ಪುಟ:ಸ್ವಾಮಿ ಅಪರಂಪಾರ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೨ ಸ್ವಾಮಿ ಅಪರಂಪಾರ ಗೌರಮ್ಮನಿಗೆ ಮುಂದೆ ಪುತ್ರಸಂತಾನ ಆಗಲಿಲ್ಲವೆಂದರೆ, ತನ್ನ ಸಂತತಿಗೇ ಮುಂದೆಯೂ ಪಟ್ಟ ದೊರೆವುದು–ಎ೦ದೂ ಆತ ಯೋಚಿಸಿದ್ದ. ಅವನ ದುರದೃಷ್ಟದಿಂದ ದೇವಮ್ಮಾಜಿ ಗರ್ಭವತಿಯಾಗಲೇ ಇಲ್ಲ.

  ಹತಾಶನಾದ ಘಳಿಗೆಯಲ್ಲಿ ಒಡಲ ಸಂಕಟವನ್ನು ಚನ್ನಬಸಪ್ಪ ಹರಿಯಬಿಡುತ್ತಿದ್ದ:
 "ಅವನ ತಲೆ ಚಿನ್ನದು, ನಮ್ಮ ತಲೆ ಮಣ್ಣಿಂದಾ? ಸಾಹಸದಲ್ಲಿ ಅವನಿಗಿಂತ ನಾವೇನು ಕಮ್ಮಿ?"
 ಇದು ಬಡಿವಾರದ ಮಾತಲ್ಲವೆಂದು ದೇವಮ್ಮಾಜಿ ಬಲ್ಲಳು. ಆತ ಆಕೆಗೆ ಪತಿಯಾಗಿ ದೊರೆತುದೂ ಅಸಾಧಾರಣವಾದೊಂದು ರೀತಿಯಲ್ಲಿ. ಅವಳ ತಂದೆ ಲಿಂಗರಾಜನೊಮ್ಮೆ ಗ್ರಾಮಾಂತರ ಪ್ರದೇಶಕ್ಕೆ ಕಂದಾಯ ನಿಗದಿ ಮಾಡಲೆಂದು ಹೋದವನು ಒಂದೆಡೆ ವಿಹರಿಸು ತ್ತಿದ್ದ.ದೂರದಲ್ಲೊಂದು ಎಮ್ಮೆ ಮೇಯುತ್ತಿತ್ತು.ಅದರ ಮೇಲೊಂದು ಕಾಗೆ ಕುಳಿತಿತ್ತು.
 ಲಿಂಗರಾಜನೆಂದ :
 "ಗುಂಡು ಹಾರಿಸಿ ಆ ಕಾಗೇನ ಹೊಡೀಬೇಕು. ಎಮ್ಮೆ ಸಾಯಬಾರದು. ಇಂಥ ಗುರಿ 

ಕಾರರು ಯಾರದೀರಿ? ಬನ್ನಿ."

 ಪರಿವಾರದಲ್ಲಿದ್ದವರು ಒಬ್ಬರ ಮುಖವನ್ನೊಬ್ಬರು ನೋಡಿದರು.
 "ಇಷ್ಟೇನಾ ನಿಮ್ಮ ಗಂಡಸ್ತನ ?” ಎಂದು ಲಿಂಗರಾಜ ಮೂದಲಿಸಿದ.
ಆಗ ಒಬ್ಬ ಯುವಕ..ಕೊಡವ ಮುಂದೆ ಬಂದ. ಗೌರಾಂಗ, ಎತ್ತರದ ನಿಲುವು, ತೆಳ್ಳಗಿನ ದೇಹ, ಮೂಗು ಮಾಟವಾಗಿತ್ತು. ಆತ ಮಕಾಟಿ ಅಪ್ಪಣ್ಣ.
 ಉಳಿದವರು ಬೆರಗಾಗಿ ಅವನನ್ನು ನೋಡಿದರು.
 ಯುವಕನನ್ನು ಆಪಾದಮಸ್ತಕ ದಿಟ್ಟಿಸಿ ಅರಸನೆಂದ:
 ಮಿಕಿಮಿಕಿ ನೋಡ್ಕೊಂಡು ಯಾಕ್ನಿಂತಿದೀಯಾ ಮದುವೆಗಂಡಿನ ಹಾಗೆ ? ಹಾರಿಸು

ಗುಂಡು."

