161 ಅಷ್ಟಮಾಶ್ವಾಸ ಮಸಗಿ ಮಹಾವಾನರರಾ | ಕ್ಷಸರುಂ ಕಯ್ದ ಲಸಿ ಪೊಣರ್ದರತ್ಯಂತೋತ್ಥಾ || ಹಸದಿಂದೊರೋರ್ವರ್ ಕಂ | ಪಿಸಿತವನೀತಳಮಮೋಘವೀರಸ್ತನದಿಂ || ೯೦ || ನಳಿನಸಖಂ ಕಂಡಂಜುತೆ | ಜಳನಿಧಿಯಂ ಸಾರ್ಧ್ವನಿಲಸುರರ್ಗ೦ ಬೆಂ || ಬಲಮಾಗಲ್ ಬಂದುದೊ ಕ | ಇಲೆಯೆನೆ ಕವಿದತ್ತು ಪೆರ್ಚ್ಚಿತಸುರರ ಸತ್ಯಂ \ ೯೧ 11, ಅಂಗದಗಂ ರಾವಣಿಯೊಳ್ | ಸಂಗರಮನಿಲಜಗೆ ಜಂಬುಮಾಲಿಯೋಳಂ ನೀ || ಲಂಗೆ ನಿಕುಂಭನೊಳಂ ಕವಿ || ಪುಂಗವಗಾಯಾ ಪ್ರಹಸ್ತಸಚಿವೇಂದ್ರನೊಳಂ 11 ೯೨ || ನಳಗಂ ವಿದ್ಯುನ್ಮಾಲಿಯೋ || ಭಲಸದೆ ಲಕ್ಷಣಗೆ ಖಳವಿರೂಪಾಕ್ಷನೊಳಂ || ಕಲಿಸರಮಾರಮಣಗೆ ಕೊಳು | ಗುಳವಾದುದು ತೀವ್ರವಾಗಿ ಮಿತ್ರಮ್ಮನೊಳಂ \ ೯೩ | ಒರ್ವೊವ್ಯ್ರ್ರಗಾದುದು ಪೊಣ | ರುರ್ವಿಯೋಳಂ ಪೊಸತಿದೆಂಬ ಪರಿಯೊಳ್ ಸ್ವಮಹಾ | ಗರ್ವದೊಳಾರ್ಬಟಿಸುತ್ತಿರೆ | ಪರ್ವತವೃಕ್ಷಾ ಸಶಸ್ತ್ರಚಯದಿಂದಾಗಳ್ || ೯೪ | ಬಾಡದೆ ಬಸವಳಿಯದೆ ಮರು | ಮೋಡಿಗಳಿನಿತಿಲ್ಲದಸುರವಾನರರಾಗಳ್ || ಖಾಡಾಖಾಡಿಯನೆಸಗಿದ | ರಾಡಲದೇನಮಮ ಸಮರಸಾಹಸದಿರಮಂ | ೯೫ | ಮೈಂದದ್ವಿವಿದಕಪೀಶರೊ | ಇಂಗಳಿದ ನಟ ಮುಪ್ಪಿ ತಪನಾಸುರರುಂ || ಕೊಂದಂ ವಿಭೀಷಣಂ ಗದೆ | ಯಿಂದಂ ಮಿತ್ರಷ್ಟನೆಂಬ ದೈತ್ಯಾಗ್ರಣಿಯಂ 11 ೯೬ || ರಾಮಂ ನೆರೆ ಜವದಿಂದೈಂ || ದ್ರಾಮೋಘಾಸ್ತ್ರದಿನೆ ಯಜ್ಞ ಕೊಪಾದಿ ಮಹಾ ||
ಪುಟ:ಹನುಮದ್ದ್ರಾಮಾಯಣಂ.djvu/೧೬೯
ಗೋಚರ