ಪುಟ:ಸ್ವಾಮಿ ಅಪರಂಪಾರ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೦ ಸ್ವಾಮಿ ಅಪರಂಪಾರ ಎಂಟು ಸುತ್ತಿನ ಕೋಟೆಯನ್ನು ಅನುಭವಿಗಳ ಮತವಿಡಿದು ಹೋಗು: ಲಿಂಗಾಚಾರ, ಸದಾಚಾರ, ಭೃತ್ಯಾಚಾರ, ಶಿವಾಚಾರ, ಗಣಾಚಾರ ಎಂಬ ನೀತಿಯ ಐದು ದಾರಿಗಳಲ್ಲಿ ನಡೆ; ಭಕ್ತ, ಮಾಹೇಶ, ಪ್ರಸಾದಿ, ಪಾಣಲಿಂಗಿ, ಶರಣ, ಐಕ್ಕ ಎಂಬ ಅರಿವಿನ ಆರು ಮೆಟ್ಟಲುಗಳನ್ನೇರು; ಲಿಂಗಾಂಗ ಸಾಮರಸ್ಯ ಎಂಬ ದಾರವನ್ನು ಹೊಗು...ನೀನಿನ್ನು ಅಪರಂಪಾರ."

   ವೀರಪ್ಪಾಜಿ ತೊದಲಿದ್ದ:
   “ದೀಕ್ಷೇ?"
   “ಇನ್ಯಾತರ ದೀಕ್ಷೇ?!"
   ಕ್ಷಣಕಾಲ ಸುಮ್ಮನಿದ್ದು ವೀರಪ್ಪಾಜಿ ಮತ್ತೊಂದು ಪ್ರಶ್ನೆ ಕೇಳಿದ್ದ:
   “ದೇಶಕ್ಕೆ ಆಪತ್ತೊದಗಿದಾಗ?"
   "ಅಂಥಾ ಗಳಿಗೆಯಲ್ಲಿ ನಿನ್ನಿಂದೇನಾಗಬೇಕೋ ಅದನ್ನು ಮಾಡಿಸಿಕೊಳ್ಳುವೆ. ಈಗ 

ಯಾಕೆ ಆ ಚಿಂತೆ? ಹೋಗು."

    ಆನಂದ ಉಕ್ಕೇರಿ ದೇವರ ಪಾದಗಳನ್ನು ಹಿಡಿಯಲೆತ್ನಿಸಿದ್ದ ವೀರಪ್ಪಾಜಿ...
    ಅತ್ತ ಬಂದ ಸ್ವಾಮಿಗಳು ಬಾಗಿ ನೋಡಿ ಕೇಳಿದರು :
    "ಏನಾಯಿತು ? ಯಾರು ?"
    ಶಿವರಾತ್ರೆಗೇಂತ ಬಂದವನಿರಬೇಕು. ಯಾರೋ ತಿಳೀದು."
    ಅಷ್ಟರಲ್ಲಿ ಪ್ರಜ್ಞೆ ಮರಳಿದ ಜಂಗಮ, ತನ್ನ ಸುತ್ತಲೂ ಬಿರುನೋಟ ಬೀರುತ್ತ ಎದ್ದು ಕುಳಿತು,ಅಂದ:
   "ನಾ ಇನ್ನು ಹೊರಡತೀನಿ. ಹೋಗು-ಅಂದ ಮಲ್ಲಿಕಾರ್ಜುನ."
  ಸ್ವಾಮಿಗಳೆಂದರು :
  "ಹೌದು? ಎಲ್ಲಿಗೆ?"
 ಯಾರು ಪ್ರಶ್ನಿಸಿದರೆಂಬುದನ್ನು ಗಮನಿಸದೆ ಜಂಗಮನೆದ್ದುನಿಂತು, ತಾರಕ ಸ್ವರದಲ್ಲಿ 

ನುಡಿದ :

 "ದಾರಿ ಬಿಡಿ! ದಾರಿ ಬಿಡಿ! ಬಸವಕಲಾಣಕ್ಕೆ ಹೋಗುವೆ !, ಉಡುತಡಿಗೆ ! ತೀರ್ಥಾ 

ಟನೆಗೆ !"

 “ನಿನ್ನ ಹೆಸರೇನು ?” ಎಂದು ಕೇಳಿದರು, ಸ್ವಾಮಿಗಳು.
 ಈಗಲೂ ಅವರನ್ನು ನೇರವಾಗಿ ದಿಟ್ಟಿಸದೆ ಜಂಗಮನೆಂದ:
 "ನಾನು ಅಪರಂಪಾರ !" 
 ನೆರೆದಿದ್ದವರಲ್ಲೊಬ್ಬ, ಈತ ಅರೆಮರುಳನಂತಿದಾನೆ-ಎಂದು ಸನ್ನೆ ಮಾಡಿ ತೋರಿ 

ಸಿದ. ಉಳಿದವರು ನಕ್ಕರು.

 ಆ ಕಡೆಗೆ ಲಕ್ಷ್ಯವನ್ನೇ ಕೊಡದೆ ಅಪರಂಪಾರ ಬೆಟ್ಟದಿಂದ ಇಳಿಯತೊಡಗಿದ.
                              ೨೨
 ಚಿಕವೀರರಾಜೇಂದ್ರ ಪಟ್ಟಾಭಿಶಿಕ್ತನಾದ ವಿಕ್ರಮ ಸಂವತ್ಸರದಿಂದ ವಿರೋಧಿ ಸಂವತ್ಸರ ದವರೆಗೆ, ಹತ್ತು ವರ್ಷಗಳ ಕಾಲ, ಕೊಡಗಿನ ಪ್ರಜೆಗಳು ನೆಮ್ಮದಿಯಿಂದ ಜೀವಿಸಿದರು.