ಪುಟ:ಸ್ವಾಮಿ ಅಪರಂಪಾರ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮ ಸ್ವಾಮಿ ಆಪರ೦ಪಾರ ಜನಸಾಮಾನ್ಯರ ನಡುವೆ ಕಂಬಳಿಸ್ವಾಮಿ ಎಂದು ಅವರು ಪ್ರಖ್ಯಾತರಾಗಿದ್ದರು. ಜಾತ್ರೆಗೆ ಬಂದವರೆಲ್ಲರಿಗೂ ದೇವಾಲಯದಿಂದಲೇ ದಾಸೋಹವಾಗುತ್ತಿತು. ಈ ಕಾರಣದಿಂದಲೇ. ಬೆಟ್ಟದ ಮೇಲಿನ ದೇವರು 'ಅನ್ನದಾನಿ ಮಲ್ಲಿಕಾರ್ಜುನ' ಎನಿಸಿಕೊಂಡಿದ್ದ.

  ಆ ಬೆಟ್ಟದ ಮೇಲೆ ಒಂದು ಕೊಳವಿತ್ತು, ಶಿವರಾತ್ರಿಯ ತನಕ ಅದರಲ್ಲಿ ನೀರಿದ್ದು, ಆ 

ಬಳಿಕ ಬತ್ತುತ್ತಿತ್ತು.

  ಬೆಟ್ಟದ ಸುತ್ತಲೂ ಅಸಂಖ್ಯ ಬಿಲ್ವವೃಕ್ಷಗಳಿದ್ದುವು.
  ಉಪವಾಸ ಶಿವಪೂಜೆ ಜಾಗರಣೆಗಳ ಹಬ್ಬ, ಶಿವರಾತ್ರಿ.
  ಆ ಜನಸಾಗರದಲ್ಲೊಂದು ಹನಿಯಾಗಿ ವೀರಪ್ಪಾಜಿ ಮೈಮರೆತ. ಮಿಂದು ಮಡಿ 

ಯುಟ್ಟು ಮೌನದಿಂದ ಜಪಧ್ಯನಮಾಡಿದವರು ಕೆಲಾವರು. ಬೆಟ್ದದಪುರದಲ್ಲೇ ಶುಚಿರ್ಭೂತ ರಾಗಿ ಬಂದಿದ್ದ ಇತರ ಅಸಂಖ್ಯ ಯಾತ್ರಿಕರು. ಶಿವಮಹಿಮೆಯನ್ನು ಹೊಗಳಿ ಹಾಡುತ್ತ ಹೊತುಗಳೆದರು. ಬಿಲ್ವಪತ್ರೆ ಪುಷ್ಪಗಳಿಂದ ಹಲವರು ಹರನರ್ಚನೆಯನ್ನು ಮಾಡಿದರು. ಹಗಲು, ಇರುಳಿನ ನಿರೀಕ್ಷೆಯಲ್ಲಿ ಕಳೆಯಿತು. ಇರುಳು, ಬೆಳಗಿನ ನಿರೀಕ್ಷೆಯನ್ನು ಮಾಡಿತು. ಅಷ್ಟವಿಧಾರ್ಚನೆ, ಷೋಡಶ ಉಪಚಾರ, ಇಷ್ಟಲಿಂಗಾರ್ಚನೆಗಳಾದುವು. ನೂರಾರು ರೈತರು ವಾಸಕಂಸಾಳೆಗಳನ್ನು ನುಡಿಸುತ್ತ ಮಲ್ಲಿಕಾರ್ಜುನನ ಪಾದಗಳಿಗೆ ನಮೋ ಎಂದರು.

                  "ಪಲ್ಲಕ್ಕಿ ಕೊಟ್ಟsರ ಮಲ್ಲಯ್ಯ ಒಲ್ಲೆಂಬ 
                   ಮಲ್ಲೆನೆಂಬೂವ ಮರಿಗುದರಿ 
                   ಮಲ್ಲೆನೆಂಬೂವ ಮರಿಗುದರಿ ಕೊಟಾರ 
                   ಮೆಲ್ಲನೆ ಮಡವನಿಳಿದಾನ"
  –ಎಂದು ಹೆ೦ಗಸರು ಹಾಡಿದರು.
  ಕಂಬಳಿಸ್ವಾಮಿಗಳಿಂದ ಮಹಾಪೂಜೆಯಾದ ಬಳಿಕ ಪಾರಣೆ ನಡೆಯಿತು. ಜಂಗಮರಿಗೆ 

ಹಾಲು ಸಕ್ಕರೆ ಜೇನು ಪಾನಕ ಎಳನೀರು ಬಾಳೆಯಹಣ್ಣು, ಸಂಸಾರಿಗಳು ಭಕ್ಷ್ಯ ಭೋಜ್ಯ ಗಳುಳ್ಳ ಪ್ರಸಾದವನ್ನುಂಡರು...

   ಮಾರನೆಯ ಬೆಳಗ್ಗೆ ಜಾತ್ರೆಯ ಪರಿಷೆ ಕರಗಿತು. ಜನರ ಕಲರವದಿಂದ ತುಂಬಿದ್ದ ಬೆಟ್ಟ

ಈಗ ನೀರವವಾಯಿತು.

   ದೇವಾಲಯದ ಹೊರಗೆ ನಂದಿಯ ಶಿಲಾಮೂರ್ತಿಗೊರಗಿ ಕುಳಿತಿದ್ದ ವೀರಪ್ಪಾಜಿ

ಯನ್ನು ಮಂಪರು ಕವಿಯಿತು. ಸೂರ್ಯನ ಹೂಕಿರಣಗಳ ಸ್ಪರ್ಶದಿಂದ ಅವನಿಗೆಚ್ಚರ ವಾಯಿತು.

   ಶಿವರಾತ್ರೆಗೆಂದು ಬಂದಿದ್ದ ಜಂಗಮರಲ್ಲಿ ಕೆಲವರಿನ್ನೂ ಅಲ್ಲಲ್ಲಿ ಸುಳಿದಾಡುತ್ತಿದ್ದರು. 
   ಮಾಘಮಾಸದ ಗಾಳಿ ಶಿವನುತ್ಸವ ಮುಗಿಯಿತೆಂದು, ಶಿವಶಿವಶಿವ, ಎನ್ನುತ್ತ ಮಾಯ 

ವಾಗತೊಡಗಿತು.

  ವೀರಪ್ಪಾಜಿ ದೇವಾಲಯವನ್ನು ಹೊಕ್ಕು ಲಿಂಗಕ್ಕೆ ಸಾಷ್ಟಾಂಗವೆರಗಿದ. ಎದ್ದು ಅದರ 

ಎದುರು ಕುಳಿತು ಆ೦ತರ್ಮುಖಿಯಾದ.

  ಅವನ ಹೃದಯ ಗೋಗರೆಯಿತು:  
  ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