ಪುಟ:ಹನುಮದ್ದ್ರಾಮಾಯಣಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಹನುಮದ್ರಾಮಾಯಣ. ನೆಲನಣುಗಿಯಳ್ಳಿ ಕಡುಪಂ ! ಬಲಿಸಿದಳೇವೇಳ್ವೆನವಳ ದುಃಖೋನ್ನತಿಯಂ || ೧೨೭ !! ಕೊಣಸೇತಕೆ ಬಂದುದೊ ದಿನ | ಮಣಿಕುಲಜರನೇಕೆ ಕಳಿಸಿದೆನೊ ಬೆಂಬಳಿಯೊಳ್ || ಕುಣಪಾಶಿ ನಿರಯದಿರವಂ || ಗಣಿಸದೆ ಕೊಂಡುಯ್ಯನೆನ್ನನಿದಕೇಗೆಯೊಂ | ೧೨೮ | ಹಾ ರಾಮಾ ಹಾ ಲಕ್ಷ್ಮಣ | ಹಾ ರಘುವರ ಕಾವುದೆಂದು ಹಂಬಲಿಸುವ ಸೀ || ತಾರಮಣಿಯನಾ ದನುಜಂ | ಭೋರನೆ ಕೊಂಡುಯ್ಯುತಿರ್ದ್ದನಭಾದ್ವದೊಳಂ || ೧೨೯ | ತರುಬಿದನಾ ಖಗಪತಿಯಂ | ತರುಬುತೆ ಶರನಿಧಿಯನೈದೆ ದಾಂಟುತೆ ಲಂಕಾ | ಪುರಮಂ ಸಾರ್ದು ಭರದಿಂ | ಪರಿಶೋಭಿಸುತಿರ್ಪಶೋಕವನಕೆಳಂದಂ | ೧೩೦ | ಮಲರಹಿತಶಿಂಶಪದ್ರುಮ | ತಲದೊಳ್ಳೆಳಗಿಳಿಪಿ ಸೀತೆಯಂ ದನುಜೇಂದ್ರಂ || ಬಲಭರಿತರಪ್ಪ ದನುಜಾ | ಬಲೆಯರ್ಗo ಕಾವುದೆಂದು ಪೇಳುಂ ಬಂದಂ || ೧೩೧ || ಶ್ರೀರಾಮರಾಮನೆಂದೆನು | ತಾರಾಮದೊಳವನಿಳಾತೆ ನೆನೆನೆನೆದಿರ್ದ್ದಳ್ || ಭೂರಮಣರಿರ್ದ್ದರಿತ್ತಲ್ | ಸೂರತನೂಭವನ ಗಿರಿಯೊಳೆಂದಂ ಸೂತಂ || ೧೨ || -+-++-+-+-