96 ಹನುಮದ್ರಾಮಾಯಣ. ನರಸಂ ಬಂದಪನೆಂಬುದ || ನುರೆ ಮರೆದು ನೋಳ್ಳುದನ್ನನೆಂದಂ ನಗುತಂ || ೯೭ || ಚರರಿಂ ಕೇಳೋ ರ್ಪo ವಾ | ನರರೊಳ್ಳಿ ಕೃತ್ಯದಿಂದ ಮಾನವರಿರ್ವರ್ | ಮರೆಗೊಂಡಿರ್ಪರೆನುತ್ತುಂ | ತರಳಾಂಬಕೆ ಬಿಡುಬಿಡವರ ವಾಂಛಯನೆಂದಂ | ೯೮ | ಶರನಿಧಿಯಂ ಬಂಧಿಸಿ ದನು | ಬರ ಬಾಣದೊಳುಳಿದು ನಿನ್ನನತ್ರಣ ಮನುಜರ್ | ಕರೆದುಯ್ಯರೆಂಬ ಬಗೆಯಂ || ತೊರೆನೊರೆ ಸಂತಸದೆ ಬಾಳಲೆನ್ನೊಡನೆಂದಂ || ೯೯ || ಓಲಗಿದರೆನ್ನನಬ್ಬಜ | ಶೂಲಿಸುರೇಂದ್ರಾದ ರವಿಶಮಮರಸತಿಯರೆ || ನ್ಯಾಲಯದೊಳೊಗಮಿರ್ಷ್ಪರ್ | ನೀಲಾಳಕೆ ನಿನ್ನ ಸೇವಗವರಂ ಕುಡುವೆಂ || ೧೦೦ || ಇಂತಸಲುರಿ ಮಸಗೆ ಧರಾ || ಕಾಂತನ ಸತಿ ತೃಣಮನೊಂದನೀಕ್ಷಿಸುತಾಗಳ್ || ಸ್ವಾಂತಾಭಿಪ್ರಾಯಗಳಂ | ತಾಂ ತಳ್ಳದೆ ಪೇಳೋಳುಗ್ರತರಕೊಪದೊಳಂ | ೧೦೧ || ಎಲೆ ಮರುಳೆ ನಿನ್ನ ಸತ್ವದ || ನೆಲೆಯಂ ನಾಂ ಕಂಡೆನೆಂದು ಹರಚಾಪದೊಳಂ || ಸಿಸಿಲ್ವಿರ್ದಾಗಳೆ ನೀಂ || ಗಳಡದಿರಿನ್ನೆನ್ನೊಳೆಂದು ಮಗುಳ್ಳಿಂತೆಂದಳ್ || ೧೦೨ || ರವಿವಂಶಜರಿಲ್ಲದ ಸಮ | ಯವನೀಕ್ಷಿಸಿ ಬಂದ ಕಾರಣಂ ಬದುಕಿದೆ ರಾ | ಘವನಿರ್ವೊಡೆ ನಿನಗಂ ಕಾ | ಣ್ಣುವುದಾಗಳೆ ಜವನ ಪತ್ತನಂ ಪಂಥಾನಂ | ೧೦೩ | ಶರನಿಧಿಯಂ ಬಂಧಿಸಿ ದೈ | ತ್ಯರನೆಲ್ಲಂ ಕೊಂದು ನಿನ್ನ ಸಾಲೆಗಳನುಂ | ಧರೆಗಿಳಿಪುತುಮೆನ್ನಂ ನಿಜ | ಪುರಕಂ ಕೊಂಡುಯ್ಯ ನಾತನೆಂದರಿ ಮನದೊಳ್ || ೧೪ |
ಪುಟ:ಹನುಮದ್ದ್ರಾಮಾಯಣಂ.djvu/೧೦೪
ಗೋಚರ