ಈ ಪುಟವನ್ನು ಪರಿಶೀಲಿಸಲಾಗಿಲ್ಲ.
125 ಷಷ್ಠಾಶ್ವಾಸ. ಇಂತಂದು ಶಿರೋರತ್ನಮ | ನುಂ ತವಕದೊಳಿತ್ತು ನಮಿಸಲಬ್ಬದಳಾಕ್ಷಂ || ಸಂತಸದಿಂ ಕಯ್ಯಂಡುಂ | ಚಿಂತಿಸಿದಂ ಭೂಮಿಜಾತೆಯಂ ನೆನೆನೆನೆದುಂ 11 ೧೩೫ | ಎಲರಣುಗನನೀಕ್ಷಿಸುತಂ || ತೊಲವಿಂ ನಿನ್ನ ಸಮಬುದ್ದಿ ಶೌರ್ಯಾದಿಗುಣಂ || ಗಳನಮರೋರಗಮರ್ತ್ಯಾ | ವಳಿಯೋಳ್ ನಾಂ ಕಾಣೆನೆಂದು ಮೇಣಿಂತೆಂದಂ || ೧೩೬ | ಕಳಿದಂಬುಧಿಯಂ ದನುಜನ | ಪೊಳಲಂ ಸಾರ್ಷ್ಟವನಿಜಾತೆಯಿರಮುಂ ತಿಳಿದಾ || ಬಳಿಯಿಂ ಬಂದೆಮಗೊರೆದಿಂ | ದುಳಿಸಿದೆ ಮದ್ವಂಶಕಲ್ಪವಲ್ಲಿಯನೆಂದಂ || ೧೩೭ | ನೀನೆನಗೆ ಮಾಡಿದುಪಕಾ | ರಾನುಗುಣಂ ಪ್ರತಿಯನಾಚರಿಸುವೊಡೆ ಸಾಧ್ಯಂ || ತಾನಲ್ಲವೆಂದು ಹನುಮನ | ನಾನಂದದೊಳಪ್ಪುಗೊಂಡನಾ ರಘುವೀರಂ || ೧೩ಲೆ || ರವಿತನುಜಾತಾಂಗದಜಾಂ | ಬವಕೇಸರಿನೀಲಶರಭಶತಬಲಿನಳರಾ || ಘಲಕ್ಷ್ಮಣರಾನಂದಾ | ರ್ಣವದೊಳಗೊಲಾಡುತಿರ್ದ್ದರೆಂದಂ ಸೂತಂ || ೧೩೯ 11, +++ಳಿ~~