ಪುಟ:ಸ್ವಾಮಿ ಅಪರಂಪಾರ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬ ಸ್ವಾಮಿ ಆಪರಂಪಾರ ಸಂಭ್ರಮ_ಎನ್ನುತ್ತ ತಂಗಾಳಿ ಬಲವಾಗಿ ಬೀಸತೊಡಗಿತು. ಜೋಗುಳದ ಆಲಾಪನೆ

ಯಾಯಿತು, ಅರಳೀ ಎಲೆಗಳ ಇಂಚರ. ತೋಳದಿಂಬಿನ ಮೇಲೆ ತಲೆ ಇರಿಸಿ ವೀರಪ್ಪಾಜಿ
ಪವಡಿಸಿದ. ಕ್ಷಣಾರ್ಧದಲ್ಲೆ ನಿದ್ದೆ ಅವನಿಗೆ ಆತುಕೊಂಡಿತು.
   ನಿದ್ದೆಯಲ್ಲಿ ಅವನೊಂದು ಕನಸು ಕಂಡ. ಅಪ್ಪಂಗಳದ ಅರಮನೆ. ಜಂಗಮರದೊಂದು 

ತಂಡವೇ ದಾಸೋಹಕ್ಕೆ ಬಂದಿದೆ. ತನ್ನ ತಂದೆ ಅಪ್ಪಾಜಿ ಅರಸು ಅವರೆಲ್ಲರ ಪಾದಪೂಜೆ ಮಾಡುತ್ತಿದ್ದಾನೆ. ತಾಯಿ ಒಳಗೆ ದಾಸೋಹಕ್ಕೆ ಅಣಿ ಮಾಡುತ್ತಿದ್ದಾಳೆ. ಹುಡುಗನಾದ ತಾನು, ಬಂದವರು ಎಷ್ಟೆಂದು ಎಣಿಸುತ್ತಿದ್ದಾನೆ. ಒಂದು, ಒಂದು_ಒಂದೇ...ಇಷ್ಟೊಂದು ಜನ ಇದ್ದರಲ್ಲ, ಈಗ ಕಾಣಿಸುತ್ತಿರುವುದು ಒಬ್ಬರೇ; ಇದೇನು ಸೋಜಿಗ? 'ಅಮ್ಮಾ!'

ಎಂದು ವೀರಪ್ಪಾಜಿ ಕರೆಯುತ್ತಾನೆ, ತಾಯಿಯನ್ನು ಕೇಳಲೆಂದು. ಅಷ್ಟರಲ್ಲಿ ಗುಡುಗಿನಂಥ 

ಗಂಟಲಲ್ಲಿ ಆ ಜಂಗಮನೆನ್ನುತ್ತಾನೆ: 'ಬಾ ! ಬಂದುಬಿಡು' ಅಮ್ಮ ಹೊರಕ್ಕೆ ಹಣಿಕಿ ನೋಡಿ, ಚೀರುತ್ತ, ಮಗನನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾಳೆ.

   ...ನಿದ್ರಾಭಂಗ. ಆದರೆ ಕಣ್ಣೆವೆಗಳು ತೆರೆದುಕೊಳ್ಳಲಿಲ್ಲ. ವೀರಪ್ಪಾಜಿ ಮಗ್ಗುಲು 

ಹೊರಳಿ ಸರಾಗವಾಗಿ ಉಸಿರಾಡಿದ.

   ನೆಲ ಮುಟ್ಟಿದೊಡನೆ ಹೇಗೆ ಗಾಢನಿದ್ದೆ ಆವರಿಸಿತ್ತೋ ಹಾಗೆಯೇ ಮುಂಜಾವದಲ್ಲಿ
ಥಟ್ಟನೆ ಎಚ್ಚರವೂ ವೀರಪ್ಪಾಜಿಗೆ ಆಯಿತು.
   ಧರ್ಮಶಾಲೆಯೊಳಗಿದ್ದ ಬೇರೆ ಕೆಲವರೂ ಒಬ್ಬರನ್ನೊಬ್ಬರು ಕೂಗಿ ಎಬ್ಬಿಸುತ್ತಿದ್ದರು. 
   ವೀರಪ್ಪಾಜಿ ಜೋಳಿಗೆಯನ್ನೆತ್ತಿಕೊಂಡು ಪೆರಿಯಾಪಟ್ಟಣದ ಉತ್ತರಕ್ಕೆ ಅಭಿಮುಖವಾಗಿ 

ಬೆಟ್ಟದಪುರದ ಕಡೆಗೆ ನಡೆಯತೊಡಗಿದ.

