ಪುಟ:ಹನುಮದ್ದ್ರಾಮಾಯಣಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಶ್ವಾಸ. ಮಿರುಗುವ ದಂಡಕಮಂಡಲು | ಪರಿಶೋಭಿಸುವಕ್ಷಮಾಲೆಗಳನಾಂತುಂ ಭೂ || ವರನೆಲೆವನೆಗೆಂದಂ | ಕರಮೊಪ್ಪುವ ಜಟಿಲನಾಗಿ ಸಾಯಾಹ್ನದೊಳಂ || ೧೨೦ | ಜತೆಯಿಾತನೆಂದು ಸೀತಾ ! ಸತಿಯವನಂ ಭಕ್ತಿಯಿಂದ ಪೂಜಿಸಿ ನಮಿಸ || ಅತಿಸಂತೋಷದ ದಾನವ ! ಪತಿರಾವಣನೆಂದನಬ್ಬಪತ್ರಾಂಬಕೆಯೂಲ್ 1 ೧೨n 11, ಆವನ ಸತಿ ನೀಂ ನಿನ | ಗಾವಂ ಪಿತನಿಲ್ಲಿ ಬಂದ ಕಾರಣಮೇಂ ರಾ || ಜೀವಾನನೆ ಪೇಳೆಂದಾ | ರಾವಣಮುನಿ ಕೇಳೆ ಪೇಚ್ಚಳವನಿಜೆಯಾಗಳ | ೧೨೨ || ಜನಕಜೆ ತಾನಿನವಂಶದ || ಜನಪತಿದಶರಧನ ಪುತ್ರವಧುವೆಂ ಕೇಳಾ || ತನ ಸಹಜಾತಂ ಲಕ್ಷಣ | ನೆನಗಾಯ್ಕವರೊಡನೆ ವಿಪಿನವಾಸವಿದೆಂದಳ್ H ೧೨೩ !! ಅಹಹ ವಿವೇಕಮದಾದುದು | ಮಹಿಯರಸನ ತನುಜೆಯಾಗಿ ವಿಪಿನದೊಳೊರ್ವಳ್ || ಸುಹಿತಮೆ ಬಾಳ್ಳುದು ಪಾಣಿ | ಗ್ರಹಣಂಗೆಯಾ ತನಾರೋ ಶಿವಶಿವ ಎಂದಂ { ೧೨೪ 31, ಈ ವಿಪಿನವಾಸಮೇತಕೆ ! ದೇವರ್ಕಳ ಸತಿಯರೆದೆ ನಿರತಂ ನಿನ್ನಂ !! ಸೇವಿಪ ತೆರನಂ ಮಾಳ್ಳೆಂ | ರಾವಣನಂ ಸಕಲಲೋಕನಾಯಕಪತಿಯೆಂ }] ೧೨೫ || ಶಶಿಮುಖಿ ನೋಡೆಂದೆನುತಂ | ದಶವದನಂ ನಿಜಶರೀರಮಂ ತೋರ್ದಂತಾ || ರಸೆವೆರಸು ಕಿತ್ತು ಸತಿಯಂ | ಮಿಸುವ ಮಹಾರಥವನೇರಿಸಿದನಾ ಕ್ಷಣದೊಳ್ || ೧೨೬ !! ಬಲೆಯೊಳ್ಳಿಲಿದ ಮಿಗದೊ | ೪ಳಲ್ಲು ಬಾಯಾರಿ ತಲ್ಲಣಂಗೂಂಡಾಗಳ್ ||