 ಅಪ್ಪಣ್ಣ ಗುರಿಯಿಟ್ಟ ಹೊಡೆದ. ಕಾಗೆ ಸತು ಕೆಳಗೆ ಬಿತು, ಎಮ್ಮೆ ಕೋಡುಗಳನ್ನೆತ್ತಿ 

ಬೆನ್ನಿನ ಕಡೆ ದೃಷ್ಟಿ ಹೊರಳಿಸಿ, ಎರಡು ಹೆಜ್ಜೆ ಮುಂದೆ ಸಾಗಿ ಪುನಃ ಮೇಯತೊಡಗಿತು. ಗುಂಡಿನ ಹೊಗೆ ಪುಟ್ಟ ಮೋಡವಾಗಿ ಮೇಲೆ ಹೋಯಿತು.

 "ಭಳಿರೆ ಅಪ್ಪಣ್ಣ!" ಎಂದು ಜನರು ಚಪ್ಪಾಳೆ ತಟ್ಟಿದರು.
 ಅರಸ ತಾನೂ ಕೈತಟ್ಟಿ ಹರ್ಷಪ್ರದರ್ಶನ ಮಾಡಿದ.
 ರಾಜಧಾನಿಗೆ ಹೊರಡುತ್ತ ದೊರೆ, ಮಕ್ಕಾಟಿ ಅಪ್ಪಣ್ಣನ ಹಿರಿಯರು ಯಾರೆಂದು 

ವಿಚಾರಿಸಿದ. ಅವರನ್ನು ಅರಮನೆಗೆ ಬರಹೇಳಿದ.

 ಅಪ್ಪಣ್ಣ ಚನ್ನಬಸಪ್ಪಣ್ಣನಾಗಿ ರಾಜಕುಮಾರಿ ದೇವಮ್ಮಾಜಿಯ ಕೈಹಿಡಿದ ಬಗೆ ಅಂದು.      ವರ್ಷಗಳು ಕಳೆದಂತೆ ದೇವಮ್ಮಾಜಿ ಮಡಕೇರಿಯ ಅರಮನೆಗೆ ಹೋಗುವುದು ಕಡಿಮೆ ಯಾಯಿತು. ಅರಸನನ್ನು ಕುರಿತು ಚನ್ನಬಸಪ್ಪ ಆಡುತ್ತಿದ್ದ ಕಹಿ ನುಡಿಗಳಿಗೆ ಬೋಪಣ್ಣ ಕಿವಿಗೊಡುತ್ತಿದ್ದ. ಮಡಕೇರಿಗೆ ಬಂದರೂ ಅರಮನೆಯೊಳಗೆ ಕಾಲಿರಸದೆಯೇ ಚನ್ನಬಸಪ್ಪ ಹಿಂತಿರುಗುವುದಿತ್ತು. ಅಪ್ಪಂಗಳದ ದಾರಿಯಾಗಿ ಬಂದ ತಕ್ಕರು ಸರ್ವಕಾರ್ಯಕಾರರಲ್ಲಿ ಕೆಲವ ರೊಡನೆ, ತನ್ನ ಮನಸ್ಸಿನ ಬೇಗುದಿಯನ್ನು ಅವನು ತೋಡಿಕೊಳ್ಳುತ್ತಿದ್ದ.
 ಇಂತಹ ವಿರಸ ರಹಸ್ಯವಾಗಿ ಉಳಿಯುವುದಿಲ್ಲ. ಅರಮನೆಯ ಅಳಿಯನ ಔದ್ಧತ್ಯ ಸಹಜ