾರಾಣಿ ತೀರಿಕೊಂಡುದನ್ನು ತಿಳಿಸಿ ರಾಜ ಹಿಂದೆಯೇ ಮೇಗ್ಲಿಂಗ್ಗೆ ಪತ್ರ ಬರೆದಿದ್ದ. ಈತ ತನ್ನ ಸಂತಾಪ ಸಹಾನುಭೂತಿಯನ್ನು ವ್ಯಕ್ತಪಡಿಸಿ ಉತ್ತರವಿತ್ತಿದ್ದ. ಪತ್ರದ ಕೊನೆಯಲ್ಲಿ ಮತ್ತೊಮ್ಮೆ ಆಮಂತ್ರಣ ನೀಡಿದ್ದ, ಮಗಳೊಡನೆ ಅರಸ ತನ್ನ ದೇಶಕ್ಕೆ ಬರಬೇಕು-ಎಂದು.
ಮೇಗ್ಲಿಂಗ್, ವಾರ್ವಿಕ್ ರಸ್ತೆಯಲ್ಲಿ ಒಂದು ಸೌಧವನ್ನು ಅರಸನ ವಸತಿಗಾಗಿ ಬಾಡಿಗೆಗೆ ಹಿಡಿದಿದ್ದ. ಅದರ ಹೆಸರು 'ಕ್ಲಿಫನ್ ವಿಲಾ" ಕಟ್ಟಡ ಭವ್ಯವಾಗಿತ್ತು.
ಪಾದಚಾರಿಗಳು, ಅಶಾರೋಹಿಗಳು, ಸಾರೋಟುಗಳಿಂದ ಲಂಡನ್ ನಗರದ ಬೀದಿಗಳು ತುಂಬಿದ್ದುವು. ಹಿಂದೂಸ್ಥಾನದಲ್ಲಿ ಇಂಗ್ಲಿಷರು ತೋರುತ್ತಿದ್ದ ಬಾಹ್ಯಾಡಂಬರ ಸೋಗಿನ