94 ಹನುಮದ್ರಾಮಾಯಣ ತರದಿಂ ಪರಿಶೋಭಿಪ ಬಂ ! ಧುರತರವರಶಿಂಶಪಾದ್ರುಮಮನಾ ಹನುಮಂ || ೮೨ }} ಆ ಮರನಡಿಯೊಳ್ ರಾಮಸು | ನಾಮಮನಡಿಗಡಿಗೆ ನೆನೆದು ಶೋಕಿಪ ಸೀತಾ | ಕಾಮಿನಿಯಂ ಮುನಿನುತೆಯಂ | ತಾಮರಸಾಂಬಕೆಯನೈದೆ ಕಂಡಂ ಹನುಮಂ || ೮೩ !! ಬಳಲಿ ಬಡವಾದ ದೇಹದ || ಮಳಿನಾಂಬರದೇಕವೇಣಿಯಚೂರಸ | ಮ್ಮಿಳಿತಾಯತನೇತ್ರದ ಭೂ || ತಳಶಯ್ಯ ಭೂಮಿಜಾತೆಯಂ ಕಂಡನವಂ || ೮೪ !! ಘನಕುಲಮಧ್ಯದೊಳೊಂದೆಡೆ | ಮಿನುಗುವ ಚಂಚಲೆಯೂ ರಾಹು ಸಲೆಸೊಂಕಿದ ಚಂ || ದ್ರನ ಕಲೆಯೋ ಎನೆ ರಾಕ್ಷಸ || ವನಿತಾಜನಮಧ್ಯದಬ್ಬಮುಖಿಯಂ ಕಂಡಂ | ೮೫ | ಶರಭಲುಲಾಯೋರಗಹರಿ | ಕರಿಕಿಟಿಶಾರ್ದೂಲಶುನಕವದನದ ನಾಲ್ಕಂ || ಟೆರಡಾರುದಲೆಯ ರಾಕ್ಷಸಿ | ಯರ ಪರಿವೇಷ್ಟನದ ಭೂಮಿಸುತೆಯಂ ಕಂಡಂ | ೮೬ | ಆನೇಂ ಸುಕೃತಿಯೋ ಸೀತಾ | ಮಾನಿನಿಯಂ ಪರಮಪುಣ್ಯಚರಿತೆಯನಾ ಚಂ | ದ್ರಾನನೆಯಂ ಕಂಡೆನೆನು | ತಾನಂದಂಬಡೆದು ಸಾರ್ವ್ವನಾ ದ್ರುಮದೆಡೆಯಂ || ೮೭ ! ಶ್ರೀರಾಮಂ ಪೇಳ್ತಂದದೊ | ೪ ರಮಣಿಯೊಳಿರ್ನ್ನುವಮಿತಶುಭಲಕ್ಷಣಗಳ | ಧಾರಿಣಿಸುತೆಯಪ್ಪಳೆನು || ತಾರಯಿಾಕ್ಷಿಸಿದನನಿಲಸುತನವನಿಚ್ಛೆಯಂ || ಲೆಲೆ || ಜನಕಧರಾನಾಧನೊಳಂ | ಜನಿಸುತೆ ಜಗದೀಶನರಸಿಯೆನಿಸುತಮಿರ್ಪ | ಳ್ಳಿ ನಿತೊಂದು ಬವಣೆಯನುಚಿತ | ಮೆನುತಂ ಮರುಗುತ್ತಮಿರ್ದ್ದನಾ ಮರದುದಿಯೊಳ್ | ೮೯ ||
ಪುಟ:ಹನುಮದ್ದ್ರಾಮಾಯಣಂ.djvu/೧೦೨
ಗೋಚರ