ಪುಟ:ಹನುಮದ್ದ್ರಾಮಾಯಣಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಹನುಮದ್ರಾಮಾಯಣ. ಕರುಣಾಸಾಗರನಂ ಭಾ | ಸ್ಕರತೇಜೋಮಯನನೀಕ್ಷಿಸಿದನಾ ರವಿಜಂ | ೧೦೫ | ದಶಶತಮಸ್ತಕದಿಂದಂ || ದಶಶತಲೊಚನಗಳಿಂದೆ ದಶಶತಮುಖದಿಂ || ದಶಶತಬಾಹುಗಳಿ೦ ಮೇಣ್ | ದಶಶತಪಾದಂಗಳಿಂದಮೊಪ್ಪಿರೆ ಕಂಡಂ | ೧೦೬ } ಅರಿದರಖೇಟಕಡಮರುಕ | ಶರಕಾರ್ಮುಕಖಡ್ಡ ಪರಶುಮುಸಲಗದಾಮು | ರವಜ್ರಕುಂತಪಟ್ಟಿಶ | ಪರಿಘಾದ್ಯಾಯುಧದೆ ರಂಜಿಸುತ್ತಿರೆ ಕಂಡಂ || ೧೦೭ || ಶತಕೋಟಿರುದ್ರಬೊಮ್ಮರ್ | ಶತಕೋಟಿರಮೇಶರಿಂದ್ರಮುಖದಿಕೃತಿಗಳ್ | ಪ್ರಥಿತನವಗ್ರಹತಾರಾ | ತತಿಯಂಗೋಪಾಂಗದಲ್ಲಿ ಶೋಭಿಸೆ ಕಂಡಂ | li ೧೮ || ಸುರಸಿದ್ಧ ಸಾಧ್ಯ ಮನುಮುನಿ | ಗರುಡೋರಗಯಕ್ಷಖಚರಕಿನ್ನರವಿದ್ಯಾ || ಧರಗಂಧರ್ವಾತೃರಕಿಂ | ಪುರುಷಾದ್‌ ರೋಮಕೂಪಗಳೊಳಿರೆ ಕಂಡಂ || ೧೦೯ || ಸೋಮರವಿದ್ಯುತಿಹೋತ್ರ || ಸೈಮಮೆ ಖನಿಯಾಗಿ ತೋರುತಿರ್ಪ್ಪದೊ ಬಳಿಕಂ || ತಾಮಸರಾಜಸಸಾತ್ವಿಕ | ಧಾಮವೊ ತಾನೆಂಬ ಪರಿಯೊಳೆಸೆಯಲ್ಕಂಡಂ!! ೧೦ | .ರವಿಶಶಿಶಿಖಿಗಳನೇಕಂ | ಭುವನಂಗಳನೇಕಮನಿಲವಸುಗಳನೇಕಂ || ದಿವವೃಕಂಗಳನೇಕಮು | ಮವಿರಳಮೃಗಪಕ್ಷಿನಿಚಯಮೆಸೆದಿರೆ ಕಂಡಂ || ೧ || ನಾನಾವರ್ಣಗಳಿಂದಂ | ನಾನಾಭೂಷಂಗಳಿಂದಮದ್ಭುತವೆನಿಸಲ್ | ನಾನಾರೂಪಂ ಧರಿಸುತೆ | ನಾನಾರೀತಿಯೋಳೆ ರಾಜಿಸುತ್ತಿರೆ ಕಂಡಂ. | ೫೨ ||