ಪುಟ:ಸ್ವಾಮಿ ಅಪರಂಪಾರ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರ೦ಪಾರ್ "ಒಳ್ಳೆದು. ಆ ಪ್ರಶ್ನೆನ ಹಾಗೆಯೇ ಇರಗೊಡು.. ಈಗ ಐಹಿಕ ಆಸೆಗಳನ್ನ ಬಿಟ್ಟ ಅಪರಂಪರನಾಗಬೇಕು ಅಂತಿದೀ ಅಲ್ಲವೆ? ಕಾವಿಯುಡುಗೆ ನಿನಗೆ ರಕ್ಷೆಯಾಗತದೆ."

ವೀರಪ್ಪನ ಕಣ್ಣುಗಳಲ್ಲಿ ಅವೂರ್ವ ಪ್ರಭೆ ಕಂಡಿತು.
"ಇಷ್ಟು ಅನುಗ್ರಹಿಸಿದಿರಲ್ಲ, ಇದು ನನ್ನ ಭಾಗ್ಯವಿಶೇಷ!"
"ಅನುಗ್ರಹ ಮಲ್ಲಿಕಾರ್ಜುನ ಮಾಡತಾನೆ. ಬೆಟ್ಟದಪುರಕ್ಕೆ ಹೋಗತೀಯಾ? ನಿನ್ನ ಅಳಲನ್ನ ಅವನ ಮುಂದೆ ತೋಡಿಕೋ, ಅವನೇನು ವಿಧಿಸುತಾನೋ ಅದರಂತೆ ನಡಕೋ.”
"ಆಗಲಿ, ಸ್ವಾಮಿಗಳೇ."
"ನಾಳೆ ಏಕಾದಶಿ, ಶಿವರಾತ್ರಿಯ ಪೂಜೆ ಮಲ್ಲಿಕಾರ್ಜುನನಿಗೆ ಸಲ್ಲಿಸತೀಯಾ?"
"ಅಪ್ಪಣೆ” 

ಸ್ವಾಮಿಗಳು ಕೈತಟ್ಟಿದರು, ಕಾಣಿಸಿಕೊಂಡ ಪಟ್ಟದ ಶಿಷ್ಯನಿಗೆ, "ಸಿದ್ದಲಿಂಗನನ್ನು ಕರೆ” ಎಂದರು.

ಸಿದ್ಧಲಿಂಗ ಬಂದಾಗ,
"ಇವನಿಗೆ ಮುಂಡನ ಮಾಡಿಸು. ಕಾವಿಯುಡಿಸು. ಪಟ್ಟಣದಾಚೆಗೆ ಒಯ್ದು ಬಿಟ್ಟು ಬಾ, ಬೆಟ್ಟದಪುರಕ್ಕೆ ಹೋಗತಾನೆ" ಎಂದು ನಿರ್ದೆಶನವಿತ್ತರು.
ವೀರಪ್ಪಾಜಿ ಸಾಷಾಂಗವೆರಗಿ ಸ್ವಾಮಿಗಳ ಪಾದಗಳನ್ನು ಕಂಬನಿಯಿಂದ ತೋಯಿಸಿದ. ಅವರು ಎರಡJಾ ಕೈಗಳಿಂದ ವೀರಪ್ಪನ ಭುಜಗಳನ್ನು ಮುಟ್ಟಿ, "ಏಳು, ಶಿವ ಕಾಪಾಡು ತಾನೆ" ಎಂದರು.
ಅವರ ಕಂಠ ಮಾರ್ದವವಾಗಿತ್ತು

... .ಸಂಗಡಿಗನಾಗಿ ಬಂದ ಸಿದ್ಧಲಿಂಗ, ಪಟ್ಟಣದ ಹೊರ ವಲಯ ದಾಟಿದೊಡನೆ, "ಇನ್ನು ನಾನು ಮರಳತೀನಿ" ಎಂದ ವೀರಪ್ಪಾಜಿಯ ದ್ವನಿ-ಭಾವಗಳು ನಿವ್ರಿಕಾರವಾಗಿದ್ದುವು. "ಆಗಲಿ." "ನಮ್ಮ ಬಂಧುತ್ವ ಲಗೂನೆ ಮುಗೀತು."

ವೀರಪ್ಪ ಮುಂದೆ ಮಾತಾಡಲಿಲ್ಲ ಸಿದ್ಧಲಿಂಗನೇ ಅಂದ:
"ಬೆಳಗ್ಗೆ ಮಲ್ಲಪ್ಪಗೌಡಗೆ ನೀ ಅಂದ ಮಾತನ್ನ ಈಗ ನಾ ಹೇಳತೀನಿ. ಶಿವನಿಚ್ಛೆ ಇದ್ದರೆ ಆಯುಸ್ಸು ಮುಗಿಯೋದಕ್ಕೆ ಮುಂಚೆ ಮತ್ತೆ ಕೂಡೇವು." ವೀರಪ್ಪ ಮುಂದಕ್ಕೆ ಅಡಿ ಇರಿಸಿದ. ಒಮ್ಮೆಯೂ ತಿರುಗಿ ನೋಡಲಿಲ್ಲ. ಅವನು ಕಣ್ಮರೆಯಾಗುವವರೆಗೂ ಸಿದ್ದಲಿಂಗ ಅಲ್ಲೇ ನಿಂತ.

–"ಅಯ್ಯನವರೇ, ನಮ್ಮಲ್ಲಿ ಶಿವಪೂಜೆ ಮಾಡಿ ಹೋಗುತೀರಾ ?” –"ಅಯ್ಯನವರೆ, ದಾಸೋಹಕ್ಕೆ ನಮ್ಮಲ್ಲಿಗೆ ಬರುತೀರಾ ?" –"ರಾತ್ರೆ ದಾರಿ ನಡೀಬಾಡಿ, ಈ ಕಡೆ ಹುಲಿ ಚಿರತೆಗಳು ಬಾಳ, ಕಾಡಾನೆಗಳ ಆಲೀತಾ ಇರತದೆ."