ಪುಟ:ಸ್ವಾಮಿ ಅಪರಂಪಾರ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಮ್ಪಾರ ೬೫

   ಸೊರಗಿದ ದೇಹದ ಯುವಕ ಜಂಗಮ ದಾರಿಯುದ್ದಕ್ಕೂ ಜನರ ಗಮನವನ್ನು ಸೆಳೆಯು

ತ್ತಿದ್ದೆ.

   ಪ್ರಸಾದ–ಒಲ್ಲೆನೆಂಬ. ಶಿವರಾತ್ರೆಯ ಉಪವಾಸದ ಅನಂತರವೇ ಈತನ ಪಾರಣೆ.
   ಮೈಸೂರು ಸೀಮೆಯಿಂದ ಧಾನ್ಯಗಳನ್ನು ತರಲೆಂದು ಹೋಗುತ್ತಿದ್ದ ಎತ್ತಿನ ಬಂಡಿ 

ಯವನೊಬ್ಬ ಕರೆದ : "ಅತ್ತಿ ಕುಂತ್ಕೊಳ್ಳಿ, ಅಯ್ಯನವರೆ."

ಇವನ ಉತ್ತರ:
"ಒಲ್ಲೆ. ಬೆಟ್ಟದಪುರಕ್ಕೆ ಹೋಗತಾ ಇದೇನೆ. ನಡೆದುಬಂದ ಭಕ್ತರನ್ನೇ ಮಲ್ಲಿಕಾರ್ಜುನ

ಮೆಚ್ಚುವ."

   ಸಿದ್ದೇಶ್ವರನ ಗದ್ದುಗೆಯ ಮಾರ್ಗವಾಗಿ ಕೊಡಗು ಸೀಮೆಯನ್ನು ಜಂಗಮ ದಾಟಿದ.
ಗದ್ದುಗೆ ಬೆಟ್ಟದ ಬಳಿ ಎಷ್ಟೊಂದು ಕಾಳಗಗಳಾಗಿದ್ದುವು! ಅವುಗಳಲ್ಲಿ ಎಷ್ಟೊಂದು ನಿರ್ಣಾಯಕವೆನಿಸಿದುವು! ಹಿಂದೂಗಳಾದ ಯದುವಂಶದ ರಾಜರೂ ಕೊಡಗಿನ ಮೇಲೆ
ಕತ್ತಿ ಹಿರಿದಿದ್ದರು. ಮಹಮ್ಮದೀಯರಾದ ಹೈದರಾಲಿ ಟೀಪೂಸುಲ್ತಾನರೂ ದಂಡೆತ್ತಿಬಂದಿ
ದ್ದರು. ರಣಕ್ಷೇತ್ರಕ್ಕೆ ಮೂರನೆಯವರ ಪ್ರವೇಶವೂ ಆಗಿತ್ತು_ಪರಕೀಯರಾದ ಆಂಗ್ಲರ
ಚಂಚೂ ಪ್ರವೇಶ. ನೀತಿನೇಮಗಳೊಂದೂ ಇಲ್ಲವಲ್ಲ ಈ ಭೂದಾಹಕ್ಕೆ?ರಾಜ್ಯತೃಷ್ಣೆಗೆ?         ದ್ವಾದಶಿಯ ಮುಚ್ಚಂಜೆ ಪೆರಿಯಾಪಟ್ಟಣ ಬಂತು. ನಂಜರಾಜಪಟ್ಟಣದ ಸ್ಥಾಪನೆಗೆ 

ಕಾರಣನಾದ ನಂಜುಂಡರಸ ಆಳಿದ ರಾಜಧಾನಿ. ಅಲ್ಲಿಯೇ ಆತನ ಮಗ ವೀರರಾಜ, ಪರಾಭವದ ಅವಮಾನವನ್ನು ಸಹಿಸಲೊಪ್ಪದೆ, ತನ್ನ ಕುಟುಂಬವನ್ನು ಸ್ವತಃ ಖಡ್ಗದಿಂದ ಸಂಹರಿಸಿ, ತಾನು ಚಿಕದೇವರಾಯನ ಸೈನ್ಯದೊಡನೆ ಹೋರಾಡುತ್ತ ಮಡಿದಿದ್ದ. ಅಭಿಮಾನಧನನೆನ್ನಿಸಿಕೊಂಡಾತ ಎಂಥ ಬಲಿದಾನಕ್ಕೂ ಹಿಂಜರಿಯುವುದಿಲ್ಲವಲ್ಲ?

