Father, father, mercy take
I shall Verses never make.
ತಂದೆಯೆ ತಂದೆಯೆ ತೋರಿಸು ಕರುಣೆಯ
ಮುಂದಕೆ ಎಂದಿಗು ಮಾಡೆನು ಕವಿತೆಯ.
ಎಂದು ಕವಿತೆಯಲ್ಲಿಯೇ ಗಾಬರಿಯಿಂದ ಪ್ರಾರ್ಥಿಸಿದನಂತೆ. ಅವರ ತಂದೆಯು ಇವನನ್ನು ಇನ್ನು ಸರಿಮಾಡುವುದಕ್ಕಾಗುವುದಿಲ್ಲ ಎಂಬುದಾಗಿ ಬಿಟ್ಟು ಬಿಟ್ಟರಂತೆ. ಹಾಗೆಯೇ ಜೋಡಿದಾರರೂ ಮಗನನ್ನು ಹೊಡೆಯದೆ ನೀನು ಯಾವತ್ತಾದರೂ ನೀರಿನಲ್ಲಿಯೇ ಸಾಯುತ್ತೀಯೆ ಖಂಡಿತ, ಎಂದು ಹೇಳಿ ಸುಮ್ಮನಾದರು.
೨. ಕಾಮನ ಹಬ್ಬದ ವಿನೋದ
ಕಾಮನ ಹಬ್ಬದ ದಿವಸ ಬಂದಿತು. ಊರ ಹೊರಗಿನ ಬೈಲಿನಲ್ಲಿ ತೋಟಗಳಿಂದ ಬೇಕಾದಂತೆ ಒಣಗಿದ್ದ ಗರಿಗಳನ್ನು ಆರಿಸಿ ತಂದು ಶೇಖರಿಸಿದ್ದರು. ರಾತ್ರಿ ಹತ್ತು ಗಂಟೆಗೆ ಆ ದೊಡ್ಡ ರಾಶಿಗೆ ಬೆಂಕಿಯನ್ನು ಹತ್ತಿಸಿ ವಿನೋದವನ್ನು ನೋಡಬೇಕೆಂದು ಹುಡುಗರೆಲ್ಲರೂ ಯೋಚಿಸಿದ್ದರು. ಸಂಧ್ಯಾಕಾಲ ಸುಮಾರು ೭ ಗಂಟೆ ಇದ್ದಿರಬಹುದು. ಜಗತ್ತಿನ ಮೇಲೆ ಕತ್ತಲೆಯ ಛಾಯೆಯು ಆಗತಾನೆ ಬೀಳುತ್ತಿದ್ದಿತು. ಕಷ್ಟಪಟ್ಟು ಗರಿಗಳನ್ನು ಶೇಖರಿಸಿದ್ದವರೆಲ್ಲಾ ಈ ನೋಟವನ್ನು ವಿರಾಮವಾಗಿ ಬಂದು ನೋಡುವುದಕ್ಕೋಸ್ಕರ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬರಲು ಮನೆಗಳಿಗೆ ಹೋಗಿದ್ದರು. ಜೋಡಿದಾರನು ಗರಿಗಳ ರಾಶಿ ಎಷ್ಟಾಗಿದೆಯೋ ನೋಡಿಕೊಂಡು ಬರೋಣವೆಂದು ಅವುಗಳನ್ನು ಶೇಖರಿಸಿದ್ದ ಬೈಲಿಗೆ ಹೋದನು. ಹೋಗುವಾಗ ರಾತ್ರಿ ೧೦ ಗಂಟೆಗೆ ಬೇಕಾಗಬಹುದೆಂದು ಯೋಚಿಸಿ, ಜೇಬಿನಲ್ಲಿ ಒಂದು ಬೆಂಕಿಯ ಪೊಟ್ಣವನ್ನು ಹಾಕಿಕೊಂಡು ಹೋದನು. ಬೆಟ್ಟದಂತೆ ರಾಶಿಯಾಗಿ ಬಿದ್ದಿದ್ದ ಒಣಗಿದ್ದ ತರಗನ್ನು ನೋಡಿ ಜೋಡಿದಾರನಿಗೆ ಅದನ್ನು ಹತ್ತಿಸಿಬಿಡಬೇಕೆಂದು ಆಸೆಯಾಯಿತು. ಜೇಬಿನೊಳಕ್ಕೆ ಕೈ ಹೋಯಿತು; ಬೆಂಕಿಯ ಪೊಟ್ಣ ಹೊರಕ್ಕೆ ಬಂತು. ಒಂದು ನಿಮಿಷದೊಳಗೆ ಉರಿಯು ಸಹಸ್ರಾರು ನಾಲಗೆಯಿಂದ