ಪುಟ:ಹನುಮದ್ದ್ರಾಮಾಯಣಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ಸಾರಿ ಮರಣವೆಂದೆನು | ತಾ ರಿಸಿ ತಾಂ ಪೇಳ ಕತದೆ ಬರಲಮ್ಮನವಂ {{ ೯೦ ಮುನಿನಾಥನ ಕೃಪೆಯಿಂದಂ | ತನುಮಾತ್ರಂ ಜೀವಿಸಿರ್ಪೆನೆನ್ನಂ ನೀಂ ವಾ || ವನವಿಗ್ರಹ ಪಾಲಿಪುದೆಂ || ದೆನುತಂ ರವಿಸೂನು ರಾಮನಂಘಿಗೆ ಮಣಿದಂ ||೯೧|| ಪದಕೆರಗಿದ ಶಾಖಾಮೃಗ | ದಧಿಪತಿಯಂ ಸಂತವಿಟ್ಟು ಸೀತಾನಾಥಂ || ಬೆದರದಿರಿಂದ್ರಾತ್ಮಜನಂ | ಸದೆವೆಂ ಶರಮೊಂದರಿಂದಮಿಾಕ್ಷಿಪುದೆಂದಂ | ೯೨ | ತ್ರಿದಶೇಶಾತ್ಮಜನಂ ಕೊ | ಲ್ಕುದು ನಿಶ್ಚಯವಾದೊಡೀವುದಭಯಮನೆನಗಂ || ಹೃದಯಂ ಸಂಚಲಿಪುದು ನೀಂ | ಸದಮಲ ದಯೆಗೆಯ್ಯವೇಳು ಮೆಂದಂ ರವಿಜಂ || ೯೩ # ರವಿಜನ ನುಡಿಗೇಳುಂ ರಾ | ಘವನತಿಸಂತೋಷಚಿತ್ತನಾಗಿ ಪವನಸಂ || ಭವನಂ ನೋಡಲ್ಲಾತಂ || ಜವದಿಂದಂ ಶಿಖಿಯನೈದೆ ಹುತಿಗೊಳಿಯಿಸಿದಂ | ೯೪ ! ಹನುಮಂತನದೇಂ ಪ್ರಾಜ್ಞನೊ | ಮನದಿಂಗಿತಮಿಂತು ತಿಳಿಯೆ ಚಿತ್ರಮೆನುತ್ತಂ | ಬಿನದದೆ ವಾನರರಿರೆ ರವಿ | ತನಯಂಗಿಂತೆಂದನಗ್ನಿಸಾಕ್ಷಿಯೋಳರಸಂ | ೯೫ ಸುರಪನ ಸುತನಂ ಕೊಂದೀ | ಪುರಮಂ ನಿನಗಿತ್ತು ಪೊರೆವೆನಿದಕಾ ವೈಶ್ಯಾ || ನರನೇ ಸಾಕ್ಷಿಯೆನುತ್ತಂ | ಕರದಿನೆ ನಂಬುಗೆಯನಿತ್ತನಬ್ಬದಳಾಕ್ಷ | ೯೬ || ಹರಿಸದೆ ರವಿಪುತ್ರಂ ರಘು | ವರಗೆಂದಂ ದೇವ ನಿನಗೆ ಸಾಹಾಯ್ಕಗಳಂ | ವಿರಚಿಸಿ ತವಪದಸೇವಾ || ಪರನಾಗುವೆನಿದಕೆ ವಕ್ಕೆ ಸಾಕ್ಷಿಕನಪ್ಪ | ೯೭ |