ಪುಟ:ಸ್ವಾಮಿ ಅಪರಂಪಾರ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಆಪರ೦ಪಾರ ogą "ಛೆ! ಅಲ್ಲ! ಅದೊಂದು ನಾಮಕರಣ ಸಮಾರಂಭ ಮಾತ್ರ." ಚಿಕವೀರರಾಜ ಮೇಗ್ಲಿಂಗನನ್ನು ಕ್ಷಣ ದಿಟ್ಟಿಸಿ ನೋಡಿ ಅಂದ : “ಯುವರಾಣಿ ಬೇರೊಂದು ಹೆಸರಿಟ್ಟುಕೊಳ್ಳಬೇಕು ಅಂತೀರೊ?” "ಇರುವ ಹೆಸರಿನ ಜತೆಗೆ ಇನ್ನೊಂದು." "ಮತದೀಕ್ಷೆಯ ವಿಷಯ ನೀವು ಹೇಳುತಿರೋದು." లుగా ుట్టు నొుంగి చెు(గాలింగసాందా : "ಹಿಂದೂಸ್ಥಾನದಲ್ಲಿ ఎమేణ ಜನರ ಮತಾಂತರಕ್ಕೆ ಕಾರಣನಾಗಿದೇನೆ, ನಿಜ. ಆದರೆ ನಿಮ್ಮ ಮಗಳಿಗೊಂದು ದೀಕ್ಷೆ ವಿಧಿಸುವುದರಿಂದ ನಾನು ಸ್ವರ್ಗದಲ್ಲಿ ಹೆಚ್ಚಿನ ಸಾ 3 ವನ್ನೇನೂ ಪಡೆಯುವುದಿಲ್ಲ. ಚಕ್ರವರ್ತಿನಿ ದೊಡ್ಡ ಮನಸ್ಸು ಮಾಡಿ ಕೊಡಗನ್ನು ಪುನಃ ನಿಮಗೆ ಕೊಡಿಸುವಂತಾಗಲಿ–ಅಂತ ಈ ಸಲಹೆ ಮಾಡಿದೇನೆ." శికిచేవిలరరాజసాండా : "ಇವತು ರಾತ್ರೆ ನನಗೆ ನಿದ್ದೆ ಬರದು." ...ಆ ರಾತ್ರೆಯಷ್ಟೇ ಅಲ್ಲ, ಮುಂದೆ ಹಲವು ರಾತ್ರೆ ಚಿಕವೀರರಾಜ ನಿದ್ರಿಸಲಿಲ್ಲ. ಒಂದು ಸಂಜೆ ಹಿಮ ಬೀಳುತ್ತಿತು, ಸಾರೋಟಿನಲ್ಲಿ ಲಂಡನ್ ಸೇತುವೆಯ ತನಕ ಹೋಗಿ, ವಾಹನವನ್ನು ಅಲ್ಲಿ ನಿಲ್ಲಿಸಿ, ಚಿಕವೀರರಾಜ ಸೇತುವೆಯ ಮೇಲೆ ಒಬ್ಬನೇ ನಡೆದ. ಆಂಗ್ಲ ಪೋಷಾಕು ಧರಿಸಿದ್ದ ವರ್ಣಿಯ. ಸುರಿಯುತ್ತಿದ್ದ ಹಿಮವರ್ಷದಲ್ಲಿ ಇತರ ದಾರಿ ಹೋಕರಿಗೆ ಅದು ಕಾಣಿಸುತ್ತಿರಲಿಲ್ಲ, ಸೇತುವೆಯ ಮಧ್ಯೆ ఆంజగి తెగలి నిరిEు, ఆ3 ಥೇಮ್ಸ್ ನದಿಯನ್ನೂ ಅಳಿವೆ ಬಾಗಿಲನ್ನೂ ನೋಡಿದ. ಕಾವೇರಿ ಅವನ ಹುಟ್ಟೂರಿನ ನದಿ. ಗಂಗೆಯನ್ನು ಅವನು ಬಲ್ಲ, ಇಲ್ಲಿಯ ಜನರಿಗೆ ಥೇಮ್ಸ್ ಪವಿತ್ರವಾದುದು, ಧಾರ್ಮಿಕ ಅರ್ಥದಲ್ಲಿ ಅಲ್ಲವಾದರೂ ಇತಿಹಾಸ-ಸಾಧನೆಗಳ ದೃಷ್ಟಿಯಿಂದ ಅದಕ್ಕೆ ಮಹತ್ವ, ಈ ಸೇತುವೆಯನ್ನು ಹದಿನೆಂಟು ಶತಮಾನಗಳಿಗೆ ಹಿಂದೆ ಕಾಡಿಯಸ್ ಎಂಬ ರೋಮನ್ ಸಮಾಟ ಇಂಗ್ಲೆಂಡನ್ನು ಆಕ್ರಮಿಸಿದಾಗ ಕಟ್ಟಿದನಂತಲ್ಲ? ಹಿಂದೊಮ್ಮೆ ಈ ದೇಶವೂ ಪರಕೀಯರ ಕೆಳಗೆ ನರಳಿತು, ಈಗ ಅದೇ ದೇಶ ಇತರರನ್ನು ದಾಸ್ಯದಲ್ಲಿ ಬಿಗಿದಿದೆ. ತಾನೊಬ್ಬ ಕೈದಿ, ಗೊತ್ತುಗುರಿಯಿಲ್ಲದೆ ಬದುಕಿನ ಸಾಗರದಲ್ಲಿ ಅಲೆಯುವ ಕಡ್ಡಿಯಾದೆ. ವೇಲೂರಿನ ಕೋಟೆಯೊಳಗಿನ ಅರಮನೆಗಿಂತ ಏನು ಭಿನ್ನ ಈ ಕ್ಲಿಫ್ಟನ್ ವಿಲಾ? ಈ ಸೇತುವೆಯಿಂದ ಕೆಳಗೆ ತಾನು ಧುಮುಕಿದರೊ ? ಉಂಟೆ? ಆತ್ಮಹತ್ಯೆ చాూడికి ఇళ్ళలేe ತಾನು? ತನ್ನ ಮಗಳ ಗತಿ? ಏನೇ ಆಗಲಿ ವಿಫಲನಾಗಿ ಈ ದೇಶದಿಂದ ಮರಳಬಾರದು. ಕಳೆದುಹೋದ ರಾಜ್ಯವನ್ನು ತಾನು ಪಡೆಯಲೇ ಬೇಕು. ಹೇಗೆ? ಈ ಜನರಿಗೆ ಧರ್ಮದ ಹುಚ್ಚ ಎಲ್ಲ ಧರ್ಮಗಳೂ ಒಂದೇ ಅಲ್ಲವೆ? ಅವರ ಆಸೆ ತೀರಿಸಿಕೊಳ್ಳಲಿ. ತಾನೇನು ಪಾಪಿಯಾಗುತೇನೆಯೆ? ಅಂತೂ ದೊಡ್ಡಪ್ಪನ ಕಾಲದಲ್ಲಿ ಮಡಕೇರಿಯಲ್ಲಿ ಸಾಧಿಸಲಾಗ ದುದನ್ನು ಈ ಮೇಘಲಿಂಗ ಈಗ ಆಗಮಾಡುತಿದಾನೆ. ಇಲ್ಲ, ಅವನನ್ನು ತಾನು ಜರೆಯ ಬಾರದು. ಪಾಪ, ಅವನಿಂದ ಏನು ತಾನೆ ಆದಾತು? ಆತನ ಪ್ರೇರಣೆಯಿಂದಲೇ ಇಷ್ಟು ದೂರ ಬಂದೆ. ಈಗ ಅವನನ್ನು ತುಚ್ಛನೆಂದು ಹೀಗಳೆಯಲೆ? ಹಾಗೆ ಮಾಡಲಾರೆ. ಇಷ್ಟರಲ್ಲಿ, ಅವನು ಹೇಳಿದ್ದಾದರೂ ಏನು ? ಪುನರ್ನಾಮಕರಣ, ನಾಮ ಮಾತ್ರ ದೀಕ್ಷೆ. ಮಗಳ ಅಭಿಪ್ರಾಯವೇನಿದ್ದೀತು ಇದರಲ್ಲಿ? ಅದನ್ನು ತಾನು ತಿಳಿಯಬೇಕು. ಅವಳಿಗೆ 13