ಪುಟ:ಸ್ವಾಮಿ ಅಪರಂಪಾರ.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೨

ಸ್ವಾಮಿ ಅಪರಂಪಾರ

“ಯಾರೂ ಇಲ್ಲ ಅನ್ನಬೇಡ, ಶಿವಾಚಾರ್ಯರ ದಿವ್ಯಾತ್ಮ ಸುಳಿದಾಡತಿರತದೆ."
“ಅಪ್ಪಂಗಳದಲ್ಲಿ__"
“ಗೊತ್ತು, ಹೇಳಬೇಡ.”
ಜ್ವರ ಇಳಿಯಲಿಲ್ಲ. ಅದರ ಅಮಲಿನಲ್ಲೇ ಅಪರಂಪಾರ ನಡೆದ.
“ಶಿವನೆ ! ಒಮ್ಮೆ ನಮ್ಮನ್ನ ಹಾಲೇರಿಗೆ ಮುಟ್ಟಿಸು, ಅಲ್ಲಿ ಸ್ವಾಮಿಯೋರು ಖಂಡಿತ
ಸರಿಹೊಗತಾರೆ”
ಎಂದು ಶಂಕರಪ್ಪ ದೇವರನ್ನು ಕೇಳಿಕೊಂಡ.
ಐದು ದಿನಗಳ ಪ್ರವಾಸಕ್ಕೆ ಹತ್ತು ದಿನ...
ಹಾಲೇರಿ ಹತ್ತಿರ ಬರುತ್ತಿದ್ದಂತೆ ಒಂದು ಗೂಬೆ ಕೂಗಿತು.
“ಹಗಲು ಕಾಣದ ಗೂಗೆ ಇರುಳಾಯಿತೆಂದರೆ ಜಗಕೆ ಇರುಳಪ್ಪದೆ ಮರುಳೇ ! ನೀನು
ನಿಲ್ಲಬೇಡ, ಶಂಕರಪ್ಪ.
ಸೂರ್ಯಾಸ್ತಕ್ಕೆ ಮುನ್ನವೇ ಗೂಬೆ ಹಾಗೆ ಕೂಗಿದುದು ಅಪಶಕುನ ಎನಿಸಿತು.
ಶಂಕರಪ್ಪನಿಗೆ.
ಅವರ ಹೃದಯ ರೋಧಿಸಿತು.
“ದೇವರೇ, ಸ್ವಾಮಿಯೋರನ್ನ ಕಾಪಾಡು.”
...ಅಂತೂ ಅವರು ಹಾಲೇರಿ ಸೇರಿದರು.
“ಕೊಳಕ್ಕೆ ಕರಕೊಂಡು ಹೋಗು, ಶಂಕರಪ್ಪ. ನೀರಿನಲ್ಲಿ ಕಾಲಾಡಿಸತೀವಿ, ಕೈ
ಆಡಿಸತೀವಿ.”
ಅದಾದಮೇಲೆ : “ಮಿಂದು ಶಿವಧ್ಯಾನಕ್ಕೆ ಕುಳಿತುಕೊಳ್ಳಲೆ ?”
“ಬೇಡಿ ಸೋಮಿಯೋರೆ, ಮೈ ಕೆಂಡವಾಗದೆ.”
“ಹುಚ್ಚಪ್ಪ ! ಎಲ್ಲಿ ಕೈಹಿಡಿ, ಮಾಯತೀನಿ.
” ಮಿಂದ ಬಳಿಕ ಮಹಾದೇವನ ಧ್ಯಾನ,
ಅಪರಂಪಾರ ಧ್ವನಿಯೊಂದು ವೃತ್ತಾಕಾರವಾಗಿ ಸುತ್ತುತ್ತ ಅಲೆಯಿತು :
“ನೆನಹು ಸತ್ತಿತ್ತು, ಭ್ರಾಂತು ಬೆಂದಿತ್ತು, ಅರಿವು ಮರೆಯಿತ್ತು, ಕುರುಹುಗಟ್ಟಿತ್ತು,
ಗತಿಯನರಸಲುಂಟೆ ? ಅಂಗವೆಲ್ಲ ನಷ್ಟವಾಗಿ ಲಿಂಗಲೀನವಾಯಿತ್ತು, ಕಂಗಳಂಗದ ಕಳೆಯ
ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ...ಅಂಗವೆಲ್ಲ-ನಷ್ಟವಾಗಿ-ಲಿಂಗಲೀನವಾಯಿತ್ತು...
ಅಂಗವೆಲ್ಲ-ನಷ್ಟವಾಗಿ-ಲಿಂಗಲೀನವಾಯಿತ್ತು...”
ಕುಳಿತಿದ್ದ ಅಪರಂಪಾರ ಪ್ರಜ್ಞೆ ತಪ್ಪಿ ಬಿದ್ದ. ಅವನನ್ನು ಶಂಕರಪ್ಪ ಪಾವಟಿಗೆಯ
ಮೇಲೆ ಮಲಗಿಸಿದ. ಉತ್ತರೀಯವನ್ನು ನೀರಿನಲ್ಲಿ ತೋಯಿಸಿ ತಂದು ಹಣೆ ಮುಖಗಳಿಗೆ
ತಟ್ಟಿದ.
ಅಪರಂಪಾರನಿಗೆ ಪ್ರಜ್ಞೆ ಮರಳಲಿಲ್ಲ.
ಸೂರ್ಯಾಸ್ತವಾಯಿತು. ಚಾವಡಿಕಾರ ಶಂಕರಪ್ಪ, ಜಂಗಮನ ದೇಹದ ಬಳಿ ರಾತ್ರಿ
ಇಡೀ ಕಾವಲು ಕುಳಿತ.

  • ***