ಪುಟ:ಹನುಮದ್ದ್ರಾಮಾಯಣಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸ. 105 ಅದರಿಂದಾಂ ಬಾರೆಂ ನಡೆ | ವುದು ನೀನೆನ್ನ ರಾಘವನ ಬಳಿಗಂ ಮೇಣ್ || ಪದುಳದ ವಾರ್ತೆಯನೊರೆವುದು | ಪದುಮಾಕ್ಷನನಿಲ್ಲಿಗೆಯೀ ವುದು ಶೀಘ್ರದೊಳಂ || ೧೬೫ | ಅಸುರೆಯರುಂ ಕಂಡೊಡೆ ಬಾ | ಧಿಸುವರ್ಮಗುಳೆನ್ನನೈದೆ ನೀನೀರೂಪಂ || ಬಸಿರೊಳ್ ಬಝಿಟ್ಟುಂ ಮೊದ || ಲೆಸೆದೊಲ್ ಕಾಣಿಸುಗುಮೆಂದೊಡಂತಾದನವಂ || ೧೬೬ || ನೀವಪ್ಪಣೆಗುಡುವೊಡೆ ರಾ || ಜೀವಾಕ್ಷನ ಪೊರೆಗೆ ಪೋಪೆನೆನಗಂ ಕುರಿಪಂ || ದೇವಿ ನಿರೂಪಿಪುದೆಂದೆನು || ತಾ ವಾಯುಕುಮಾರನೈದೆ ಕಯ್ಯುಗಿದುಸಿರ್ದ೦ | ೧೬೭ || ಮಿನುಗುವ ಚೂಡಾಮಣಿಯಂ | ವನಜಾಂಬಕೆ ಕೇಶಪಾಶದಿಂ ತೆಗೆದುಂ ರಾ || ಮನ ಪದಕರ್ಪಿಪುದೆನುತಂ | ಹನುಮನ ಕಯ್ದೆ ತ್ಯಳಂದು ಕಣ್ಣನಿಗಣ್ಹಳ್ {{ ೬ಲೆ || ಕಂದಾ ಬಾರಯ್ ಕರುಣಾ | ಸಿಂಧುವಿನೊಡನಂದು ಚಿತ್ರಕೊಟಾದ್ರಿಯೊಳಂ || ಬಂಧುರಕೇಳಿಯಿನಿರುತಿರೆ || ಯೋಂದಚ್ಚರಿಯಾದುದನ ಕೇಳಾಂ ಪೇಳ್ಳೆಂ ! ೧೬೯ | ಪತಿಯೆನ್ನಂಕದೊಳಂ ತಾ | ನತಿನಿದ್ರಾಸಕ್ತನಾಗಿ ಮಲಗಿರೆ ಪಾಕಾ | ಹಿತತನುಜಾತಂ ಕಾಕಾ | ಕೃತಿಯಿಂದಂ ಬಂದು ಭೀತಿವಡಿಸಿದನೆನ್ನಂ || ೧೭೦ | ರಮಣಂ ಕಂಡರಿದೆನ್ನಂ | ಮಮತೆಯೋಳುಪಚರಿಸಿ ಕೋಪದಿಂದಂ ಖಗನಾ | ದಮನಕೆ ತೃಣಮೊಂದಟ್ಟಿದೊ | ಡಮಿತಾಗ್ನಿಯನುಗುಳುತೆಯ್ಲಿ ತಾ ಶರಮಾಗಳ್ || ೧೭೧ ! ಶರದುರುಬೆಗೆ ತೊಂದುಂ ಸುರ | ವರಮುಖರನೆಯ್ಲಿಯವರ ನೇಮದೊಳಲಿಂ ||