ಪುಟ:ಸ್ವಾಮಿ ಅಪರಂಪಾರ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೭೧ ಆರಂಭದಲ್ಲಿ ತನ್ನ ದಾರಿಯ ಕಂಟಕಗಳ ನಿವಾರಣೆಗಾಗಿ ಅರಸು ತೋರಿದ ಕ್ರೌರ್ಯವೀಗ ಹಳೆಯ ಮಾತಾಗಿತ್ತು. ಯುವಕನಾದ ರಾಜ ಕೊಡಗಿನ ಯುವಜನಾಂಗದ ಆಶೋತ್ತರಗಳ ಸಾಕಾರಮೂರ್ತಿಯಾಗಿದ್ದ.

  ಚಿಕವೀರರಾಜನ ಆಡಳಿತದಲ್ಲಿ ಬಿಗುವು ಬಹಳ. ಅಲಸಿಗಳನ್ನೂ ಮೈಗಳ್ಳರನ್ನೂ ಕಂಡರೆ ಅವನು ಕಿಡಿ ಕಾರುತ್ತಿದ್ದ. ಅದು ತಂದೆಯಿಂದ ಆನುವಂಶಿಕವಾಗಿ ಆತ ಪಡೆದಿದ್ದ ಗುಣ. ಲಿಂಗರಾಜನ ಕಾಲದಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡಿದ್ದ ದಿವಾನರಿಬ್ಬರು–ವಿಶೇಷ ವಾಗಿ ಬೋಪಣ್ಣ-ಹೊಸ ಅರಸ ಕಿರಿಯವನೆಂಬ ಕಾರಣದಿಂದ ತಮ್ಮ ಕುಂದಿದ ಅಧಿಕಾರ ವನ್ನು ಬಲಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಚಿಕವೀರರಾಜ ಅದಕ್ಕೆ ಅವಕಾಶವೀಯ లిల్ల.
 ಅರಸನ ಯುವಕ ಸ್ನೇಹಿತರಲ್ಲಿ ಒಬ್ಬ. ಬಸವ. ಇನ್ನೊಬ್ಬ ಮಲೆಯಾಳದಿಂದ ಅಲೆಯುತ್ತ ಬಂದು ತನ್ನ ಧೈರ್ಯ ಸ್ಥೈರ್ಯಗಳಿಂದ, ಅಭಿರುಚಿಗಳಿಂದ, ರಾಜನನ್ನು ಮೆಚ್ಚಿಸಿದ

ಅಬ್ಬಾಸ್ಅಲಿ. ಇವರ ಸಹವಾಸ ದೊರೆಗೆ ಇಷ್ಟವಾಗಿತ್ತು.

 ಚಿಕವೀರರಾಜ ಗದ್ದುಗೆಯೇರಿದ ಮೂರನೆಯ ವರ್ಷ ನಡೆದೊಂದು ಬೇಟೆ ಕೊಡಗಿನಲ್ಲಿ ಮನೆಮನೆಯ ಮಾತಾಯಿತು. ಹಾರುತ್ತಿರುವ ಹಕ್ಕಿಯ ಕಣ್ಣಿಗೇ ಗುರಿ ಹೊಡೆಯುವ ಸಾಮರ್ಥ್ಯವಿದ್ದ ದೊರೆ, ನಾಲ್ವತು ದಿನಗಳ ಅಖಂಡ ಬೇಟೆಯಲ್ಲಿ ಇನ್ನೂರ ಮೂವತ್ತ

ಮೂರು ಆನೆಗಳನ್ನು ಗುಂಡುಹೊಡೆದು ಕೆಡವಿದ. ಕೊಡಗಿನ ಪ್ರಜೆಗಳ ದೃಷ್ಟಿಯಲ್ಲಿ ಅದು ಅಸಮ ಸಾಹಸವಾಗಿತ್ತು. ಆ ಬೇಟೆಯಲ್ಲಿ ಭಾಗಿಗಳಾದಾಗ ಬಳಲದಿದ್ದವರು ಇತರರಿಗೆ ಅದನ್ನು ಬಣ್ಣಿಸಿ ಬಸವಳಿದರು.