   ದಾರಿಯಲ್ಲಿ ಆತನಿಗೆ ರಾತ್ರೆ ತಾನು ಕಂಡಿದ್ದ ಕನಸಿನ ನೆನಪಾಯಿತು,
   ವಿಚಿತ್ರ ಸ್ವಪ್ನ-ಎಂದುಕೊಂಡ. ಏನು ಇದರ ಅರ್ಥ ? ಎಂದೋ ಗತಿಸಿದ ತಾಯಿ 

ತಂದೆ ಕಂಡುಬಂದರಲ್ಲ ? ಮಾತೆ, ಮಾಯೆ. ಜಂಗಮನ ಜತೆ ಹೋಗಬಾರದು-ಎಂದು ತನ್ನನ್ನು ಆಕೆ ತಡೆಹಿಡಿಯಲೆತ್ನಿಸಿದ್ದಳು.

   ಸಂಸಾರದ ಬಂಧನಗಳನ್ನು ಕಡಿದೊಗೆಯಲು ನಿರ್ಧರಿಸಿರುವ ತನ್ನ ಮನಸ್ಸಿನ ತಳ 

ಮಳವೇ ಕನಸಾಗಿ ಕಾಣಿಸಿರಬೇಕು_ಎಂದುಕೊಂಡ ವೀರಪ್ಪಾಜಿ.

   ಇಕ್ಕೆಲಗಳಲ್ಲೂ ಅಡವಿ. ಅದನ್ನು ಸೀಳಿತ್ತು, ವೀರಪ್ಪಾಜಿ ನಡೆಯುತ್ತಲಿದ್ದ ಅಗಲ 

ಕಿರಿದಾದ ದಾರಿ, ಚೆಂಗಾಳ್ವರ, ಚೋಳರ, ಹೊಯ್ಸಳರ, ವಿಜಯನಗರದ ಸಮ್ರಾಟರ, ಮೈಸೂರರಸರ, ಕೊಡಗಿನ ರಾಜರ ದಂಡುಗಳೆಲ್ಲ ಆ ನೆಲವನ್ನು ತುಳಿದಿದ್ದುವು. ಕೆಲವು ಶತಮಾನಗಳಿಂದ ಲಕ್ಷಾಂತರ ಯಾತ್ರಿಕರು ಆ ಹಾದಿಯಾಗಿ ಸಾಗಿದ್ದರು. ಎತ್ತಿನ ಬಂಡಿಗಳು ಆಳದ ಸಮಾನಾಂತರ ರೇಖೆಗಳೆರಡನ್ನು ಉದ್ದಕ್ಕೂ ಊರಿಹೋಗಿದ್ದುವು.

   ದೂರದಲ್ಲೆಲ್ಲಿಂದಲೋ ಹುಲಿಯ ಗರ್ಜನೆ ಕೇಳಿಸಿತು. ಒಂದು ಆನೆಯೂ ಫೀಳಿಟ್ಟಂತಾ 

ಯಿತು. ಊರಿಗೆ ಬೇಗನೆ ಹಗಲಾಗುತ್ತದಾದರೂ ಕಾಡಿನೊಳಗಿನ್ನೂ ಕತ್ತಲೆಯೇ ಎಂದು ಜಂಭದಿಂದ ಗೂಬೆಗಳೆರಡು ಒಂದರ ಬಳಿಕ ಇನ್ನೊಂದು ಗೂಗೂ ಎಂದು ದನಿ ಮಾರ್ದನಿ ಗೊಡುತ್ತಿದುವು.

   ದೂರದಲ್ಲೊಂದು ಕೆನ್ನಾಯಿ ದಾರಿಗಡ್ಡ ನಿಂತಿತ್ತು, ಮನುಷ್ಯನನ್ನು ಸಾಯಿಸುವ 

ಸಾಮರ್ಥ್ಯ, ಉಳ್ಳದ್ದು.