   ಜಂಗಮವೇಷ ಧರಿಸಿದ್ದ ವೀರಪ್ಪಾಜಿಯ ಮನಸ್ಸು ಯೋಚನೆಗಳ ಸುಳಿಯಲ್ಲಿ ಗಿರಗಿರ ತಿರುಗುತ್ತ ನಡೆಯಿತು. ಆಗಲೆ ಇರುಳಾಗಿತು. ಊರಿನ ಧರ್ಮಶಾಲೆ ಕಣ್ಣಿಗೆ ಬಿದ್ದಾಗ,
ಇಲ್ಲಿ ವಿರಮಿಸಿ ಮುಂಜಾವದಲ್ಲೆದ್ದು ಮುಂದುವರಿಯುವುದೊಳಿತು_ಎಂದುಕೊಂಡ,
   ಧರ್ಮಶಾಲೆ, ದಾರಿಹೋಕರಾದ ಜಂಗಮರು_ಸನಾಸಿಗಳು_ಭಿಕ್ಷುಕರಿಂದಲೂ 

ವಾಪಾರಿಗಳಿಂದಲೂ ತುಂಬಿತ್ತು, ಹೊರಗಿನ ಅರಳೀಕಟ್ಟೆಯ ಮೇಲೂ ಕೆಲವರಿದ್ದರು.

ಅಲ್ಲಿಯೇ ಒಂದು ಮೂಲೆಯಲ್ಲಿ ವೀರಪ್ಪಾಜಿ ತನ್ನ ಜೋಳಿಗೆಯನ್ನಿರಿಸಿದ. ದೂರದ 

ಲ್ಲೊಂದು ಕಂದೀಲು 'ಬಾವಿ ಇಲ್ಲದೆ' ಎಂದು ತೋರಿಸುತ್ತಿತ್ತು. ವೀರಪಾಜಿ ಅಲ್ಲಿಗೆ ಸಾಗಿ,

ತನ್ನ ಸರದಿಗಾಗಿ ಕಾದು, ನೀರು ಮೊಗೆದು ಕೈ ಪಾದ ಮುಖಗಳನ್ನು ತೊಳೆದ. ಸ್ವಚ್ಛವಾದ ನೀರನ್ನು ನಾಲ್ಕಾರು ಗುಟುಕು ಕುಡಿದ.
    ಅರಳೀಕಟ್ಟೆಗೆ ಹಿಂತಿರುಗಿದಾಗ ಅವನ ಜೋಳಿಗೆ ಅಸ್ತವ್ಯಸ್ತವಾಗಿತ್ತು, ಆದರೇನು?
ಕಾವಿ ಅಂಚಡಿಗಳ ಹೊರತಾಗಿ ಮುಟ್ಟಿದವನು ಎತ್ತಿಕೊಳ್ಳುವಂಥದು ಅದರಲ್ಲೇನೂ
ಇರಲಿಲ್ಲವಲ್ಲ?

ತಿರುದುಂಬವನ ಗಂಟನ್ನೂ ಶೋಧಿಸಿದೆಯಾ ಶಿವನೆ!_ಎಂದು ವೀರಪಾಜಿ ಮನಸ್ಸಿ

ನಲ್ಲೆ ಉದ್ಗರಿಸಿದ. 
ಅಲ್ಲಿ ಕುಳಿತು ಶಿವಶಿವ ಎನ್ನುತ್ತಿದ್ದಂತೆ ಜೊಂಪು ಹತ್ತಿತು. ನನಗೆ ಶಿವರಾತ್ರಿಯ
5