ಪುಟ:ಹನುಮದ್ದ್ರಾಮಾಯಣಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಹನುಮದ್ರಾಮಾಯಣ. ಬಲ್ಲಹನ ಬಳಿಯೂಳಿಡುವೆಂ | ಫುಲ್ಲಾಂಬಕೆ ತೊರೆವುದಿನ್ನು ಚಿಂತೆಯನೆಂದಂ | ೧೫೭ || ತರಳಾ ಕೇಳ್ಳಿನೆಂತೀ || ಶರನಿಧಿಯಂ ದಾಂಟಿವೋಪಿ ರಘುಜನ ಪೊರೆಗಂ || ನೆರೆಯನುಮಾನಿಪೆನೆನುತಂ || ಧರಣಜೆಯೋರೆಯಲೆ ಬೆಳೆದನಾ ಹನುಮಂತಂ || ೧೫ಲೆ || ವದನದ ರಕ್ತಿಮದಿಂದಂ || ವಿಧುಬಿಂಬಂ ಸೂರ್ಯಬಿಂಬದೋಲ್ ಮಾರ್ಪo ತೋ || ರ್ದುದು ಕಾಂಚನಗಿರಿನಿಭಕಾ | ಯದ ರುಚಿಯಿಂ ಜೊನ್ನಮೈದೆ ಬಿಸಿಲಾಯ್ತಾಗಲ್ಲಕೆ || ೧೫೯ || ಜಗದವಸಾನದೊಳೊಪ್ಪುವ || ನಗಜಾಸತಿಯರಸನಂತೆ ಮೆಯೂರ್ದಿಪರ್ಾ || ಶುಗಸುತನಂ ನೋಡುತಂ || ಮೃಗಲೋಚನೆ ಬೆರಗುವಟ್ಟು ತಾನಿಂತೆಂದಳ್ | ೬೦ || ಮಂದರಗಿರಿಯ ವೊಲುದ್ದತಿ | ಬಂಧುರನಾಗಿರ್ಪ್ಪ ಕಾಮರೂಪದ ಕಪಿಯಂ | ಮಂದಗಮನೆಯೋಲೀಕ್ಷಿಸಿ | ಸಂದೇಹಿಸದಂದು ಸಂತಸಂಗೊಂಡೆಂದಳ್ || ೧೬೧ }| ಈ ಸಾಹಸಮಿರ್ಪುದರಿo || ದಾಶರಥಪ್ರೀತನಾದೆ ಆಪ್ತನೆನಲ್ಬಂ || ತೋಷದೆ ಕಳಿಪಿದನಿಲ್ಲಿಗ || ದೇಸುಂ ಶ್ರೇಯಸಿಯೊ ಹನುಮ ನಿನ್ನ ಕಂಡೆಂ || ೧೬೨ | ಕೊಂಡುಯ್ಯಲೆನ್ನಂ ಭೋ || ಮ್ಯಾಂಡಂ ಪರಪುರುಷನೊಡನೆ ನೇಹದ ನಡೆದಾ ಬಂಡೆಯಿವಳೆಂದು ತೆಗಳು | ಬಂಡತನಂ ನಮ್ಮೊಳಿಲ್ಲ ಮಾದೊಡಮಿನಿತುಂ || ೧೬೩ | ಅಲ್ಲದೊಡೆ ನಿನ್ನ ವೇಗದೆ | ತಲ್ಲಣಿಸುತೆ ವಾರಿನಿಧಿಯೊಳಾಂ ಬಿಳಪೆನೋ || ನಲ್ಲಳ ಚೌರ್ಯದೆ ರಾಕ್ಷಸ | ವಲ್ಲಭನುರುಕೋಪದಿಂದೆ ಕೋಲ್ಯನೊ ನಿನ್ನ೦ | ೧೬೪ |