ತ್ರಯೋದಶಾಶ್ವಾಸ. 259 ಕಲಿಯೊಳಗಿಂದುಂ ಖಳದಶ | ಗಳನಂ ಸರಿದೆಯೆಂದು ನಿಂದಂಬರದಿಂ || ದಿಳೆಗೆಂದುಂ ವರಮಂ | ನಳಿನಾಕ್ಷಂಗಿತ್ತು ಪೋದನಾ ದಿನನಾಥಂ || ೭೫ || ವರಶಾರ್ಬಧನುಸ್ಸಂ ತಾಂ || ಧರಿಸುತೆ ಸಿಂಜಿನಿಯನುಗಿದು ಟಂಕೃತಿಗೆಯ್ಯುಂ || ಉರುತರಶರಮಂ ತುಡಿಸುತೆ | ಹರಿನಾದಂಗೆಯ್ದು ತೆಚ್ಚನಸುರನ ಶಿರಮಂ {{ ೭೬ ! ಕತ್ತರಿಸಿದುದಾತನ ತಲೆ | ಪತ್ನಂ ಮೇಣ್ ಮಗುಳೆ ಚಿಗುರ್ದುದದು ಮುನ್ನಿನ ವೊಲ್ ೧. ಮತ್ತೆಚ್ಚು೦ ತರಿದೊಡಮೊಗೆ || ವುತ್ತಿರ್ದ್ದುವು ಮಸ್ತಕಂಗಳದನೇವೇಳ್ತಂ | ೭೭ | ದಶಶಿರನೆಚ್ಚ ಶರಂಗಳ್ || ಬಿಸಜಾಕ್ಷನ ತನುವನೈದೆ ಛೇದಿಸುತ್ತಿರಲುಂ | ಮಸಗಿ ರಘುಕ್ಷಿತಿನಾಯಕ | ನಿಸೆ ಶರಮಂ ತರಿದುದಸುರನುರುಮೂರ್ಧೆಗಳಂ || ೭೮ | ಪುಟ್ಟಸುರನ ತಲೆಗಲ್ | ತಟ್ಟನೆ ತದ್ದನುಜನಾಧನತಿಕೋಪದೊಳಂ || ಬಿಟ್ಟು ನಡೆ ಕಣನಂ ಕ | ಯೋಟ್ಟುಂ ನೀನಳಿಯೆನೇಡವೆಂದಾರ್ದ್ದೆಚ್ಛಂ || ೭೯ || ಇಸಲಂಬಂ ಕತ್ತರಿಸುತೆ || ನಸುನಗುತಂ ರಾಮನೆಂದನೆಲವೊ ದನುಜನೇ || ಅಸಮಸಮರ್ಧ೦ ನಿನಗಾ | ಬಿಸಜಾಸನದತ್ತವರದ ಬಲ್ಮಯದಿರ್ಕ್ಕು೦ | ೮ಂ || ಎಂದೆನುತಂ ರಾಮಂ ಶರ | ಮೊಂದಂ ಬರಸೆಳೆದು ಪೂಡಿ ಪೂಣ್ಣೆ ಚುಂ ಬ | ಲ್ಪಿಂದಂ ತರಿತರಿದೊಟ್ಟಿದ | ನಂದಾ ದಶಶಿರನ ತಲೆಗಳಂ ಚೆಚ್ಚರದಿಂ || ೮೧ # ನೂರೊಂದು ಬಾರಿ ತಲೆಗಳ | ನೇರುಂಗೊಳಿಸಿದೊಡೆ ಮುನ್ನಿನಂತಿರೆ ಕಂಡುಂ |
ಪುಟ:ಹನುಮದ್ದ್ರಾಮಾಯಣಂ.djvu/೨೬೭
ಗೋಚರ