88 ಹನುಮದ್ರಾಮಾಯಣ. ವಿದರಬಲೆಯರೊಳ್ ಗಣಿಕಾ | ಸದನಗಳೊಳ್ ಭರದೊಳರಸಿದಂ ಭೂಮಿಜೆಯಂ | ೩೭ || ಕರುಮಾಡಗಳೊಳ್ ಚಾಮಿಾ | ಕರಪರ್ಯ೦ಕದೆಡೆಗೆ ನೂತನವಿಟರಂ || ಕರೆದು ಕಲೆಯಂ ಕಲಿಸುತೆ | ಕರಮೊಪ್ಪುವ ವಾರವನಿತೆಯರೊಳೀಕ್ಷಿಸಿದಂ [ ೩೮ | ಇನಿನುಡಿಯೋರ್ವನೊಳಂ ಮೇ | ಣಿನಿತುಂ ಮುದಮೊರ್ವನಲ್ಲಿ ಕಿನಿಸೊರ್ವನೊಳಂ || ಮನಮೊರ್ವನೊಳಿದ್ದು ೯೦ ಸು | ಮನೆಯೋರ್ವನನೀಕ್ಷಿಸಬಲೆಯರೊಳೀಕ್ಷಿಸಿದಂ ||೩೯ | ಪೊಳೆವೆಳಜವ್ವನೆಯರ ಬ | ಲೋಲೆಯರ ಮಾತಂಗಗಮನೆಯರ ಮಧುಕರಕುಂ || ತಳೆಯರ ಜಳರುಹನಿಭಕರ | ತಳೆಯರ ತಿಂತಿಣಿಯೊಳರಸಿದ ಧರಣಿಜೆಯಂ | ೪೦ || ಶುಕಮಂ ನುಡಿಸುತೆ ವಿಮಲಾಂ | ಶುಕಮಂ ಸಮ್ಪಡುತೆ ಮುದ್ದಿಸುತ್ತಂ ನಿಜಬಾ | ಲಕರಂ ಮುಂಗುರುಳಂ ಮೃದು | ಲಕರದೆ ನೇವರಿಸ ಲಲನೆಯರೊಳೀಕ್ಷಿಸಿದಂ || ೪೧ | ಅಲ್ಲಿಂ ತಳರ್ದುಂ ಹನುಮಂ || ಮೆಲ್ಲನೆ ವೈಶ್ಯಾಲಯಂಗಳಂ ಚರಿಸುತ್ತುಂ || ವಲ್ಲಭನರಸಿಯನರಸುತೆ || ನಿಲ್ಲದೆ ಭೂಭುಜರ ಕೇರಿಯಂ ಸಾರ್ಧ್ವನಣಂ || ೪೨ || ಮಾನಿತಮಹಿಯಧಿನಾಥರ | ಮಾನಿನಿಯರೊಳರಸಿ ಕಾಣದಂಜನೆಯಣುಗಂ || ತಾನಾಲೋಚಿಸಿ ವಿಪ್ರವಿ | ತಾನದ ನಿಳಯಗಳನೈದೆ ನೋಡುತೆ ನಡೆದಂ || ೪೩ | ಅಸುರರನುನ್ನತಹರ್ಮ | ಪ್ರಸರದ ಮಣಿವೆಳಗಿನಿಂದ ನಡೆನೋಡುತ್ತುಂ || ಸಸಿನೆ ನಿರೀಕ್ಷಿಸಲುದ್ಯೋ !.. ಗಿಸಿ ಪೊಕ್ಕಂ ರಾಜವೀಧಿಗಳೊಳನಿಲಸುತಂ | ೪೪ ||
ಪುಟ:ಹನುಮದ್ದ್ರಾಮಾಯಣಂ.djvu/೯೬
ಗೋಚರ