ಪುಟ:ಹಳ್ಳಿಯ ಚಿತ್ರಗಳು.djvu/೨೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಹಳ್ಳಿಯ ಚಿತ್ರಗಳು

ಕೊಡುತ್ತೇನೆ” ಎನ್ನುತ್ತಿದ್ದಳು. ಇಂಗ್ಲೀಷ್ ತಿಳಿಯದ ಹಳ್ಳಿಯವರು, “ಹುಡುಗನ ತಲೆ ಒಡೆದುದಲ್ಲದೆ ಉಪನ್ಯಾಸಕ್ಕೆ ಬೇರೆ ಪ್ರಾರಂಭಿಸಿದ್ದಾಳೆ” ಎಂದರು. ಡೈವರನು ಹಳ್ಳಿಯವರನ್ನು ಕುರಿತು,

“ ದೊರೆಸಾನಿಯು ಹೇಳಿದುದು ಗೊತ್ತಾಯಿತೆ? ಗಾಡಿಯನ್ನು ಅವರೇ ನಡೆಸುತ್ತಿದ್ದರು. ಆದರೆ ತಪ್ಪು ಅವರದಲ್ಲ. ನಿಮ್ಮ ಹುಡುಗನದೇ, ಆದರೆ ಏನೂ ಪೆಟ್ಟಾಗಿಲ್ಲ. ದೊರೆಸಾನಿಯು ಬಹಳ ಒಳ್ಳೆಯವಳು. ನಿಮಗೆ ಸಹಾಯ ಮಾಡಿಸುತ್ತೇನೆ” ಎನ್ನುತ್ತಿದ್ದನು. ಲೇಡಿಗೆ ಕನ್ನಡ ಬಾರದು. ಅವಳು ಡೈವರನನ್ನು ಇಂಗ್ಲೀಷಿನಲ್ಲಿ ಏನು ಹೇಳಿದೆ ಅವರಿಗೆ” ಎಂದಳು. ಡ್ರೈವರನು “ಒಡತಿಯೇ ನಾನು ಗಾಡಿಯನ್ನು ನಡೆಸುತ್ತಲಿದ್ದೆ. ಆದರೆ ತಪ್ಪು ನನ್ನದಲ್ಲ. ನಿಮ್ಮ ಹುಡುಗನದು. ದೊರೆಸಾನಿಯು ಬಹಳ ಒಳ್ಳೆ ಯವಳು. ಬಹುಮಾನ ಮಾಡುತ್ತಾಳೆ. ಹೆದರಬೇಡಿ ಎಂದೆ” ಎಂದನು. ಲೇಡಿಯು ಸಮಾಧಾನದಿಂದ “ರೈಟೊ, ಯು ಆರ್ ಎ ಗುಡ್ ಚಾಪ್" (ನೀನು ಬಹಳ ಒಳ್ಳೆಯ ಹುಡುಗ) ಎಂದಳು. ನಾನು ಡೈವರನನ್ನು ಕುರಿತು “ಏನಯ್ಯ ಈ ನಾಟಕ” ಎಂದೆ. ಅವನು “ಹೊಟ್ಟೆಯ ಪಾಡಾಗಬೇಕಲ್ಲ ಸ್ವಾಮಿ, ಏನಾದರೂ ಮಾಡಲೇ ಬೇಕು” ಎಂದ. ಹುಡುಗನ ತಂದೆಯು ಸ್ವಲ್ಪ ಹಣದಿಂದ ಸಮಾಧಾನವನ್ನು ಹೊಂದಿ, ಲೇಡಿಗೆ ಉದ್ದವಾದ ಒಂದು ಸಲಾಮನ್ನು ಹಾಕಿ ಹೊರಟುಹೋದ. ನಾವೂ ನಮ್ಮ ದಾರಿ ಹಿಡಿದೆವು. ಆದರೆ ನಮ್ಮ ದುರದೃಷ್ಟವು ಇನ್ನೂ ಪೂರ್ಣವಾಗಿರಲಿಲ್ಲ.

ಮೋಟಾರಿಗೆ ನೀರು ಬೇಕಿತ್ತು, ಪೆಟ್ರೋಲಿನ ಖಾಲಿ ಡಬ್ಬದಲ್ಲಿ ನೀರನ್ನು ತುಂಬುವುದನ್ನು ಕ್ಲೀನರನು ಮರೆತುಬಿಟ್ಟಿದ್ದನು. ಇದ್ದಕ್ಕಿದ್ದಂತೆ ಗಾಡಿಯನ್ನು ನಿಲ್ಲಿಸಿದುದಾಯಿತು. ಎರಡು ಮೈಲು ಸುತ್ತ ಎಲ್ಲೂ ನೀರಿರಲಿಲ್ಲ. ಕ್ಲೀನರನು ಟಿನ್ನನ್ನು ತೆಗೆದುಕೊಂಡು ಆಮೆಯ ನಡಿಗೆಯಲ್ಲಿ ನೀರಿಗೆ ಹೋದನು. ಅವನು ಹೋಗಿ ಬರುವುದಕ್ಕೆ ೧ ಗಂಟೆ ಹಿಡಿಯಿತು. ದೇವರ ದಯದಿಂದ ಆ ವೇಳೆಗೆ ಬಸ್ಸಿನ ಮತ್ತಾವ ಭಾಗವೂ ಕೆಡಲಿಲ್ಲ.

ಮಧ್ಯಾಹ್ನ ೩ ಘಂಟೆಗೆ ನಮ್ಮ ಭಾವನವರ ಊರನ್ನು ತಲಪಿದೆ. ಆದರೆ ೮ ದಿವಸ ಮುಂಚೆಯೇ ಅವರು ಹೊನ್ನಹಳ್ಳಿಗೆ ಹೊರಟುಹೋಗಿದ್ದರೆಂದು