ಪುಟ:ಹನುಮದ್ದ್ರಾಮಾಯಣಂ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 211 ಪಾದಪದಿಂ ಸದೆದುಂ ಘನ | ನಾದಂ ವಿರಚಿಸುವ ಯಾಗಮಂ ಪಾಳ್ಯಂ || ೧೨ || ರಾವಣ' ಕಡುಗಿನಿಸಿಂದಂ | ಪಾವಕಗಾಹುತಿಯನಿಡುವುದಂ ನಿಲಿಸುತೆ ಬಾ || ಣಾವಳಿಧನುವಂ ಕೊಂಡುವು | ತೀವೋನ್ನತರಧಮನೇರ್ದ್ದು ಸಮರಕೆ ಬಂದಂ || ೧೩ | ಗಣಿಸಲಾರದ ದಾನವ | ಗಣದೊಡನೆಯ್ತಂದು ವಾನರಾವಳಿಯಂ ಕೆಂ || ಗಣತೆಗಳನೆಚ್ಚಂ ಕೆಡೆಸಿದ || ನಣಿಯರನೂರ್ಪ್ಪಿಂದೆ ರಾವಣಾತ್ಮಜನಾಗಳ್ || ೧೪ | ಅಂಗದಚಾಂಬವಹನುಮರ್ | ಮುಂಗುಡಿಯೆ ಶಕಟತುರಗಹರಿಕಿರಿವರಮಾ | ತಂಗಾರೋಹಕ ದಾನವ | ಪುಂಗವರಂ ಸದೆವುತಿರ್ದ್ದರಚಲಾಗಗಳಿಂ || ೧೫ || ಘನನಾದಂ ಕಡುಮುಳಿಸಿಂ | ಘನನಾದಂಗೆಯ್ಯುತಾರ್ದ್ದು ಬರೆದರೆ ಬಳಿಕಂ || ದನುವರದೊಳ್ ಮಿಗೆ ಲಕ್ಷಣ | ನನುವರಿತುಂ ನಿಂದು ವಿಶಿಖಮಂ ತೆಗೆದೆಚ್ಚಂ ||೬ ಇಸಲಂಬಂ ಕತ್ತರಿಸುತೆ | ಪೊಸಗಣೆಯಂ ತುಡಿಸಿ ತಿರುವಿಗಸುರಂ ಸುತ್ತಲ್ | ಪಸರಿಸೆ ಪೂರ್ವದೊಳಂ ತಾ | ನೆಸಗಿದ ಸಾಹಸದೊಳೆಚ್ಚನತಿವೇಗದೊಳಂ - || ೧೭ || ಛೇದಿಸಿ ಶರಮಂ ರಾಘವ | ಸೋದರನತಿವೇಗದಿಂದೆ ಮುಂಬರಿಯಲ್ಲಂ || ಕ್ರೋಧಾತವದನಂ ಘನ | ನಾದಂ ನಿಜಜನಕನನುಜನಂ ಕಂಡೆಂದಂ | | mಲಿ || ದಾನವಕುಲದೊ೪ ಜನಿಸುತೆ | ಮಾನವನಾಳಾಗಿ ನಿಂದು ನಿಜಮರ್ಮಗಳಂ || ನೀನವರೊಳ್ ಸೂಚಿಸಿ ಕುಲ | ಧೇನುಗೆ ಶಾರ್ದೂಲನಾದೆಯಲೆ ಬಾಹಿರನೇ. || ೧೧೯ |