 ಆಗ ಎರಡು ವರ್ಷಗಳ ಹಸುಳೆ, ಅರಸುಗುವರಿ. ಹುಟ್ಟಿದು ಗಂಡಾಗಲಿಲ್ಲ ಎಂಬ ಬೇಸರ ಕೆಲದಿನಗಳಷ್ಟೇ ರಾಜನನ್ನು ಕಾಡಿತ್ತು. ಆದರ ಬಾಲಲೀಲೆಗಳನ್ನು ಕಂಡಮೇಲೆ, ಮೋಹದ ಮಡದಿಯ ಒಡನಾಟವೂ ಪುನಃ ದೊರೆಯತೊಡಗಿದ ಬಳಿಕ, ಮಗುವನ್ನು ಆತ ಪ್ರೀತಿಸಿದ.
  ಮುಂದೆ ತೊದಲುತ್ತ. “ಅಪ್ಪಾಜಿ..." ಎಂದು ತನ್ನ ತಂದೆಯನ್ನು ಅದು ಕರೆಯ ತೊಡಗಿದಾಗ, “ಇದೇ ಸ್ವರ್ಗ ಸುಖ" ಎಂದುಕೊಂಡ ಅರಸ.ಬಿಡುವಿನ ವೇಳೆಯನ್ನೆಲ್ಲ ಆತ ಮಗುವಿನೊಡನೆ ಕಳೆಯುತ್ತಿದ್ದ. ದೊರೆಯ ಕೃಪಾಕಟಾಕ್ಷಕ್ಕಾಗಿ ಹಂಬಲಿಸುತ್ತಿದ್ದ ಅಂತಃ 

ಪುರದ ಇತರ ಹೆಣ್ಣುಗಳು ಇದನ್ನು ಕಂಡು ಕರುಬುವಂತಾಯಿತು.

 ಒಮ್ಮೆ ರಾಣಿ ಗೌರಮ್ಮನೆಂದಳು :
 "ಹೆಣ್ಣು ಮಗುವನ್ನೇ ಇಷ್ಟೊಂದು ಮುದ್ದಿಸುತ್ತೀರಿ. ಇನ್ನು ಗಂಡಾದರೆ ಹೇಗೋ?" 
ಆದರೆ ಅವಳ ಆ ಆಸೆ, ದಿನಕಳೆದಂತೆ, ಈಡೇರುವ ಲಕ್ಷಣಗಳು ಕಾಣಿಸಲಿಲ್ಲ, ಚೊಚ್ಚಲ ಹೆರಿಗೆಯಲ್ಲಿ ದೇಹಕ್ಕಂಟಿದ ಅಸ್ವಾಸ್ಥ್ಯ, ಬದುಕಿನುದ್ದಕ್ಕೂ ಅವಳ ಜತೆಗಿರುವಂತೆ ಕಂಡಿತು.
  ಅಪ್ಪಂಗಳದ ಅರಮನೆಯಲ್ಲಿ ಮಾತ್ರ ಈರ್ಶ್ಯೆಯ ಕುಡಿಯೊಂದು ತನ್ನ ಸುತ್ತಲೂ 

ನಾಲಿಗೆ ಚಾಚಲೆತ್ನಿಸುತ್ತ ಮಂದವಾಗಿ ಉರಿಯುತ್ತಿತು. ಚಿಕವೀರರಾಜನ ಆಡಳಿತ ಸುಭದ್ರ ವಾಗಿ ನೆಲೆಯೂರಿದುದು ಚನ್ನಬಸಪ್ಪನಿಗೆ ನಿರಾಸೆಯನ್ನುಂಟುಮಾಡಿತು. ಚಿಕವೀರರಾಜ ನನ್ನು ತಳ್ಳಿಹಾಕಿ ಅವನ ತಂಗಿ-ತನ್ನ ಮಡದಿ-ಪಟ್ಟವೇರುವುದು ಸಾಧ್ಯವಾದೀತು; ಆಕೆ ಯನ್ನು ಮುಂದಿಟ್ಟು ತಾನೇ ಕೊಡಗನ್ನಾಳಬಹುದು–ಎಂದು ಚನ್ನಬಸಪ್ಪ ಮನದಲ್ಲಿ ಮಂಡಿಗೆ ತಿಂದಿದ್ದ. ಅರಸನದು ಹೆಣ್ಣುಮಗು; ತನಗೊಂದು ಗಂಡು ಹುಟ್ಟಿತೆಂದರೆ,