ಪುಟ:ಸ್ವಾಮಿ ಅಪರಂಪಾರ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೬೯ ನರವ ತಂತಿಯ ಮಾಡಯ್ಯ, ಎನ್ನ ಬೆರಳ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ ಹಾಡಯ್ಯ, ಎನ್ನ ಉರದಲೊತ್ತಿ ನಿನ್ನ ಜಯಗಾನವಂ ಬಾರಿಸು, ತಂದೇ..."

  ಆತ ಬೇಡಿಕೊಂಡ:
        "ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ 
        ಕೈಲಾಸವೆಂಬ ಭವಸಾಗರವನೋಲ್ಲೆ–ಎನ್ನ ಅಲ್ಲಿಗೆ ಇಲ್ಲಿಗೆ 
        ಎಂದೆಳೆಯದೆ ನಿನ್ನಲ್ಲಿ ಕೂಟಸ್ಥಮಾಡು ನಿಃಕಳಂಕ ಮಲ್ಲಿಕಾರ್ಜುನಾ"
  ಬದುಕಿನ ದೂರಪಯಣದಲ್ಲಿ ಒಂದು ಹಂತವನ್ನಷ್ಟೆ ತಲಪಿದ್ದೆ ತಾನು. ಉಳಿದ 

ಮಾರ್ಗವನ್ನು ಇನ್ನು ಕ್ರಮಿಸಬೇಕು. ಅದಿರುವ ದಿಕು ಯಾವುದು?

   ದೇವರೊಡನೆ ಆತ ದೂರು ನುಡಿದ : 
   "ಕಳವಳದ ಮನವು ತಲೆಕೆಳಗಾಗಿಪ್ಪದು. ಸುಳಿದು ಬೀಸುವ ಗಾಳಿ ಉರಿಯಾಗಿರ್ಪುದು. 

ಬೆಳದಿಂಗಳು ಬಿಸಿಲಾಗಿರ್ಪುದು..."

  ತನಗೆ ದಾರಿ ತೋರುವುದೇನು ಕಷ್ಟವೆ ದೇವರಿಗೆ? 
  "ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡುಬೇಡೆಲೆ 

ಹಂದೇ. ಕಣ್ಣು ಬೇಡಿದಡೀವೆ. ತಲೆಯ ಬೇಡಿದಡೀವೆ...”

   ದೇವರ ಸಾಮರ್ಥ್ಯಕ್ಕೆ ಮಿಾರಿದುದು ಯಾವುದು? 
   "ಕಾಳಿದಾಸಂಗೆ ಕಣ್ಣನಿತ್ತೆ ; ಓಹಿಲಯ್ಯನ ನಿಜಪುರಕೊಯ್ದೆ. ನಂಬಿ ಕರೆದಡೆ ಓ ಎಂದೆ; 

ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ..."

   ವೀರಪ್ಪಾಜಿಯ ಕಣ್ಣುಗಳಿಂದ ಕಂಬನಿ ಕೋಡಿಗಟ್ಟಿ ಹರಿಯಿತು. ಮೈ ಥರಥರನೆ 

ಕcಪಿಸಿತು. ಬವಳಿ ಬರುವಂತಾಯಿತು ಅವನಿಗೆ...

   ಯಾರೋ ಹೊರಗಿನಿಂದ ಕರೆದರು : 
   "ಅಪಾ. ಈ ಕಡೆ ಬನ್ನಿ. ಸ್ವಾಮಿಗಳು ಬರತಾರೆ." 
   ಉತ್ತರ ಇಲ್ಲದುದನ್ನು ಕಂಡು ಆ ವ್ಯಕ್ತಿ ಧ್ವನಿ ಏರಿಸಿ ನುಡಿಯಿತು : 
  “ಕೇಳಿಸ್ತೇನ್ರಪಾ? ಬರ್ರೀ ಅಂದೆ."
  "ಆತ, ಮಠದ ಪರಿವಾರದಲ್ಲೊಬ್ಬ–ಜಂಗಮ. ಒಳ ಬಂದು ವೀರಪ್ಪಾಜಿಯ ಮೈ 

ಮುಟ್ಟಿ ಅವನೆಂದ:

  "ಏಳ್ರೀ..." 
  ಗಾಬರಿಗೊಂಡು ಆತ ಕೂಗಿ ಕರೆದ : 
  "ಗಡಾನೆ ಬರ್ರೀ. ಇಲ್ಲೊಬ್ಬ ಅಯ್ಯ, ಮೂರ್ಛೆ ಹೋಗಿದ್ದಾರೇ." 
  ಇಬ್ಬರು ಮೂವರು ಜಂಗಮರು ಓಡಿಬಂದರು. ವೀರಪ್ಪಾಜಿಯನ್ನೆತ್ತಿ ಹೊರತಂದು 

ಜಗಲಿಯ ಮೇಲೆ ನೆರಳಲ್ಲಿ ಮಲಗಿಸಿದರು, ತಣ್ಣೀರು ತರಿಸಿ ಶೈತ್ಯೋಪಚಾರ ಮಾಡಿದರು...

  ...ಮೂರ್ಛೆ ಹೋಗಿದ್ದ ಆ ಕೆಲ ನಿಮಿಷಗಳಲ್ಲಿ ಮಲ್ಲಿಕಾರ್ಜುನ ತನ್ನೊಡನೆ ಮಾತನಾಡಿ 

ದಂತೆ ವೀರಪ್ಪಾಜಿಗೆ ಭಾಸವಾಗಿತು. ಪದಗಳು ಅಲೆಯಲೆಯಾಗಿ ಬಂದು ಪ್ರಜ್ಞೆಯ ಭೇರಿ ಯನ್ನು ಬಡೆದಿದ್ದುವು : "ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ ಎಂಬೀ