ಪುಟ:ಸ್ವಾಮಿ ಅಪರಂಪಾರ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸಾಮಿ ಅಪರಂಪಾರ ೬೭

  ಆದರೆ ಇದರ ಪರಿವೆ ವೀರಪ್ಪಾಜಿಗೆ ಇರಲಿಲ್ಲ. 
  ಆತ ಹತ್ತಿರ ಬರುತ್ತಲಿದ್ದಂತೆ ಕೆನ್ನಾಯಿ ಕಾಡು ಸೇರಿ ಮಾಯವಾಯಿತು. 
  ಸ್ವಲ್ಪ ದೂರದ ಬಳಿಕ ಆ ಕೆನ್ನಾಯಿ ಮತ್ತೊಮ್ಮೆ ಅಡ್ಡಗಟ್ಟಿ ನಿಂತಿತು.  
  ಅದರ ರೂಪದಲ್ಲಿ ಶಿವ ಕಾಣಿಸಿಕೊಂಡಿದ್ದಾನೆ–ಎಂಬ ಭ್ರಮೆ ವೀರಪ್ಪನಿಗೆ. ಆತ 

ಕೂಗಿ ನುಡಿದ :

  "ನಿಲ್ಲು ಶಿವ! ಬರಶೀನಿ!" 
  ಕೆನ್ನಾಯಿ ಸರಕ್ಕೆಂದು ಸರಿದುಹೋಯಿತು. 
  ಹೀಗೆ ನಾಲ್ಕಾರು ಸಾರೆ ಕಣ್ಣುಮುಚ್ಚಾಲೆಯಾಡಿತು ಆ ವನ್ಯಮೃಗ. 
  ಅಡವಿ ದಾಟಿದ ಬಳಿಕ ಬರಿಯ ಬೆಟ್ಟಗಳು ಕೆಲವು. ತುಸು ದೂರ ಒಂದು ಮಗ್ಗುಲಿಗೆ 

ಬಯಲು. ಸೂರ್ಯ. ಪುನಃ ಕಾಡುಮರಗಳು : ನಂದಿ, ಮತ್ತಿ, ತೇಗು, ಹೊನ್ನೆ, ಹೆಬ್ಬಲಸು ...ಕೆల ಮರಗಳು ಒಂದಕ್ಕೊಂದು ಹೆಣೆದುಕೊಂಡು ಸಂಸಾರ ನಡೆಸಿದ್ದುವು. ಕೆಲ ಕೊಂಬೆ ಗಳು ಪರಸ್ಪರ ತೀಡಿದಂತೆ ಅವಾಹತವಾಗಿ ಕಿಯೋ-ಮಿರೋ ಎಂದು ಸದಾಗುತ್ತಿತು.

   ವೀರಪ್ಪಾಜಿ ಸುಮಾರು ಮೂರು ಹರಿದಾರಿ ದೂರ ಕ್ರಮಿಸಿರಬೇಕು. ಬೆಟ್ಟದ ಬುಡದಲ್ಲಿ 

ಹಸುರು ಛಾವಣಿಯ ಕೆಳಗೆ ಹರಡಿದ್ದ ಊರು ಕಾಣಿಸಿತು. ಬೆಟ್ಟದಪುರ. ನಡೆದ ಪಾದಗಳು ಸೋತಿರಲಿಲ್ಲ. ಯಾವ ಶ್ರಮವೂ ಆಗಿರಲಿಲ್ಲ ವೀರಪ್ಪಾಜಿಗೆ. ಶಿವರಾತ್ರಿಯ ತಂಗಾಳಿಯ ರೆಕ್ಕೆಗೆ ಜೋತಾಡಿ ತಾನು ತೇಲಿಬಂದಂತೆ ಅವನಿಗೆ ಅನಿಸಿತು.

   ಊರಿಗೆ ಬೆನ್ನೆಲುಬಾಗಿ ನಿಂತಿದ್ದ ಕೋನಾಕೃತಿಯ ಬೆಟ್ಟ. ಅದರ ಸುತ್ತಲೂ ಅರಣ್ಯ. 

ಬೆಟ್ಟದ ತುದಿಯ ಮೇಲೆ ಗುಡಿ. ಅಲ್ಲಿ ಮಲ್ಲಿರ್ಕಾಜುನನನ್ನು ವೀರಪ್ಪ ಕಾಣಬೇಕು.

  "ಹರಹರ ಮಹಾದೇವ!" "ಹರಹರ ಮಹಾದೇವ!" 
  ನೂರಾರು ಕಂಠಗಳಿಂದ ಬರುತ್ತಿರುವ ಈ ಘೋಷ? ಸಂತೆಮಾಳದಂತಿದೆಯಲ್ಲ 

ಊರು?

  "ಹರಹರ ಮಹಾದೇವ!" "ಹರಹರ ಮಹಾದೇವ!"  
  ಬೆಟ್ಟವನ್ನು ಸುತ್ತಿರುವ ಅಡವಿಯೊಳಗಿಂದ ಅಲೆಅಲೆಯಾಗಿ ಆಕಾಶಕ್ಕೇರುತ್ತಿರುವ ಈ 

ಕೂಗು ? ಅಲ್ಲೇನು ಮಾಡುತ್ತಿದೆ ಜನಸಂದಣಿ ?

   ವೀರಪ್ಪನ ಹೃದಯ ನಕ್ಕಿತು : 
  'ಇಂದು ಶಿವರಾತ್ರೆ ! ಹತ್ತೂರುಗಳಿಂದ ಬಂದಿರುವ ಭಕ್ತಾದಿಗಳು ಮಲ್ಲಿಕಾರ್ಜುನನ 

ದರ್ಶನಕ್ಕೆ ಹೋಗತಾ ಇದಾರೆ. ಇವತು ಜಾತ್ರೆ!'

                                ೨೧
   ಜಾತ್ರೆಗೆ ಬಂದವರು ಹತ್ತು ಸಹಸ್ರಕ್ಕೂ ಹೆಚ್ಚು ಜನ. ಬೆಟ್ಟದ ಬೋಳು ಶಿಖರದ 

ಸುತ್ತಲೂ ಅವರ ಬೀಡು. ಹರಕೆ ಕಾಣಿಕೆಗಳನ್ನು ತಲೆಯ ಮೇಲೆ ಅವರು ಹೊತು ತಂದಿದ್ದರು. ಪಾರಣೆಯ ಊಟಕ್ಕೋಸ್ಕರ ಮಠಕ್ಕೆ ಒಪ್ಪಿಸಲೆಂದು ಅಕ್ಕಿಬೇಳೆಗಳನ್ನು ಎತ್ತುಗಳ ಮೇಲೆ ಹೇರಿದ್ದರು.

   ಮಠ, ಗುಡಿಯ ಸನಿಹದಲ್ಲಿತು, ಅಲ್ಲಿನ ಸ್ವಾಮಿಗಳೇ ಮಲ್ಲಿಕಾರ್ಜುನನ ಅರ್ಚಕರು.

ಕಾವಿ ಲಂಗೋಟಿ, ಕೊರಳಲ್ಲಿ ಲಿಂಗ, ಭುಜದ ಮೇಲೆ ಕಂಬಳಿ, ಹೃಷ್ಟಪುಷ್ಟ ಶರೀರ.