ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 17 ಭರದಿಂದುರುಶಕ್ತಿಯನಾಂ | ತುರುವೇಗದೆ ಪೊಡೆದನವನನಸುರೋತ್ತಂಸಂ || ೩೭ | ಉರಿಗೆದರುತೆ ಬರೆ ಲಕ್ಷಣ | ನುರುಬಾಣಮನೆಚ್ಚು ಶಕ್ತಿಯಂ ಖಂಡಿಸಿದಂ || ಮುರಿವಿಂ ಮುಮ್ಮೊನೆ ಬಂದೆರ್ದೆ | ಗುರುವೇಗದೊಳೆರಗೆ ಮೂರ್ಚ್ಛೆಯಂ ತಾನಾಂತಂ || ೩೮ | ಇಳಿದಳಂದು ವರೂಥದಿ | ನೋಲವಿಂ ದಶಕಂಠನೈದೆ ರಾಮಾನುಜನಂ || ಗಳಿಲೆನಲೆದೊಡೇಳದೆ | ಚಲಿಸದೆ ರಜತಾದ್ರಿಗಧಿಕಮಾಯ್ನಲೆಸೆದಂ | ೩೯ | ಅಚ್ಚರಿವಡುತಿರೆ ಪವನಜ | ನುಚ್ಚಲಿಸುತೆ ಬಲವನೀಕ್ಷಿಸುತೆ ಕಂಗಳೊಳಂ || ಕಿಚ್ಚಂ ಕರೆವುತೆ ಕಿನಿಸಂ | ಚೆಚ್ಚರದಿಂ ಬಂದು ಕಂಡನಾ ದಶಗಳನಂ | ೪೦ | ಎಲವೋ ರಣಚೋರನೆ ನಿಲ್ | ತೊಲಗದಿರಿನ್ನೊಂದೆ ಗುರ್ದ್ದಿಗಂ ನಿನ್ನ ಸುವಂ || ಸಲೆ ಸದೆವೆನೆನುತೆ ತಿವಿಯ | qಳವಳಗೊಂಡಿಳೆಗೆ ಬಿದ್ದು ಮೂರ್ಚ್ಛಿತನಾದಂ | ೪೧ | ಎರಡನೆಯ ರುದ್ರನೀತಂ | ಮರುತಾಜನೆಂದು ದೇವತತಿ ಕೊಂಡಾಡು || ತೆರಲೆತ್ತುತೆ ಲಕ್ಷ್ಮಣನಂ | ಭರದಿಂ ಭೂಪಾಲನೆಡೆಗೆ ತಂದಂ ಹನುಮಂ 11 ೪೨ | ಅನುಜನನೀಕ್ಷಿಸಿ ರಾಮಂ || ಘನಚಿಂತೆಯೋಳಂಕಶಾಯಿಯಂ ಮುದ್ದಿಸಿ ತ || ತನುವಂ ನೇವರಿಸ ಕರ | ವನಜಸ್ಪರ್ಶನಮದಾಗೆ ಮೆಯ್ಯುರಿದೆಳ್ತಂ || ೪೩ | ಅಗ್ರಜಗೆ ಮಣಿದು ಲಕ್ಷಣ | ನುಗ್ರಮಹಾಕೋಪದಿಂದ ಧನುವಂ ಪಿಡಿದು || ನಿಗ್ರಹಿಸೆಂ ದಶಕಂಠಸು | ವಿಗ್ರಹವನೆನುತ್ತೆ ಗರ್ಜಿಸಿದನಾ ಕ್ಷಣದೊಳ || ೪೪ |